ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅಭಿವೃದ್ಧಿ ಕಾರ್ಯಗಳ ಜೊತೆ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದು, ಜನಪ್ರಿಯತೆ ಸಹಿಸದೇ ಮಾಜಿ ಸಂಸದ ಪ್ರತಾಪ್ ಸಿಂಹ ಕೇವಲವಾಗಿ ಮಾತನಾಡಿದ್ದು, ಇದು ಸರಿಯಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
READ ALSO THIS STORY: ಪ್ರತಾಪ್ ಸಿಂಹಗೆ ದಾವಣಗೆರೆ ಸಂಸದರ ಬಗ್ಗೆ ಮಾತನಾಡುವ ಯೋಗ್ಯತೆ, ನೈತಿಕತೆ ಇಲ್ಲ: ಮೊಹಮ್ಮದ್ ಜಿಕ್ರಿಯಾ ಆಕ್ರೋಶ
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಸಭೆಯಲ್ಲಿ ಸಮರ್ಥವಾಗಿ ಸಮಸ್ಯೆಗಳನ್ನು ಮಂಡಿಸಿದ ಕೀರ್ತಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಭದ್ರಾ ಮೇಲ್ದಂಡೆ ಯೋಜನೆ, ಆರೋಗ್ಯ, ಶಿಕ್ಷಣ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹತ್ತು ಹಲವು ವಿಚಾರ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದಾಗ ಮಾತೇ ಆಡದವರು ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮೈಸೂರಿನಲ್ಲಿ ಟಿಕೆಟ್ ಪಡೆಯಲು ಆಗದೇ ಹತಾಶರಾಗಿರುವ ಪ್ರತಾಪ್ ಸಿಂಹ ದಾವಣಗೆರೆಗೆ ಬಂದು ಮಾತನಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಭ್ರಷ್ಟಾಚಾರ, ನಾಯಕರ ದುರಂಹಕಾರ, ಅಭಿವೃದ್ಧಿ ಶೂನ್ಯಕ್ಕೆ ಬೇಸತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ದಾವಣಗೆರೆಯ ಪ್ರಜ್ಞಾವಂತ ಮತದಾರರು ಗೆಲ್ಲಿಸಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಬಿಜೆಪಿಯವರ
ದುರಾಡಳತಕ್ಕೆ ಜನತೆ ಕೊಟ್ಟ ಉತ್ತರ. ಮೈಸೂರಿನಲ್ಲಿಯೇ ಪ್ರತಾಪ್ ಸಿಂಹ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವನು ಎಂದೆನಿಸಿಕೊಳ್ಳುವ ಹುಚ್ಚು ಪ್ರಚಾರಕ್ಕಾಗಿ ಪ್ರಭಾ ಮಲ್ಲಿಕಾರ್ಜುನ್
ಅವರ ಬಗ್ಗೆ ಕೇವಲವಾಗಿ ಮಾತನಾಡಿರುವ ಪ್ರತಾಪ್ ಸಿಂಹ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
READ ALSO THIS STORY: ಧರ್ಮದ ಹೆಸರಿನಲ್ಲಿ ಮತ ಪಡೆಯುತ್ತಿರುವ ಬಿಜೆಪಿ ಮುಖವಾಡ ಕಳಚೋಣ: ಸೈಯದ್ ಖಾಲಿದ್ ಅಹ್ಮದ್ ಕರೆ
ದಾವಣಗೆರೆಗೆ ಶಾಮನೂರು ಶಿವಶಂಕರಪ್ಪರ ಕುಟುಂಬ ಕೊಟ್ಟಿರುವ ಕೊಡುಗೆ ಅಪಾರ. ಅಭಿವೃದ್ಧಿ, ದಾನ ಧರ್ಮದಲ್ಲಿಯೂ ಉತ್ತಮ ಹೆಸರು ಪಡೆದಿದೆ. ಪ್ರಭಾ ಮಲ್ಲಿಕಾರ್ಜುನ್ ಅವರು ಅತ್ಯುತ್ತಮ ಸಂಸದೀಯ ಪಟು. ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದು, ಸಹಿಸದೇ ಇಲ್ಲಿನ ಕೆಲ ಬಿಜೆಪಿಯವರು ಹೇಳಿಕೊಟ್ಟು ಪ್ರತಾಪ್ ಸಿಂಹರಿಂದ ಮಾತನಾಡಿಸಿದ್ದಾರೆ. ಇಂಥ ನಾಟಕಕ್ಕೆ ರಾಜ್ಯದ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಮತ್ತೆ ಇದೇ ಮುಂದುವರಿಸಿದರೆ ಮತ್ತೆ ರಾಜಕಾರಣದಲ್ಲಿ ಮಾತನಾಡಿಕೊಂಡೇ ಓಡಾಡಿಕೊಂಡು ಇರಬೇಕಷ್ಟೇ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.