
ನವದೆಹಲಿ: ನಟ ರಣ್‌ವೀರ್ ಸಿಂಗ್ ಅಭಿನಯದ ಬ್ಲಾಕ್‌ಬಸ್ಟರ್ ಥ್ರಿಲ್ಲರ್ ಸಿನಿಮಾ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಸಂಗೀತವು 2027ರ ಗ್ರಾಮಿ ಪ್ರಶಸ್ತಿಗಳ (Grammy Awards) ಅಂತಿಮ ನಾಮನಿರ್ದೇಶನದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಚಿತ್ರದ ನಿರ್ಮಾಪಕರು ವಿವಿಧ ವಿಭಾಗಗಳ ಅಡಿಯಲ್ಲಿ ಒಟ್ಟು 8 ಹಾಡುಗಳನ್ನು ಕಳುಹಿಸಿದ್ದರೂ, ನವೆಂಬರ್ 16 ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಯಾವುದೇ ಹಾಡು ಆಯ್ಕೆಯಾಗಿಲ್ಲ.
ಶಾಶ್ವತ್ ಸಚ್‌ದೇವ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ಈ ಚಿತ್ರದ ಹಾಡುಗಳು ಭಾರತದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದವು. ‘ಫಿರ್ ಸೆ’, ‘ಜಾಯಿಯೇ ಸಜನಾ’, ‘ಜಾನ್ ಸೆ ಗುಜಾರ್ಟೆ ಹೈನ್’, ‘ಕನ್ಹೈಯ್ಯಾ’, ‘ಆರಿ ಆರಿ’ ಮತ್ತು ‘ಮನ್ ಅಟ್ಕೇಯಾ’ ಸೇರಿದಂತೆ ಪ್ರಮುಖ ವಿಭಾಗಗಳಿಗೆ ಹಾಡುಗಳನ್ನು ಸಲ್ಲಿಸಲಾಗಿತ್ತು. ಆದರೂ ಅಂತಿಮ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ, ತಮಿಳಿನ ‘ವರುವಾಯ್’ ಹಾಡು ‘ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್’ ವಿಭಾಗದಲ್ಲಿ ನಾಮನಿರ್ದೇಶನಗೊಂಡು ಹೆಮ್ಮೆ ತಂದಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ವಿಶ್ವಾದ್ಯಂತ 1,363 ಕೋಟಿ ರೂ.ಕೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
8 ಹಾಡುಗಳ ಸಲ್ಲಿಕೆ: ಗ್ರಾಮಿ ಪ್ರಶಸ್ತಿಗಾಗಿ ಧುರಂಧರ್ ಚಿತ್ರದ 8 ಟ್ರ್ಯಾಕ್‌ಗಳನ್ನು ವಿಭಿನ್ನ ವಿಭಾಗಗಳಡಿ ಕಳುಹಿಸಲಾಗಿತ್ತು, ಆದರೆ ಯಾವುದು ಕೂಡ ಫೈನಲ್ ನಾಮಿನೇಷನ್‌ಗೆ ಆಯ್ಕೆಯಾಗಲಿಲ್ಲ.
ಬ್ರಿಟಿಷ್ ಗಾಯಕಿ ರೇ ಮುಂಚೂಣಿ: 2027ರ ಗ್ರಾಮಿ ಪ್ರಶಸ್ತಿ ಪಟ್ಟಿಯಲ್ಲಿ ಬ್ರಿಟಿಷ್ ಗಾಯಕಿ ರೇ 11 ನಾಮನಿರ್ದೇಶನಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಬಿಯಾನ್ಸ್ ಐತಿಹಾಸಿಕ ದಾಖಲೆ: ಖ್ಯಾತ ಗಾಯಕಿ ಬಿಯಾನ್ಸ್ ತಮ್ಮ ವೃತ್ತಿಜೀವನದಲ್ಲಿ 100 ಗ್ರಾಮಿ ನಾಮನಿರ್ದೇಶನಗಳನ್ನು ಪಡೆದ ಮೊಟ್ಟಮೊದಲ ಕಲಾವಿದೆ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.




