SUDDIKSHANA KANNADA NEWS/ DAVANAGERE/DATE:14_08_2025
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ತೂಗುದೀಪ ಸೇರಿ ಏಳು ಮಂದಿಗೆ ನೀಡಿದ್ದ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸುತ್ತಿದ್ದಂತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪೋಸ್ಚ್ ಮಾಡಿದ್ದಾರೆ.
READ ALSO THIS STORY: BIG BREAKING: ಸುಪ್ರೀಂಕೋರ್ಟ್ ತೀರ್ಪು ಬರುತ್ತಿದ್ದಂತೆ ಗಳಗಳನೇ ಕಣ್ಣೀರು ಸುರಿಸಿದ ಪವಿತ್ರಾ ಗೌಡ!
ಮಾತ್ರವಲ್ಲ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪೋಸ್ಟ್ ಮಾಡುವ ಮೂಲಕ ಮತ್ತೆ ದರ್ಶನ್ ತೂಗುದೀಪ ಹಾಗೂ ಅವರ ಫ್ಯಾನ್ಸ್ ಗೆ ತಿರುಗೇಟು ನೀಡಿದ್ದಾರೆ.
ಸತ್ಯಕ್ಕೆ ಎಂದಿಗೂ ಜಯವಾಗಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿಗೆ ತಲೆ ಬಾಗಲೇಬೇಕು ಎಂದು ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂಬ ಪೋಸ್ಟ್ ಹಾಕಿದ ಬಳಿಕ ದರ್ಶನ್ ತೂಗುದೀಪ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಅಶ್ಲೀಲ, ಕೆಟ್ಟ ಸಂದೇಶವನ್ನು ರವಾನಿಸಿದ್ದರು. ಇದರ ವಿರುದ್ದ ರಮ್ಯಾ ದೂರು ಕೊಟ್ಟಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ದರ್ಶನ್ ತೂಗುದೀಪ ಫ್ಯಾನ್ಸ್ ಗೆ ಬಿಸಿ ಮುಟ್ಟಿಸಿದ್ದರು.
ರಮ್ಯಾ ತನಗಾದ ಅಪಮಾನದ ವಿರುದ್ಧ ಹೋರಾಟ ಮಾಡಿದ್ದರು. ಇವರಿಗೆ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟರು ಬೆಂಬಲ ವ್ಯಕ್ತಪಡಿಸಿದ್ದರು. ನಟಿ ರಮ್ಯಾ ಮತ್ತೆ ಪೋಸ್ಟ್ ಮಾಡಿ ದರ್ಶನ್ ಫ್ಯಾನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ರಮ್ಯಾ ಸ್ವಾಗತಿಸಿದ್ದಾರೆ.