ADVERTISEMENT

ರೇಷನ್‌ ಕಾರ್ಡ್ – ಆಧಾರ್‌ ಕಾರ್ಡ್‌ ಲಿಂಕ್ ಮಾಡಲು ಈ ದಾಖಲೆ ಕಡ್ಡಾಯ

(ration-aadhar card) ಆಧಾರ್ ಮತ್ತು ಪಡಿತರ ಚೀಟಿ ಲಿಂಕ್ ಮಾಡುವ ಗಡುವನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದ್ದು, ಲಿಂಕ್ ಮಾಡಲು ಯಾವುದೆಲ್ಲಾ ದಾಖಲೆಗಳು ಬೇಕು, ಹೇಗೆ ಲಿಂಕ್ ಮಾಡುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಇದೀಗ ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ. ಹಾಗಾದರೆ ಲಿಂಕ್ ಮಾಡಲು ಯಾವುದೆಲ್ಲಾ ದಾಖಲೆಗಳು ಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಈ ದಾಖಲೆಗಳು ಕಡ್ಡಾಯ:
* ಪಡಿತರ ಚೀಟಿ
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್
* ಕುಟುಂಬದ ಯಜಮಾನನ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಕುಟುಂಬದ ಯಜಮಾನನ ಎರಡು ಪಾಸ್ ಪೋರ್ಟ್ ಅಳತೆಯ ಪೋಟೋ

ಪಡಿತರ ಚೀಟಿ ಮತ್ತು ಆಧಾರ್ ಅನ್ನು ಆನ್ ಲೈನ್ ನಲ್ಲಿ ಈ ರೀತಿ ಲಿಂಕ್ ಮಾಡಿ
* ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್ ಗೆ ಭೇಟಿ ನೀಡಿ.
* ಸಕ್ರಿಯ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಆಯ್ಕೆ ಮಾಡಿ.
* ಪಡಿತರ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
* ಮುಂದುವರಿಯಿರಿ/ಸಲ್ಲಿಸಿ ಬಟನ್ ಆಯ್ಕೆ ಮಾಡಿ.
* ನಂತರ ಒಟಿಪಿಯನ್ನು ಸ್ವೀಕರಿಸುತ್ತೀರಿ.
* ಒಟಿಪಿಯನ್ನು ನಮೂದಿಸಿ, ಮತ್ತು ಅದಕ್ಕಾಗಿ ನಿಮ್ಮ ವಿನಂತಿಯನ್ನು ಈಗ ಸಲ್ಲಿಸಲಾಗಿದೆ.

Related Posts

Next Post

Leave a Reply

Your email address will not be published. Required fields are marked *

Recent Comments

Welcome Back!

Login to your account below

Retrieve your password

Please enter your username or email address to reset your password.