Home ದಾವಣಗೆರೆ ದಾವಣಗೆರೆ ಅಭಿನವ ರೇಣುಕ ಮಂದಿರದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ: ಯಾರಿಗೆ ಯಾವ ಪ್ರಶಸ್ತಿ? ಸಂಪೂರ್ಣ ವಿವರ
ದಾವಣಗೆರೆಬೆಂಗಳೂರು

ದಾವಣಗೆರೆ ಅಭಿನವ ರೇಣುಕ ಮಂದಿರದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ: ಯಾರಿಗೆ ಯಾವ ಪ್ರಶಸ್ತಿ? ಸಂಪೂರ್ಣ ವಿವರ

Share
ರಂಭಾಪುರಿ
Share

ದಾವಣಗೆರೆ: ಶ್ರೀಮದ್ ವೀರಶೈವ ಸದ್ಬೋಧನಾ ಸಂಸ್ಥೆ ವತಿಯಿಂದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ 28ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾವೇಶವನ್ನು ಆ. 6 ರಿಂದ ಆ. 10 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದೆ.

ಆಗಸ್ಟ್ 6 ರಂದು ನಡೆಯುವ ಧರ್ಮ ಸಮಾವೇಶದಲ್ಲಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ದಿವ್ಯ ಸಾನಿಧ್ಯ, ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಮಳಲಿ ಸಂಸ್ಥಾನಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಲಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಥಣಿ ಎಸ್. ವೀರಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ, ಮಹಾಸಭಾ ಪದಾಧಿಕಾರಿಗಳಾದ ಅಣಬೇರು ರಾಜಣ್ಣ, ಎಸ್. ಕೆ. ವೀರಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಕೆ. ಚಮನ್ ಸಾಬ್ ಹಾಗೂ ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಲೆಕ್ಕಪರಿಶೋಧಕರಾದ ವೀರೇಂದ್ರ ಕುಮಾರ್ ಅವರಿಗೆ ‘ಲೆಕ್ಕಪರಿಶೋಧಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಆ.7 ರಂದು ನಡೆಯುವ ಧರ್ಮಸಭೆಯಲ್ಲಿ ರಂಭಾಪುರಿ ಜಗದ್ಗುರುಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಆವರಗೊಳ್ಳ-ದಾವಣಗೆರೆಯ ಶ್ರೀ ಸುಜ್ಞಾನಪ್ರಭು ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಉಪದೇಶ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಯಶವಂತರವ್ ಜಾಧವ್, ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್,ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಭಾಗವಹಿಸಲಿದ್ದಾರೆ. ಅಂದು ಖ್ಯಾತ ವಕೀಲರಾದ ಸಿ. ಸಂತೋಷ್ ಚನ್ನಬಸಪ್ಪ ಪಾವಟೆ ಅವರಿಗೆ ‘ನ್ಯಾಯ ದಾನ ವಾದ ಚತುರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೂ ‘ಗುರುಪಥ ದರ್ಶನ’ ಕೃತಿ ಬಿಡುಗಡೆಗೊಳ್ಳಲಿದೆ. 

ಆಗಸ್ಟ್ 8 ರಂದು ನಡೆಯುವ ಸಮಾವೇಶದಲ್ಲಿ ರಂಭಾಪುರಿ ಶ್ರೀಗಳ ದಿವ್ಯ ಸಾನಿಧ್ಯದೊಂದಿಗೆ ಗುಳೇದಗುಡ್ಡ ಅಗಸ್ತ್ಯಗಿರಿಯ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ರಾಣೆಬೆನ್ನೂರು ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ಟಿ.  ಶೇಖರ್, ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಿ.ಇ. ರಂಗಸ್ವಾಮಿ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಮುಖಂಡರಾದ ಹೆಚ್. ಎಸ್. ನಾಗರಾಜ್, ಎನ್. ಮಹಾಂತೇಶ್ ಭಾಗವಹಿಸಲಿದ್ದಾರೆ. ಇದೇ ವೇಳೆ ಸಂತೆಬೆನ್ನೂರಿನ ಉದ್ಯಮಿ ಜಾವಿದ್ ಸಾಬ್ ಅವರಿಗೆ ‘ವ್ಯವಹಾರ ಕಲಾ ಕೌಶಲ್ಯ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಆಗಸ್ಟ್ 9 ರಂದು ರಂಭಾಪುರಿ ಶ್ರೀಗಳ ಸಾನಿಧ್ಯದೊಂದಿಗೆ ಮರಿಯಮ್ಮನಹಳ್ಳಿಯ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಶಿರಸಂಗಿ ಕಾಡಸಿದ್ದೇಶ್ವರ ಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಎಸ್. ಎಸ್.  ಗಣೇಶ್, ಮಾಜಿ ಶಾಸಕ ಹೆಚ್. ಎಸ್.  ಶಿವಶಂಕರ್, ಬಿಜೆಪಿ ಜಿಲ್ಲಾ ಮುಖಂಡ ಲೋಕಿಕೆರೆ ನಾಗರಾಜ್, ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಮಾಜಿ ಮಹಾಪೌರ ಬಿ. ಜೆ. ಅಜಯ್ ಕುಮಾರ್ ಹಾಗೂ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಭಾಗವಹಿಸಲಿದ್ದಾರೆ. ಅಂದು ಅಂಗವಿಕಲ ಶಿಕ್ಷಕಿಯಾದ ಶೋಭಾ ಆರ್. ಅವರಿಗೆ ‘ಸಮಾಜ ಸೇವಾ ಚಂದ್ರಿಕೆ’ ಪ್ರಶಸ್ತಿ ಪ್ರದಾನ  ಮಾಡಲಾಗುವುದು.

ಆಗಸ್ಟ್ 10ರ ಸಮಾವೇಶದಲ್ಲಿ ರಂಭಾಪುರಿ ಜಗದ್ಗುರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹೊಸಹಳ್ಳಿ ಹಿರೇಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಪಂಚಗಂಗಾ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಉಪದೇಶ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಶಾಸಕರಾದ ಸಮರ್ಥ ಶಾಮನೂರು, ಶಿವಗಂಗಾ ಬಸವರಾಜ್, ಮಾಜಿ ಸಚೇತಕ ಡಾ. ಎ. ಹೆಚ್. ಶಿವಯೋಗಿಸ್ವಾಮಿ,  ಎನ್. ಜಿ. ಪುಟ್ಟ ಸ್ವಾಮಿ,  ಮಾಜಿ ಮೇಯರ್ ಎಸ್. ಟಿ. ವೀರೇಶ್, ಆಲೂರು ನಿಂಗರಾಜು, ಡಾ. ಎಸ್. ಆರ್. ನಸೀರ್ ಅಹಮದ್ ಭಾಗವಹಿಸಲಿದ್ದಾರೆ.

 ರಂಭಾಪುರಿ

ಅಂದು ಉದ್ಯಮಿ ಜಯಪ್ರಕಾಶ್ ಮಾಗಿ ಅವರಿಗೆ ‘ಶ್ರಮ ಸೇವಾ ಸಂಜೀವಿನಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles