ಕೇಂದ್ರ ಸರ್ಕಾರ ಪಡಿತರದಾರರಿಗೆ ಗುಡ್‌ನ್ಯೂಸ್ ನೀಡಲು ಮುಂದಾಗಿದೆ. ಇಷ್ಟು ದಿನ ಪಡಿತರದಲ್ಲಿ ಅಕ್ಕಿ, ಗೋಧಿ ಸಿಗುತ್ತಿತ್ತು.
ಸದ್ಯ ಅಕ್ಕಿಯ ಜೊತೆ 9 ಅಗತ್ಯ ವಸ್ತುಗಳನ್ನು ಪಡಿತರದಲ್ಲಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದರ ಪ್ರಕಾರ ಈ ಪಟ್ಟಿಯಲ್ಲಿ ಸೋಯಾಬೀನ್, ಸಾಸಿವೆ, ಜೀರಿಗೆ, ಗೋಧಿ ಹಿಟ್ಟು, ಎಣ್ಣೆ ಸೇರಿದಂತೆ ಇತರೆ ವಸ್ತುಗಳಿರಲಿವೆ ಎನ್ನಲಾಗಿದೆ. ಆದರೆ ಈ ಕುರಿತು ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.