SUDDIKSHANA KANNADA NEWS/ DAVANAGERE/ DATE-24-05-2025
ದಾವಣಗೆರೆ: ಮುಂಬೈನ ದ ತಾಜ್ ಮಹಲ್ ಪ್ಯಾಲೆಸ್ ನ ಸಭಾಂಗಣದಲ್ಲಿ ಶನಿವಾರ ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ಸರ್ಕಾರದ ಭರವಸೆಗಳ ಸಮಿತಿಯ ಸದಸ್ಯರಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಭೆಯಲ್ಲಿ ನಡೆದ ಬಿಎಸ್ಎನ್ಎಲ್ ಸೇವೆಗಳಲ್ಲಿ ಅಡಚಣೆ, ಬಂದರುಗಳು, ಸಾಗಣೆ ಮತ್ತು ಜಲಮಾರ್ಗಗಳು ಹಾಗೂ ವಿಮಾ ಕಂಪನಿಗಳಿಗೆ
ಪರವಾನಗಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಸರ್ಕಾರಿ ಭರವಸೆಗಳ ಸಮಿತಿ ಎನ್ನುವುದು ಸಂಸತ್ತಿನಸಭೆಯ ಅತೀ ಮಹತ್ವದ ಸಮಿತಿಗಳಲ್ಲಿ ಒಂದಾಗಿದ್ದು, ಸಂಸತ್ತಿನ ಕಲಾಪಗಳ ವೇಳೆ ಸಚಿವರುಗಳಿಂದ ನೀಡಲಾದ ಭರವಸೆಗಳು ಹಾಗೂ ಘೋಷಣೆಗಳು ಸಮರ್ಪಕವಾಗಿ ಅನುಷ್ಠಾನವಾಗಿರುವುದೇ ಎಂಬುದನ್ನು ಪರಿಶೀಲಿಸುವ ಉದ್ದೇಶವನ್ನು ಸಮಿತಿ ಹೊಂದಿದೆ.ಈ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರೂ ಆಗಿರುವ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದ್ದಾರೆ.