ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Rajinikanth: ರಜಿನಿಕಾಂತ್, ಶಿವರಾಜ್ ಕುಮಾರ್ ನಟನೆಯ ಜೈಲರ್ ಆಡಿಯೋ ಲಾಂಚ್ ಡೇಟ್ ಫಿಕ್ಸ್: 15 ಸೆಕೆಂಡ್ ಗೇ ಪಾಸ್ ಸೋಲ್ಡ್ ಔಟ್, ಇದಪ್ಪಾ ಸೂಪರ್ ಸ್ಟಾರ್ ರಜಿನಿ ಕ್ರೇಜ್…!

On: July 24, 2023 5:52 PM
Follow Us:
Super Star Rajinikanth
---Advertisement---

SUDDIKSHANA KANNADA NEWS/ DAVANAGERE/ DATE: 24- 07-2023

ಸುದ್ದಿ ಕ್ಷಣ ಸ್ಪೆಷಲ್ ಡೆಸ್ಕ್:

ಬೆಂಗಳೂರು: ರಜಿನಿಕಾಂತ್ (Rajinikanth) . ವಿಶ್ವದ ಕೋಟ್ಯಾನುಕೋಟಿ ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಹಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರರಂಗದಲ್ಲಿ ಇಂದಿಗೂ ಸೂಪರ್ ಸ್ಟಾರ್ (Super Star) ಅಂತಾ ಕರೆಸಿಕೊಳ್ಳುವ ಏಕೈಕ ನಟ. ಬೇರೆ ಬೇರೆ ಭಾಷೆಗಳಲ್ಲಿ ಸೂಪರ್ ಸ್ಟಾರ್ ಗಳಿದ್ದರೂ, ಒನ್ ಅಂಡ್ ಒನ್ಲಿ ಸೂಪರ್ ಸ್ಟಾರ್ ಅದು ರಜಿನಿಕಾಂತ್ (Rajinikanth)ಮಾತ್ರ. ಅವರ ಚಿತ್ರ ಬಿಡುಗಡೆಯಾಗುತ್ತೆ ಅಂದರೆ ಎಲ್ಲಾ ಭಾಷೆಗಳ ಅಭಿಮಾನಿಗಳು ಎದುರುನೋಡುತ್ತಿರುತ್ತಾರೆ.

ಈಗ ಅತ್ಯಂತ ಕುತೂಹಲ ಕೆರಳಿಸಿರುವ, ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುವ ಜೈಲರ್ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವುದು ಮತ್ತೊಂದು ವಿಶೇಷ.

ಈ ಸುದ್ದಿಯನ್ನೂ ಓದಿ: 

Rajinikanth: ಸೂಪರ್ ಸ್ಟಾರ್ ರಜಿನಿಕಾಂತ್, ಶಿವಣ್ಣ ನಟನೆಯ ಜೈಲರ್ ಸಿನಿಮಾ ಹವಾ ಜೋರು: ಯಾವಾಗ ರಿಲೀಸ್ ಆಗ್ತದೆ, ಏನೆಲ್ಲಾ ಸ್ಪೆಷಾಲಿಟಿ ಇದೆ ಗೊತ್ತಾ…?

 

ದೇಶಾದ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಜೈಲರ್ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮಿಲ್ಕ್ ಬ್ಯೂಟಿ ತಮನ್ನಾ ಕುಣಿದು ಕುಪ್ಪಳಿಸಿರುವ ಕಾವಲಯ್ಯ ಹಾಡಂತೂ ಜನಪ್ರಿಯತೆಯ ಉತ್ತುಂಗಕ್ಕೆ ಏರಿದೆ. ರೀಲ್ಸ್ ಗಳಂತೂ ಲೆಕ್ಕಕ್ಕೇ ಇಲ್ಲ. ತಮನ್ನಾ ಭಾಟಿಯಾ ಸ್ವತಃ ಈ ಹಾಡಿಗೆ ರೀಲ್ಸ್ ಮಾಡಿರುವುದನ್ನು ನೋಡಿದರೆ ಈ ಹಾಡಿನ ಜನಪ್ರಿಯತೆಗೆ ಸಾಕ್ಷಿ ಎಂದರೆ ತಪ್ಪಾಗಲಿಕ್ಕಿಲ್ಲ.

