SUDDIKSHANA KANNADA NEWS/DAVANAGERE/DATE:25_10_2025
ಬೆಂಗಳೂರು: ಬಿಜೆಪಿ ನಾಯಕರೇ ಕಳೆದ 50 ವರ್ಷಗಳಲ್ಲಿ ನಾವು ಗಳಿಸಿದ ಆಸ್ತಿ, ಆದಾಯಗಳೆಲ್ಲದರ ವಿವರಗಳೂ ಜನತೆಯ ಮುಂದಿದೆ, ಮತ್ತು ನಮ್ಮ ಆದಾಯಕ್ಕೆ ತೆರಿಗೆ ಪಾವತಿಸಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
READ ALSO THIS STORY: ವೈದ್ಯೆ ಆತ್ಮಹತ್ಯೆ ಕೇಸ್: ಆಕೆ ತಂಗಿದ್ದ ಮನೆ ಮಾಲೀಕನ ಪುತ್ರ ಬಂಧನ, ಪಿಎಸ್ಐ ಎಸ್ಕೇಪ್!
ಆದರೆ, ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ನೋಂದಾಯಿಸಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಎನ್ ಜಿಒ ಎನಿಸಿಕೊಂಡಿದೆ? ಇದು ಸಾಧ್ಯವಾಗಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಆದಾಯ ಮತ್ತು ನಿಮ್ಮ ಆರ್‌ಎಸ್‌ಎಸ್ ಆದಾಯಗಳ ಮೂಲಗಳ ಬಗ್ಗೆ ಐಟಿ, ಇಡಿ ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ ಆರ್ ಎಸ್ ಎಸ್ ಸಿದ್ದವೇ ಎಂದು ಬಿಜೆಪಿಗೆ ಪ್ರಶ್ನೆ ಕೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ನೀತಿ, ಸ್ಟಾರ್ಟಪ್ ನೀತಿ, ಸ್ಪೇಸ್‌ಟೆಕ್ ನೀತಿಗಳನ್ನು ವ್ಯಾಪಕ ಉದ್ಯಮ ಸಮಾಲೋಚನೆಗಳು ಮತ್ತು ಜಾಗತಿಕ ಮಾನದಂಡಗಳ ಆಧಾರದ ಮೇಲೆ ರೂಪಿಸಲಾಗುತ್ತಿದೆ ಎಂದು ಐಟಿ ಸಚಿವರೂ ಆದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇವು ಸಮಗ್ರ, ಭವಿಷ್ಯದ ದೃಷ್ಟಿಕೋನ ಹೊಂದಿರುವ ಹಾಗೂ ಈ ಪ್ರಮುಖ ಕ್ಷೇತ್ರಗಳಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.






