SUDDIKSHANA KANNADA NEWS/ DAVANAGERE/ DATE:01-05-2023
ದಾವಣಗೆರೆ(DAVANAGERE): ಕಾಂಗ್ರೆಸ್ (CONGRESS) ರಾಷ್ಟ್ರ ನಾಯಕ ರಾಹುಲ್ ಗಾಂಧಿ (RAHUL GANDHI) ಮೇ. 2 ರಂದು ದಾವಣಗೆರೆ (DAVANAGERE) ಜಿಲ್ಲೆಯ ಹರಿಹರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಹರಿಹರ (HARIHARA) ಗಾಂಧಿ ಮೈದಾನದಲ್ಲಿ ಏರ್ಪಡಿಸಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ (CONGRESS) ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಪರ ರಾಹುಲ್ ಗಾಂಧಿ ಪ್ರಚಾರ ಕೈಗೊಳ್ಳಲಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ನಂದಿಗಾವಿ ಶ್ರೀನಿವಾಸ್ ಅವರು ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿರುವ ಕಾರಣಕ್ಕೆ ಇಲ್ಲಿಗೆ ಆಗಮಿಸಿ ಮತಯಾಚನೆ ಮಾಡಲಿದ್ದಾರೆ. ಶಾಸಕ ಎಸ್. ರಾಮಪ್ಪ (S. RAMAPPA) ಅವರಿಗೆ ಕಾಂಗ್ರೆಸ್ ಟಿಕೆಟ್ (TICKET) ಕೈತಪ್ಪಿದ ಕಾರಣ ಮುನಿಸಿಕೊಂಡಿದ್ದರು. ವಕೀಲ ನಾಗೇಂದ್ರಪ್ಪ(NAGENDRAPPA)ರು ಅಸಮಾಧಾನಗೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಇಬ್ಬರೂ ನಾಯಕರು ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಈಗ ರಾಹುಲ್ ಗಾಂಧಿ ಅವರೇ ಆಗಮಿಸುತ್ತಿರುವ ಕಾರಣ ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಕೈ ಪಡೆ ಸಜ್ಜಾಗಿದೆ.
ಕೊನೆ ಗಳಿಗೆಯಲ್ಲಿ ನಂದಿಗಾವಿ ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಕ್ಕ ಕಾರಣ ಸ್ವಲ್ಪ ವಿರೋಧ ಹಾಗೂ ಅಸಮಾಧಾನ ವ್ಯಕ್ತವಾಗಿತ್ತು. ಕೇವಲ ಸಾರ್ವಜನಿಕ ಸಭೆಯಲ್ಲಿ ಮಾತ್ರ ಪಾಲ್ಗೊಳ್ಳರುವ ರಾಹುಲ್ ಗಾಂಧಿ (RAHUL GANDHI)ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ತೆರಳಲಿದ್ದಾರೆ. ಬೇರೆ ಯಾವ ಕಾರ್ಯಕ್ರಮಗಳೂ ನಿಗದಿಯಾಗಿಲ್ಲ.
ರಾಹುಲ್ ಗಾಂಧಿ (RAHUL GANDHI)ಆಗಮನದಿಂದ ನಂದಿಗಾವಿ ಶ್ರೀನಿವಾಸ್ (NANDIGAVI SHRINIVAS) ಅವರಿಗೆ ಬಲ ಬಂದಿದ್ದರೆ, ಮುನಿಸಿಕೊಂಡವರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ರಾಹುಲ್ ಗಾಂಧಿ ಭಾಗವಹಿಸುವ ಈ ಸಭೆಯಲ್ಲಿ ಹರಿಹರ ಕಾಂಗ್ರೆಸ್ ನ ಬಹುತೇಕ ನಾಯಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಭಾಗಿಯಾಗುತ್ತಿರುವ ರ್ಯಾಲಿಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾಹಿತಿ ನೀಡಿದರು.