Jailer

ಆಡಿಯೋ ಲಾಂಚ್ ಯಾವಾಗ…?

ರಜಿನಿಕಾಂತ್ (Rajinikanth) ಅಭಿನಯದ ‘ಜೈಲರ್’ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಆಗಸ್ಟ್ 10 ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ದಿನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದ ಹಾಡುಗಳು ‘ಕಾವಲಾ’ ಮತ್ತು ‘ಹುಕುಂ’ ಹಾಡುಗಳಂತೂ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿವೆ. ಹಾಡುಗಳು ಹಿಟ್ ಆದ ನಂತರ, ತಯಾರಕರು ಅದ್ಧೂರಿ ಆಡಿಯೋ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಜುಲೈ 22 ರಂದು, ಪ್ರೊಡಕ್ಷನ್ ಹೌಸ್, ಸನ್ ಪಿಕ್ಚರ್ಸ್, ಟ್ವಿಟ್ಟರ್‌ ನಲ್ಲಿ ಈ ದಿನಾಂಕ ಘೋಷಿಸಿದೆ. ‘ಜೈಲರ್’ನ ಭವ್ಯವಾದ ಆಡಿಯೊ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುವಾಗ ವೀಡಿಯೋವನ್ನು ಸಹ ಹಂಚಿಕೊಂಡಿತ್ತು. “ಕಾಯುವುದು ಮುಗಿದಿದೆ! ಜುಲೈ 28 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜೈಲರ್‌ನ ಸ್ಟಾರ್-ಸ್ಟಡ್ ಗ್ರ್ಯಾಂಡ್ ಆಡಿಯೊ ಲಾಂಚ್‌ಗೆ ಸಿದ್ಧರಾಗಿ ಎಂದು ಹೇಳಿತ್ತು. ವೀಡಿಯೊದಲ್ಲಿ ರಜಿನಿಕಾಂತ್ (Rajinikanth), ತಮನ್ನಾ ಭಾಟಿಯಾ ಮತ್ತು ರಮ್ಯಾ ಕೃಷ್ಣನ್ ಇತರ ನಟರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನ್ನು ಶೇರ್ ಮಾಡಿತ್ತು.

ರಜಿನಿಕಾಂತ್ (Rajinikanth) ಅವರ ಕೊನೆಯ ಚಿತ್ರ ಅನ್ನತ್ತಾ ನಂತರ, ಅಭಿಮಾನಿಗಳು ‘ಜೈಲರ್’ ಬಗ್ಗೆ ಸಾಕಷ್ಟು ಉತ್ಸುಹಕರಾಗಿದ್ದಾರೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ಜೈಲಿನಲ್ಲಿ ಸಾಹಸ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಸರಣಿ ನವೀಕರಣಗಳನ್ನು ಬಿಡುಗಡೆ ಮಾಡುತ್ತಿದೆ.

ಇದಕ್ಕೂ ಮೊದಲು, ‘ಜೈಲರ್’ ನ ಮೊದಲ ನವೀಕರಣವಾಗಿ ‘ಕಾವಾಲಾ’ ಹಾಡನ್ನು ಬಿಡುಗಡೆ ಮಾಡಲಾಯಿತು. ಇದು ಕಾಲಿವುಡ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಅವರ ಸಂಗೀತದಲ್ಲಿ ತಮನ್ನಾ ಅವರ ವೈಭವದ ನರ್ತನ ಈಗಾಗಲೇ
ಅನಾವರಣಗೊಂಡಿದೆ.

ಚಿತ್ರವು ಆಗಸ್ಟ್ 10 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ಸೂಪರ್‌ಸ್ಟಾರ್ ಶಿವ ರಾಜ್‌ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ಸೇರಿದಂತೆ ಹಲವರು ತಾರಾಗಣದ ಭಾಗವಾಗಿದ್ದಾರೆ.

