ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಇನ್ಮುಂದೆ ದ್ವಿತೀಯ ಪಿಯುಸಿ ಪರೀಕ್ಷಾ ಅವಧಿ 2 ಗಂಟೆ 45 ಮಾತ್ರ

On: September 13, 2024 6:12 PM
Follow Us:
---Advertisement---

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್ ನೀಡಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಸಮಯವನ್ನು ಈ ವರ್ಷದಿಂದ ಕಡಿತ ಮಾಡಿದೆ. ಹೊಸ ನಿಯಮ ಈ ವರ್ಷದ ಅಂದರೆ 2024-25ನೇ ಸಾಲಿನ ಪರೀಕ್ಷೆಯಿಂದಲೇ ಜಾರಿ ಆಗಲಿದೆ. ಸಮಯ ಕಡಿತ ಮಾಡಿರೋ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ.

ಈ ಮೊದಲು ವಿದ್ಯಾರ್ಥಿಗಳು ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯ ಕೊಡಲಾಗ್ತಿತ್ತು. 3 ಗಂಟೆ ಉತ್ತರ ಬರೆಯಲು ಮತ್ತು 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯ ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗಿದ್ದು, 15 ನಿಮಿಷ ಸಮಯವನ್ನು ಕಡಿತ ಮಾಡಲಾಗಿದೆ. ಸಮಯ ಕಡಿತಕ್ಕೆ ಬೋರ್ಡ್ ಕಾರಣ ನೀಡಿದೆ. ಮೊದಲು 3 ಗಂಟೆ 15 ನಿಮಿಷ ಇದ್ದ ಸಮಯದಲ್ಲಿ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಕೊಡಲಾಗಿತ್ತಿತ್ತು. ಆದರೆ ಈಗ 70/80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು, ಉಳಿದ ಅಂಕಗಳು ಇಂಟರ್‌ನಲ್ ಅಸೆಸ್ಮೆಂಟ್ ಗೆ ನೀಡಲಾಗ್ತಿದೆ. ಈ ಹಿನ್ನಲೆಯಲ್ಲಿ 15 ನಿಮಿಷ ಉತ್ತರ ಬರೆಯಲು ಕಡಿತ ಮಾಡಲಾಗಿದೆ ಅನ್ನೋದು ಇಲಾಖೆ ವಾದವಾಗಿದೆ. ಅಂಕಗಳು ಕಡಿಮೆ ಮಾಡಿದರು 15 ನಿಮಿಷ ಹೆಚ್ಚುವರಿ ಸಮಯ ಕೊಟ್ಟಿದ್ರೆ ಏನ್ ಸಮಸ್ಯೆ ಆಗುತ್ತೆ ಅನ್ನೋದು ಪೋಷಕರು, ಶಿಕ್ಷಣ ತಜ್ಞರ ಪ್ರಶ್ನೆಯಾಗಿದೆ.

Join WhatsApp

Join Now

Join Telegram

Join Now

Leave a Comment