SUDDIKSHANA KANNADA NEWS/ DAVANAGERE/ DATE:27-05-2024
ಬೆಂಗಳೂರು: ಅಶ್ಲೀಲ ವಿಡಿಯೋಗಳ ವೈರಲ್ ನಲ್ಲಿನ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಸಂಸದ ಪ್ರಜ್ವಲ್ ರೇವಣ್ಣ 30 ದಿನಗಳ ಮೂಲಕ ವಿಡಿಯೋ ಮೂಲಕ ಎಲ್ಲಿದ್ಯಪ್ಪ ಪ್ರಜ್ವಲ್ ಎಂಬ ಜನರ ಮಾತಿಗೆ ಪ್ರತ್ಯೇಕ್ಷನಾಗಿದ್ದಾರೆ. ಮೇ. 31ಕ್ಕೆ 10ಗಂಟೆಗೆ ಬೆಂಗಳೂರಿಗೆ ಬರುತ್ತೇನೆ. ಎಸ್ ಐ ಟಿ ಮುಂದೆ ಹಾಜರಾಗ್ತೇನೆ ಎಂದಿದ್ದಾರೆ.
ತಂದೆ, ತಾಯಿ, ಕುಮಾರಣ್ಣ, ಹಾಸನದ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಕ್ಷಮೆ ಕೇಳುತ್ತೇನೆ, ನನ್ನ ಮೇಲೆ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಎಸ್ ಐ ಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತೇನೆ. ಸುಳ್ಳಿನ ಪ್ರಕರಣಗಳಿಂದ ಆಚೆ ಬರುತ್ತೇನೆ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನನ್ನ ಮೇಲೆ ಪಿತೂರಿ ಮಾಡಲಾಗಿದೆ. ವಿಡಿಯೋ ಮುಖಾಂತರ ಖುದ್ದಾಗಿ ಹೇಳಿಕೆ ನೀಡಿರುವ ಪ್ರಜ್ವಲ್ ರೇವಣ್ಣ ನನ್ನ ವಿರುದ್ದ ಷಡ್ಯಂತ್ರ ನಡೆದಿದೆ.ಇದನ್ನು ತಿಳಿದು ಬೇಸರಗೊಂಡು ದೂರವಾಗಿದ್ದೆ. ಮೇ 31 ಕ್ಕೆ ಬರುತ್ತೇನೆ. ಎಸ್.ಐ.ಟಿ ಮುಂದೆ ಹಾಜರಾಗಿ ತನಿಖೆ ಎದುರಿಸುತ್ತೇನೆ. ತಾತ,ತಂದೆ,ತಾಯಿ,ಪಕ್ಷದ ಕಾರ್ಯಕರ್ತರ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಆದ್ರೆ, ಎಲ್ಲಿದ್ದೇನೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಡದ ಪ್ರಜ್ವಲ್ ರೇವಣ್ಣ, ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿಗದಿಯಾಗಿತ್ತು. 26 ನೇ ತಾರೀಕು ಲೋಕಸಭೆ ಚುನಾವಣೆಗೆ ಮತದಾನ ನಡೆದಿತ್ತು. ಪೂರ್ವನಿಗದಿ ಕಾರ್ಯಕ್ರಮ ಇದ್ದರಿಂದ ವಿದೇಶಕ್ಕೆ ಹೋಗಿದ್ದೇನೆ. ನನ್ನ ಮೇಲೆ ಯಾವುದೇ ಪ್ರಕರಣ, ಕೇಸ್ ಆಗಲಿ ಇರಲಿಲ್ಲ. ಎಸ್ ಐ ಟಿ ರಚನೆ ಆಗಿರಲಿಲ್ಲ. ನಾನು ವಿದೇಶಕ್ಕೆ ಹೋದ ಬಳಿಕ ನ್ಯೂಸ್ ಚಾನೆಲ್ ಹಾಗೂ ಯೂಟ್ಯೂಬ್ ನೋಡಿದಾಗ ಈ ಮಾಹಿತಿ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.
ವಿದೇಶದಿಂದಲೇ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಮಾತನಾಡಿದ್ದರು. ಇದನ್ನೆಲ್ಲವನ್ನೂ ನೋಡಿ ಡಿ್ಪ್ರೆಕ್ಷನ್ ಗೆ ಹೋಗಿದ್ದೆ ಎಂದು
ತಿಳಿಸಿದ್ದಾರೆ.ಎಸ್ ಐಟಿ ನೊಟೀಸ್ ಗೆ ಎಕ್ಸ್ ಖಾತೆ ಹಾಗೂ ವಕೀಲರ ಮೂಲಕ ಏಳು ದಿನಗಳ ಕಾಲವಾಕಾಶ ಕೇಳಿದ್ದೆ. ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಆರೋಪ, ಚರ್ಚೆ ನಡೆಸಿದ್ದು, ರಾಜಕೀಯ ಪಿತೂರಿ ನಡೆಸಿದ್ದು ನನಗೆ ಆಘಾತ ತಂದಿತ್ತು
ಎಂದು ಹೇಳಿದ್ದಾರೆ.ಹಾಸನದಲ್ಲಿ ನನ್ನ ವಿರೋಧಿಗಳು, ಕೆಲ ಶಕ್ತಿಗಳು ಪಿತೂರಿ ಮಾಡುತ್ತಿವೆ. ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ಸಹಿಸಲು ಆಗದೇ ಕುತಂತ್ರ ನಡೆಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.