ಬೆಂಗಳೂರು: ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಪತ್ರಿಕೆಗಳನ್ನು ಕಂಡರೆ ಓಡಿಹೋಗುವ ಪ್ರಧಾನಿಯವರನ್ನು ಏನೆಂದು ಕರೆಯಬೇಕು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸದಾ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಅವರ ಬಗ್ಗೆ ಪ್ರಶ್ನೆ ಮಾಡುವ ಬಿಜೆಪಿಗರು, ಒಮ್ಮೆಯಾದರೂ ಪ್ರಧಾನಿ ಮೋದಿಯವರು ಏಕೆ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲವೆಂದು ಅವರನ್ನೇ ಪ್ರಶ್ನೆ ಮಾಡಲಿ ಎಂದು ಹೇಳಿದ್ದಾರೆ.
ದೇಶನಿವಾಸಿಗಳ ಬಹುದಿನದ ಪ್ರಶ್ನೆಗೆ ಉತ್ತರವಾದರೂ ಸಿಗಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯಪಾಲರ ನಡೆಯಿಂದ ರಾಷ್ಟ್ರಗೀತೆಗೆ ಅವಮಾನ:
ಕಳೆದ ವಾರ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲರು, ಸರ್ಕಾರ ನೀಡಿದ ಕೈಪಿಡಿಯನ್ನು ಸಂಪೂರ್ಣವಾಗಿ ಓದದೇ, ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ರಾಷ್ಟಗೀತೆಯನ್ನು ಹಾಡದೆ ಎದ್ದು ಹೋಗಿದ್ದು ಬಿಜೆಪಿಯವರಿಗೆ ಸಾಂವಿಧಾನಿಕ ಬಾಹಿರ ಎಂದು ಏಕೆ ತಿಳಿಯುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಹೋಗುವ ಬರದಲ್ಲಿ ರಾಷ್ಟ್ರಗೀತೆಯನ್ನು ಮರೆತಿದ್ದಾರೆ, ಇದು ಅವಮಾನವಲ್ಲ ಎಂದು ಬಿಜೆಪಿಗರು ಸಮರ್ಥನೆ ಮಾಡಿಕೊಳ್ಳುತ್ತಿರುವ ನಿಜಕ್ಕೂ ನಾಚಿಗೆಗೇಡಿನ ಸಂಗತಿ. ಅಸಲಿಗೆ ಚರ್ಚೆಯಾಗಬೇಕಿರುವುದು ರಾಷ್ಟ್ರಗೀತೆಗೆ ಅವಮಾನ ಮಾಡಿರುವ ರಾಜ್ಯಪಾಲರ ನಡೆಯ ಕುರಿತು ಚರ್ಚೆಯಬೇಕು. ಬಿಜೆಪಿಯವರ ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.





Leave a comment