SUDDIKSHANA KANNADA NEWS/ DAVANAGERE/ DATE:09-08-2024
ದಾವಣಗೆರೆ : ಭಾರತೀಯ ಮಹಿಳಾ ಶೂಟಿಂಗ್ ಆಟಗಾರ್ತಿ ಮನು ಬಾಕರ್ ಅವರು 2024ರ ಪ್ಯಾರಿಸ್‍ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದ ಹಿನ್ನೆಲೆಯಲ್ಲಿ ಇಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಶುಭಕೋರಿದರು.
ಪ್ಯಾರೀಸ್ ಒಲಿಂಪಿಕ್‍ನಲ್ಲಿ ಭಾರತದ ಮೊದಲ ಮತ್ತು ಯಾವುದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಬಾಕರ್ ಅವರನ್ನು ಸಂಸದರು ಅಭಿನಂದಿಸಿದರು.
2018 ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 16 ನೇ ವಯಸ್ಸಿನಲ್ಲಿ ಚಿನ್ನವನ್ನು ಗೆದ್ದ ಮತ್ತು ISSF ವಿಶ್ವಕಪ್‍ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಭಾರತೀಯ ಕ್ರೀಡಾಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಬಾಕರ್ ಅವರನ್ನು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿ ಶುಭ ಹಾರೈಸಿದರು.