Home ಕ್ರೈಂ ನ್ಯೂಸ್ ಕೇತನ್ ಅಗರ್‌ವಾಲ್ ಕೊಲೆಗೂ ಮುನ್ನ ಬೆಂಗಳೂರಿನಲ್ಲಿ ಕೈ,ಕಾಲು ಮುರಿಯಲು ಸ್ಕೆಚ್ ಹಾಕಿದ್ದ ಸಿಯಾ ಗೋಯಲ್ ಮತ್ತು ಪ್ರಿಯಕರ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕೇತನ್ ಅಗರ್‌ವಾಲ್ ಕೊಲೆಗೂ ಮುನ್ನ ಬೆಂಗಳೂರಿನಲ್ಲಿ ಕೈ,ಕಾಲು ಮುರಿಯಲು ಸ್ಕೆಚ್ ಹಾಕಿದ್ದ ಸಿಯಾ ಗೋಯಲ್ ಮತ್ತು ಪ್ರಿಯಕರ!

Share
ಕೇತನ್ ಅಗರ್‌ವಾಲ್
Share

ಪುಣೆ: ಮಹಾರಾಷ್ಟ್ರದ ಪುಣೆಯ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್‌ವಾಲ್ (25) ಅವರನ್ನು ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ನ್ಯಾಯಾಲಯಕ್ಕೆ 5,053 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ತನಿಖಾ ವರದಿಯಲ್ಲಿ ನಡುಕ ಹುಟ್ಟಿಸುವ ಪ್ರಮುಖ ವಿವರಗಳು ಬೆಳಕಿಗೆ ಬಂದಿವೆ.

ಕೇತನ್ ಅವರನ್ನು ಕೊಲೆ ಮಾಡುವ ಮುನ್ನವೇ ಅವರ ಕೈ-ಕಾಲುಗಳನ್ನು ಮುರಿಯಲು ಬೆಂಗಳೂರಿನಲ್ಲಿ ಯೋಜನೆ ರೂಪಿಸಲಾಗಿತ್ತು ಎಂಬ ಆಘತ್ಯಕಾರಿ ವಿಷಯ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಕೇತನ್ ನಿಶ್ಚಿತಾರ್ಥಿ ಸಿಯಾ ಗೋಯಲ್, ಆಕೆಯ ಪ್ರಿಯಕರ ಚೇತನ್ ಚೌಧರಿ ಹಾಗೂ ಮತ್ತೊಬ್ಬ ಸಹಚರ ರಿತೇಶ್ ಹಾಂಗೇ ಈ ಕೃತ್ಯದ ಹಿಂದಿದ್ದಾರೆ.

ಬೆಂಗಳೂರಿನ ಯೋಜನೆಯಿಂದ ಹಿಂದೆ ಸರಿದಿದ್ದೇಕೆ?: ರಿತೇಶ್ ಹಾಂಗೇ ಬೆಂಗಳೂರಿನಲ್ಲಿದ್ದ ತನ್ನ ಸ್ನೇಹಿತನ ಬಳಿ ಕೇತನ್ ಅವರನ್ನು ಬೆಂಗಳೂರಿಗೆ ಕರೆಸಿ ಆತನ ಕೈ-ಕಾಲುಗಳನ್ನು ಮುರಿಯುವ ಕುರಿತು ಚರ್ಚಿಸಿದ್ದನು. ಆದರೆ, ಆ ಸ್ನೇಹಿತ ಈ ಕಲ್ಪನೆಯನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದರಿಂದ, ಆರೋಪಿಗಳು ನಂತರ ಸ್ವತಃ ಕೊಲೆ ಮಾಡಲು ನಿರ್ಧರಿಸಿದ್ದರು.

ಚಾಟ್‌ಜಿಪಿಟಿ ಮತ್ತು ಕೊಲೆ ಸಿನಿಮಾಗಳ ಬಳಕೆ: ಕೊಲೆ ಯೋಜನೆಯನ್ನು ಜಾರಿಗೊಳಿಸಲು ಆರೋಪಿಗಳು ಚಾಟ್‌‌ಜಿಪಿಟಿ (ChatGPT), ಕೊಲೆ ಆಧಾರಿತ ಸಿನಿಮಾಗಳು ಹಾಗೂ ಪೊಲೀಸರಿಗೆ ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳುವ ಕುರಿತಾದ ಪಾಡ್‌ಕಾಸ್ಟ್‌ಗಳನ್ನು ಸತತವಾಗಿ ಕೇಳಿ ಸಿದ್ಧತೆ ನಡೆಸಿದ್ದರು.

ಪಾಸ್‌ಪೋರ್ಟ್ ಹರಿದು ಪ್ರಯಾಣ ರದ್ದು: ಜೂನ್ 6 ರಂದು ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗೆ ತೆರಳುತ್ತಿದ್ದಾಗ, ಸಿಯಾ ಗೋಯಲ್ ಪ್ರಿಯಕರ ಚೇತನ್ ಸಲಹೆಯಂತೆ ಕೆಫೆಯೊಂದರ ಶೌಚಾಲಯದಲ್ಲಿ ಕೇತನ್ ಅವರ ಪಾಸ್‌ಪೋರ್ಟ್ ಹರಿದುಹಾಕಿ ಪ್ರವಾಸ ರದ್ದಾಗುವಂತೆ ಮಾಡಿದ್ದಳು.

ನಕಲಿ ಇನ್‌ಸ್ಟಾಗ್ರಾಮ್ ಖಾತೆ ಹಾಗೂ ರಹಸ್ಯ ಸ್ನ್ಯಾಪ್‌ಚಾಟ್: ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಸ್ನ್ಯಾಪ್‌ಚಾಟ್‌ನಲ್ಲಿ ಗೆಳತಿಯೊಬ್ಬರಿಗೆ “ನಡೆಯದೇ ಇರುವ ಮದುವೆಗೆ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ ಕಳುಹಿಸು” ಎಂದು ಮೆಸೇಜ್ ಮಾಡಿದ್ದಳು. ನಂತರ ‘ಮಾಹಿ’ ಎಂಬ ಹೆಸರಿನ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಜೂನ್ 18 ರಂದು ಲೋಹಗಡ್ ಕೋಟೆಗೆ ಬರುವಂತೆ ಕೇತನ್ ಅವರನ್ನು ನಂಬಿಸಿ ಕರೆಸಲಾಗಿತ್ತು.

ಸಾಕ್ಷಿಗೆ ಬೆದರಿಕೆ: ಲೋಹಗಡ್ ಕೋಟೆಯಲ್ಲಿ ಕೇತನ್ ಅವರನ್ನು ತಳ್ಳುವುದನ್ನು ಪ್ರತ್ಯಕ್ಷವಾಗಿ ನೋಡಿದ ಸಾಕ್ಷಿಯೊಬ್ಬರಿಗೆ “ಬಾಯಿ ಮುಚ್ಚಿಕೊಂಡಿರು, ಇಲ್ಲದಿದ್ದರೆ ನಿನ್ನನ್ನೂ ಕೋಟೆಯಿಂದ ಕೆಳಗೆ ತಳ್ಳುತ್ತೇನೆ” ಎಂದು ಚೇತನ್ ಬೆದರಿಕೆ ಹಾಕಿದ್ದನು. ಈ ಪ್ರಕರಣದಲ್ಲಿ ಹಿರಿಯ ವಕೀಲ ಉಜ್ವಲ್ ನಿಕಮ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ (SPP) ನೇಮಿಸಲು ನಿರ್ಧರಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *