Home ದಾವಣಗೆರೆ ಆರ್ ಎಸ್ಎಸ್ ಗಲಿಬಿಲಿಗೊಂಡ್ರೆ ಬಿಜೆಪಿ ಬುಸುಗುಡುತ್ತೆ, ಹಾವಿನ ಬಾಲ ಯಾರ ಕೈಯಲ್ಲಿದೆ ಎಂಬುದು ಖಚಿತವಾಗುತ್ತೆ: ಪ್ರಿಯಾಂಕ್ ಖರ್ಗೆ ಲೇವಡಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಆರ್ ಎಸ್ಎಸ್ ಗಲಿಬಿಲಿಗೊಂಡ್ರೆ ಬಿಜೆಪಿ ಬುಸುಗುಡುತ್ತೆ, ಹಾವಿನ ಬಾಲ ಯಾರ ಕೈಯಲ್ಲಿದೆ ಎಂಬುದು ಖಚಿತವಾಗುತ್ತೆ: ಪ್ರಿಯಾಂಕ್ ಖರ್ಗೆ ಲೇವಡಿ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಆರ್ ಎಸ್ ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ. ಪ್ರತಿ ಬಾರಿ ಯಾರಾದರೂ ಆರೆಸ್ಸೆಸ್ ಅನ್ನು ಪ್ರಶ್ನಿಸಿದಾಗ, ಬಿಜೆಪಿ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಸಂಘಟನೆ, ಇಂದು ರಾಷ್ಟ್ರಕ್ಕೆ ದೇಶಪ್ರೇಮದ ಪಾಠ ಹೇಳುವುದೇಕೆ ಎಂದು ಪ್ರಶ್ನಿಸಿದರೆ, ಬಿಜೆಪಿ ಸಿಟ್ಟಿನಿಂದ ಬುಸುಗುಡುತ್ತದೆ ಎಂದಿದ್ದಾರೆ.

ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷಗಳೇಕೆ ಬೇಕಾಯಿತು ಎಂದು ಪ್ರಶ್ನಿಸಿದರೆ, ಬಿಜೆಪಿ ಕೋಪದಿಂದ ಬುಸುಗುಡುತ್ತದೆ. ಅವರು ನಿಜಕ್ಕೂ ಯಾವ ಸಂವಿಧಾನಕ್ಕೆ ಬದ್ಧರಾಗಿರುತ್ತಾರೆ? ಬಾಬಾಸಾಹೇಬರು ಬರೆದ ಸಂವಿಧಾನಕ್ಕೋ, ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು ಕೇಳಿದರೆ, ಬಿಜೆಪಿ ಸಿಟ್ಟಿನಿಂದ ಪೂತ್ಕರಿಸುತ್ತದೆ. ಅವರು ನೋಂದಣಿ ಮಾಡಿಕೊಳ್ಳುವುದನ್ನು, ತೆರಿಗೆ ಪಾವತಿಸುವುದನ್ನು ಏಕೆ ನಿರಾಕರಿಸುತ್ತಾರೆ ಎಂದು ಪ್ರಶ್ನಿಸಿದರೆ, ಬಿಜೆಪಿ ಸಿಟ್ಟಿನಿಂದ ಬುಸುಗುಡುತ್ತದೆ ಎಂದು ಹೇಳಿದ್ದಾರೆ.

ಆರೆಸ್ಸೆಸ್ ತನ್ನ ಉಪದೇಶಗಳನ್ನು ಮೊದಲು ತಾನು ಅನುಸರಿಸಲಿ ಎಂದು ಕೇಳಿದರೆ, ಬಿಜೆಪಿ ಆಕ್ರೋಶದಿಂದ ಪೂತ್ಕರಿಸುತ್ತದೆ. ಬಿಜೆಪಿ ಎಂದಿಗೂ ಆರ್‌ಎಸ್‌ಎಸ್‌ಗೆ ಕೇವಲ ಮಿತ್ರನಾಗಿರಲಿಲ್ಲ; ಅದು ಎಂದಿಗೂ ಆರೆಸ್ಸೆಸ್‌ನ ಸಾಧನವಾಗಿಯೇ ಇದೆ. ಪ್ರತಿ ಬಾರಿ ಬುಸುಗುಡುವಾಗಲೂ, ಹಾವಿನ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಕಿಡಿಕಾರಿದ್ದಾರೆ.

Share

Leave a comment

Leave a Reply

Your email address will not be published. Required fields are marked *