SUDDIKSHANA KANNADA NEWS/ DAVANAGERE/DATE:03_09_2025
ದಾವಣಗೆರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಶಾಮನೂರು ಶಿವಶಂಕರಪ್ಪರ ಮನೆ ಮುಂದೆ “ಪೊಮೆರೇನಿಯನ್ ನಾಯಿ”ಯಂತೆ ಕಾಯುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರ ಮನಸ್ಥಿತಿ ತೋರುತ್ತದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿರುಗೇಟು ನೀಡಿದ್ದಾರೆ.
READ ALSO THIS STORY: ಶಾಮನೂರು ಕುಟುಂಬದ ಬಗ್ಗೆ ಬಿ. ಪಿ. ಹರೀಶ್ ಹಗುರವಾಗಿ ಮಾತನಾಡಿದರೆ ಸಹಿಸಲ್ಲ: ಗಡಿಗುಡಾಳ್ ಮಂಜುನಾಥ್ ಎಚ್ಚರಿಕೆ
ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ. ಪಿ. ಹರೀಶ್ ಅವರು ಶಾಮನೂರು ಮನೆ ಮುಂದೆ ನಾಯಿ ರೀತಿ ಕಾಯುತ್ತಾರೆ ಎಂಬ ಆರೋಪ ಕುರಿತಂತೆ ಈ ಪ್ರತಿಕ್ರಿಯೆ ನೀಡಿದರು.
READ ALSO THIS STORY: ದಾವಣಗೆರೆ ಅಭಿವೃದ್ಧಿ ಸಹಿಸಲಾಗದೇ ಬಿ. ಪಿ. ಹರೀಶ್ ರಿಂದ ಹತಾಶೆ ಮಾತು: ಗಜೇಂದ್ರ ಜಗನ್ನಾಥ ಕಿಡಿಕಿಡಿ
ಬಿ. ಪಿ. ಹರೀಶ್ ಅವರ ಹೇಳಿಕೆ ಕುರಿತಂತೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿದ್ದರೆ ವರದಿ ನೀಡುವುದು ಸರ್ಕಾರಿ ಸಿಬ್ಬಂದಿಗಳ ಕರ್ತವ್ಯ. ಈ ಸೇವೆಯನ್ನು “ಪೊಮೆರೇನಿಯನ್ ನಾಯಿ”ಗೆ ಹೋಲಿಸಿದರೆ ಅವರ ಮನಸ್ಥಿತಿ ಹೇಳುತ್ತದೆ ಎಂದು ನನಗನಿಸುತ್ತದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು.