Home ದಾವಣಗೆರೆ ದಾವಣಗೆರೆಯಲ್ಲಿ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಸ್ಪರ್ಧೆ: ವಿಜೇತರಿಗೆ ಭರ್ಜರಿ ನಗದು ಬಹುಮಾನ!
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಸ್ಪರ್ಧೆ: ವಿಜೇತರಿಗೆ ಭರ್ಜರಿ ನಗದು ಬಹುಮಾನ!

Share
ದಾವಣಗೆರೆ
Share

ದಾವಣಗೆರೆ: ನಗರದ ವೃತ್ತಿ ರಂಗಭೂಮಿ ರಂಗಾಯಣವು “ವಿಶ್ವ ರಂಗಭೂಮಿ ದಿನಾಚರಣೆ” ಮತ್ತು “ರಾಷ್ಟ್ರೀಯ ವೃತ್ತಿ ರಂಗೋತ್ಸವ-26” ರ ಅಂಗವಾಗಿ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರ ಸ್ಪರ್ಧೆಯನ್ನು ಆಯೋಜಿಸಿದೆ.

ಮಾರ್ಚ್ 27, 2026 ರಂದು ಬೆಳಿಗ್ಗೆ 10:30ಕ್ಕೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಈ ಸ್ಪರ್ಧೆ ನಡೆಯಲಿದೆ. ನಾಟಕ ರಂಗದ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರಥಮ ಬಹುಮಾನವಾಗಿ 25,000 ರೂ., ದ್ವಿತೀಯ 15,000 ರೂ., ತೃತೀಯ 10,000 ರೂ. ಹಾಗೂ ಐವರಿಗೆ ತಲಾ 5,000 ರೂ.ಗಳ ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಗಿದೆ.

ಸ್ಪರ್ಧೆಯ ಪ್ರಮುಖ ಅಂಶಗಳು:

ಸ್ಪರ್ಧೆಯ ಅವಧಿ ಗರಿಷ್ಠ 10 ನಿಮಿಷಗಳು.

ವೇಷಭೂಷಣ ಮತ್ತು ಸಂಗೀತ ವ್ಯವಸ್ಥೆಯನ್ನು ಸ್ಪರ್ಧಿಗಳೇ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಸಲು ಮಾರ್ಚ್ 20, 2026 ಕೊನೆಯ ದಿನಾಂಕವಾಗಿದೆ.

ಸ್ಪರ್ಧೆಯ ವಿವರಗಳು

  • ದಿನಾಂಕ: 27.03.2026 (ಶುಕ್ರವಾರ)

  • ಸಮಯ: ಬೆಳಿಗ್ಗೆ 10:30 ರಿಂದ

  • ಸ್ಥಳ: ದೃಶ್ಯಕಲಾ ಮಹಾವಿದ್ಯಾಲಯ, ವಿದ್ಯಾನಗರ ರಸ್ತೆ, ದಾವಣಗೆರೆ.

ಸ್ಪರ್ಧೆಯ ಪ್ರಮುಖ ನಿಯಮಗಳು

  1. ವಿಷಯ: ಕಡ್ಡಾಯವಾಗಿ ಪೌರಾಣಿಕ ನಾಟಕದ ಪ್ರಸಂಗವಾಗಿರಬೇಕು. ನಾಟಕಕಾರರು ಮತ್ತು ನಾಟಕದ ಹೆಸರನ್ನು ಅರ್ಜಿಯಲ್ಲಿ ತಿಳಿಸಬೇಕು.

  2. ಅವಧಿ: ಪ್ರದರ್ಶನಕ್ಕೆ ಗರಿಷ್ಠ 10 ನಿಮಿಷಗಳ ಕಾಲಾವಕಾಶವಿರುತ್ತದೆ.

  3. ಸಿದ್ಧತೆ: ಪಾತ್ರದ ವೇಷಭೂಷಣ, ಅಲಂಕಾರ ಮತ್ತು ಸಂಗೀತದ ವ್ಯವಸ್ಥೆಯನ್ನು ಸ್ಪರ್ಧಿಗಳೇ ಮಾಡಿಕೊಳ್ಳಬೇಕು.

  4. ಅರ್ಹತೆ: ಲಿಂಗ ಭೇದವಿಲ್ಲದೆ ಎಲ್ಲಾ ವಯೋಮಾನದ ಕಲಾವಿದರು ಭಾಗವಹಿಸಬಹುದು.

  5. ತೀರ್ಪು: ರಂಗಾಯಣದ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

  6. 18 ವರ್ಷ ಮೇಲ್ಪಟ್ಟವರಿಗೆ: ಈ ಸ್ಪರ್ಧೆ 18 ವರ್ಷ ಮೇಲ್ಟಟ್ಟವರಿಗೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಕಲಾವಿದರು ತಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಸ್ಪರ್ಧೆಯ ವಿವರಗಳನ್ನೊಳಗೊಂಡ ಲಿಖಿತ ಅರ್ಜಿಯನ್ನು ನಿರ್ದೇಶಕರಿಗೆ ಸಲ್ಲಿಸಬೇಕು.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.03.2026

ಕಚೇರಿ ವಿಳಾಸ: ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 35ಎ, ಮೊದಲನೇ ಮಹಡಿ, ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ, ದಾವಣಗೆರೆ – 577006. ದೂರವಾಣಿ: 93410-10712 ಸಂಖ್ಯೆಯನ್ನು ಸಂಪರ್ಕಿಸುವಂತೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮತ್ತು ವಿಶೇಷಾಧಿಕಾರಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *