ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಯಲ್ಲಿ ಡಿಜೆ ಅಬ್ಬರವಿಲ್ಲದೇ ಶ್ರದ್ಧಾಭಕ್ತಿಯ ಗಣೇಶ ಮೆರವಣಿಗೆ: ಜಿಲ್ಲಾಡಳಿತಕ್ಕೆ ರಾಘವೇಂದ್ರ ಗೌಡ ಅಭಿನಂದನೆ

On: September 20, 2025 9:44 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/DATE:20_09_2025

ದಾವಣಗೆರೆ: ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಬಹಳ ಅದ್ಭುತವಾಗಿ, ನಮ್ಮ ದೇಶದ, ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿತ್ತು. ಕಲಾವಿದರು, ಕಲಾತಂಡಗಳು ವಿವಿಧ ವೇಷಭೂಷಣ ತೊಟ್ಟು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಗಣೇಶೋತ್ಸವ ಮೆರವಣಿಗೆಯು ನಾಡಿನ ಸಂಸ್ಕೃತಿ ನೆನಪಿಸುವಂತಿತ್ತು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ಜಿ. ಆರ್. ರಾಘವೇಂದ್ರ ಗೌಡ ಹೇಳಿದ್ದಾರೆ.

READ ALSO THIS STORY: ದಾವಣಗೆರೆ ಹಿಂದೂಮಹಾಸಭಾ ಗಣಪನ ಅದ್ಧೂರಿ ವಿಸರ್ಜನೆ: ಡಿಜೆ ಇಲ್ಲದ ಮೆರವಣಿಗೆ ಹೇಗಿತ್ತು ಗೊತ್ತಾ?

ಮೆರವಣಿಗೆಯಲ್ಲಿ ಡೊಳ್ಳು, ನಾಸಿಕ್ ಡೋಲು, ಚಂಡೆ ಸೇರಿದಂತೆ ಹಲವಾರು ವಾದ್ಯಗಳ ಸೌಂಡ್ ಗೆ ಯುವಕರು, ಯುವತಿಯರು ಹೆಜ್ಜೆ ಹಾಕಿದ್ದು ಮನಸೆಳೆಯುವಂತಿತ್ತು. ಈ ಸಾರಿ ಗಣಪತಿಯ ಮೆರವಣಿಗೆಯಲ್ಲಿ ಯಾವುದೇ ಮುಜುಗರವಾಗದಂಥ ಸಿನಿಮಾ ಹಾಡುಗಳಿಲ್ಲದೇ, ಕೆಟ್ಟ ಸಾಹಿತ್ಯದ ಸಂಗೀತವಿಲ್ಲದ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಸಾಗಿದ್ದು ಪ್ರತಿಯೊಬ್ಬರೂ ಖುಷಿಪಡುವ ವಿಚಾರ. ಇಂದು ನಡೆದ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಇಲ್ಲದೇ ಈ ವಿಶಿಷ್ಟ ಕಲಾ ತಂಡಗಳ ಚಂಡೆ, ಮದ್ದಳೆ, ನಾಸಿಕ್ ಡೋಲ್ ಶಬ್ಧಕ್ಕೆ ಗಣಪತಿ ಮೆರವಣಿಗೆ ಸಾಗಿದ್ದು ಒಳ್ಳೆಯ ಬೆಳವಣಿಗೆ. ಇದಕ್ಕೆ ಕಾರಣವಾದ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದಾವಣಗೆರೆ

ಕಳೆದ ಬಾರಿ ಮೆರವಣಿಗೆಯಲ್ಲಿ ಡಿಜೆ ಕರ್ಕಶ ಶಬ್ಧಕ್ಕೆ ಕುಣಿಯುತ್ತಿದ್ದದ್ದು ಜನರಿಗೆ ಕಿರಿಕಿರಿಯಾಗುತಿತ್ತು. ಶ್ರದ್ಧಾ ಭಕ್ತಿಯಿಂದ ಸಾಗಬೇಕಿದ್ದ ಮೆರವಣಿಗೆಯು ಅಶ್ಲೀಲ ಸಾಹಿತ್ಯದ ನಡುವೆ ಹೋಗುತಿತ್ತು. ಆದ್ರೆ ಇಂದು ನಡೆದ ಮೆರವಣಿಗೆಯು ವಿವಿಧ ಕಲಾ ತಂಡಗಳು, ಕಿವಿಗೆ ಇಂಪಾದ ಶಬ್ಭದ ಜೊತೆಗೆ ಸಾಗಿತು. ಮುಂದೆಯೂ ಇದೇ ರೀತಿಯಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ನಡೆಯುವಂತಾಗಲಿ. ಒಟ್ಟಾರೆ ಹೇಳಬೇಕೆಂದರೆ ಇಂದು ನಮ್ಮ ಸಂಸ್ಕೃತಿ ಅನಾವರಣವಾಗಿತ್ತು. ಈಗಿನ ಪೀಳಿಗೆಗೆ ಕಲೆಗಳನ್ನು ಪರಿಚಯ ಮಾಡುವಂತ ಅವಶ್ಯಕತೆ ಇದೆ ಎಂಬ ಅರಿವಿನೊಂದಿಗೆ ಕಾಳಜಿ ವಹಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮ ಸ್ವಾಗತಾರ್ಹ ಎಂದು ರಾಘವೇಂದ್ರ ಗೌಡ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment