ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಟಲ್ ಸೇತುವೆ ದೇಶದ ಹೆಮ್ಮೆ, 10 ವರ್ಷದಲ್ಲಿ ಭಾರತದ ವೇಗವಾಗಿ ಬೆಳೆಯುತ್ತಿದೆ: ನಟಿ ರಶ್ಮಿಕಾ

On: May 15, 2024 4:11 PM
Follow Us:
---Advertisement---

ಬೆಂಗಳೂರು: ನ್ಯಾಷನಲ್ ಕ್ರಶ್ ಎಂದೆ ಪ್ರಸಿದ್ಧಿ ಪಡೆದ ಕರ್ನಾಟಕ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ‘ಅನಿಮಲ್’ ಸಿನಿಮಾ ಸಕ್ಸಸ್‌ ಬಳಿಕ ಹಿಂದಿ ಸಿನಿಮಾಗಳಲ್ಲಿ ಬ್ಯೂಸಿಯಾಗುವತ್ತ ಗಮನಹರಿಸಿದ್ದಾರೆ. ಹೀಗಾಗಿ ಅವರು ಆಗಾಗ ಮುಂಬೈಗೆ ಪ್ರಯಾಣಿಸುತ್ತಿರುತ್ತಾರೆ. ಇದೇ ಮಾರ್ಗದಲ್ಲಿರುವ ಬರುವ ‘ಅಟಲ್ ಟನಲ್ ಸೇತುವೆ’ ಬಗ್ಗೆ ಎಎನ್‌ಐ ಜೊತೆಗೆ ಮಾತನಾಡಿದ ರಶ್ಮಿಕಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಮುಂಬೈನಿಂದ-ನವಿ ಮುಂಬೈಗೆ ಪ್ರಯಾಣಕ್ಕೆ ಸುಮಾರು ಎರಡು ಗಂಟೆ ಪ್ರಯಾಣದ ಸಮಯ ಹಿಡಿಯುತ್ತಿತ್ತು. ಈ ಅಟಲ್ ಸೇತುವೆ ಆ ಪ್ರಯಾಣವನ್ನು ಕೇವಲ 20 ನಿಮಿಷಕ್ಕೆ ಇಳಿಸಿದೆ. ಇದು ಸಂತೋಷದ ಸಂಗತಿ. ಭಾರತ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸುತ್ತಿದೆ.

ಭಾರತ ವೇಗವಾಗಿ ಬೆಳೆಯುತ್ತಿರುವ ದೇಶ ಅಟಲ್ ಸೇತುವೆಯು ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈಗೆ ಸಂಪರ್ಕ ಸೇತುವೆಯಾಗಿದೆ. ವಿವಿಧ ನಗರಗಳ ಸಂಪರ್ಕವನ್ನು ಇದು ಬಹಳಸಷ್ಟು ಸರಳ ಮಾಡಿದೆ. ಇದರೊಂದಿಗೆ ದೇಶದಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗುವುದನ್ನು ನೋಡಿದರೆ ಹೆಮ್ಮೆ ಅನ್ನಿಸುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.

ಭಾರತದಿಂದ ಸಾಧ್ಯವಿಲ್ಲ ಎಂದು ಹೇಳಾಗುವುದಿಲ್ಲ. ವೇಗವಾಗಿ ಬೆಳೆಯುತ್ತಿರುವ ಭಾರತವು ಏಳೇ ವರ್ಷಗಳಲ್ಲಿ22 ಕಿಲೋ ಮೀಟರ್‌ ಉದ್ದದ ‘ಅಟಲ್ ಸೇತು’ ನಿರ್ಮಿಸಿ ಸಾಧಿಸಿ ತೋರಿಸಿದೆ.  ಹೆದ್ದಾರಿ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ದೇಶವು ವೇಗವಾಗಿ ಬೆಳೆಯುತ್ತಿದೆ. ಅನೇಕ ಸ್ಮಾರ್ಟ್‌ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಲ್ಲಿ ಅವರು ಶ್ಲಾಘಿಸಿದರು.

Join WhatsApp

Join Now

Join Telegram

Join Now

Leave a Comment