SUDDIKSHANA KANNADA NEWS/ DAVANAGERE/ DATE_08-07_2025
ದಾವಣಗೆರೆ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ದಾವಣಗೆರೆ ಪೂರ್ವ ವಲಯದ ಪುರುಷರ ಕಬಡ್ಡಿ ತಂಡ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ತಂಡವು ದ್ವೀತೀಯ ಸ್ಥಾನ ಪಡೆದಿತ್ತು.
READ ALSO THIS STORY: ಜಿ.ಎಂ. ಸಿದ್ದೇಶ್ವರರಿಗೆ ಬಹುಪರಾಕ್: ರೇಣು ಅಂಡ್ ಟೀಂ ವಿರುದ್ಧ ವಾಗ್ಬಾಣಗಳ ಸುರಿಮಳೆ!
ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಎರಡು ತಂಡಗಳ ಸದಸ್ಯರಿಗೆ ಕಛೇರಿಯಲ್ಲಿ ಬಹುಮಾನ ವಿತರಿಸಿ ಅಭಿನಂದಿಸಿದರು.
ಮುಂದಿನ ದಿನಗಳಲ್ಲಿ ಹೆಚ್ಚು ತರಬೇತಿ ಹಾಗೂ ಅಭ್ಯಾಸ ಮಾಡಿ ಉತ್ತಮವಾಗಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಐಜಿಪಿ ರವಿಕಾಂತೇಗೌಡ ಹಾಗೂ ಪೊಲೀಸ್ ಅಧೀಕ್ಷಕರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೂರ್ವ ವಲಯ ಬೆರಳು ಮುದ್ರೆ ಘಟಕದ ಡಿವೈಎಸ್ಪಿ ಎ. ಕೆ. ರುದ್ರೇಶ್, ಐಜಿಪಿ ಕಚೇರಿಯ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ, ಪೂರ್ವ ವಲಯ ತಂಡದ ವ್ಯವಸ್ಥಾಪಕ ಸುರೇಶ್ ಸಗರಿ, ಪೊಲೀಸ್ ನಿರೀಕ್ಷಕ ಲಕ್ಷ್ಮಣ್ ನಾಯ್ಕ್ ಅವರು ಹಾಜರಿದ್ದರು.