‘ಜೈಲರ್’ ನಂತರ, ರಜನಿಕಾಂತ್ (Rajinikanth) ಅವರ ಮಗಳು ಐಶ್ವರ್ಯಾ ಅವರ ‘ಲಾಲ್ ಸಲಾಮ್’ ನಲ್ಲಿ ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ನಟಿಸಿರುವ ಮೊಯ್ದೀನ್ ಭಾಯ್ ಆಗಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ತಲೈವರ್ ತಮ್ಮ 171 ನೇ ಚಿತ್ರಕ್ಕಾಗಿ ಲೋಕೇಶ್ ಕನಕರಾಜ್ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ಬಾಬು ಆಂಟೋನಿ ಇತ್ತೀಚೆಗೆ ಖಚಿತಪಡಿಸಿದ್ದಾರೆ. ಆದಾಗ್ಯೂ, ಅಧಿಕೃತ ದೃಢೀಕರಣವನ್ನು ಇನ್ನೂ ನಿರೀಕ್ಷಿಸಲಾಗಿದೆ.

15 ಸೆಕೆಂಡ್ ನಲ್ಲೇ ಸೋಲ್ಡ್ ಔಟ್:

ಆಡಿಯೋ ಮತ್ತು ಟ್ರೈಲರ್ ಲಾಂಚ್ ಪಾಸ್‌ಗಳು ಪ್ರಾರಂಭವಾದ 15 ಸೆಕೆಂಡುಗಳಲ್ಲಿ ಮಾರಾಟವಾದವು. ಅಭಿಮಾನಿಗಳಿಗೆ ಘೋಷಿಸಲಾದ 1000 ಉಚಿತ ಪಾಸ್‌ಗಳು 15 ಸೆಕೆಂಡ್‌ಗಳಲ್ಲಿ ಬುಕ್ ಆಗಿವೆ ಮತ್ತು ಮಾರಾಟವಾಗಿವೆ ಎಂದು ಚಲನಚಿತ್ರ
ತಯಾರಕರು ಸಾಮಾಜಿಕ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಪೋಸ್ಟರ್ ಅನ್ನು ಹಂಚಿಕೊಂಡ ಪ್ರೊಡಕ್ಷನ್ ಹೌಸ್, “ಇವನ್ ಟ್ರೆಂಡ್-ಆಹ್ ಮಾತಿ ವೆಪ್ಪಾನ್! ಅಳಪ್ಪಾರೈ-ಯಾ ಕೇಳಪಿಟಿಂಗಾ. ಎಲ್ಲಾ ಪಾಸ್‌ಗಳನ್ನು ಕೇವಲ 15 ಸೆಕೆಂಡುಗಳಲ್ಲಿ ಕ್ಲೈಮ್ ಮಾಡಲಾಗಿದೆ.

ಚಿತ್ರ ಬಿಡುಗಡೆಗೆ 15 ದಿನಗಳಿಗಿಂತ ಕಡಿಮೆ ಇರುವಾಗ, ಚಲನಚಿತ್ರ ನಿರ್ಮಾಪಕರು ಜುಲೈ 28 ರಂದು ಚಿತ್ರದ ಟ್ರೈಲರ್ ಮತ್ತು ಆಡಿಯೊವನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದು, ಅದ್ಧೂರಿಯಾಗಿ ನಡೆಯಲಿದೆ. 15 ಸೆಕೆಂಡ್ ನಲ್ಲಿ
ಪಾಸ್ ಸೋಲ್ಡ್ ಔಟ್ ಆಗಿರುವುದನ್ನು ನೋಡಿದರೆ ರಜಿನಿಕಾಂತ್ (Rajinikanth) ಕ್ರೇಜ್ ಕಡಿಮೆಯಾಗಿಲ್ಲ ಎಂಬುದಕ್ಕೆ ಸಾಕ್ಷಿ.

Rajinikanth, Rajinikanth Movie, Rajinikanth Craze, Rajinikanth News, Rajinikanth Suddi,

Rajinikanth Cinema, Rajinikanth Acting, Rajinikanth Actor

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment