SUDDIKSHANA KANNADA NEWS/ DAVANAGERE/DATE:02_09_2025
ದಾವಣಗೆರೆ: ಶಾಮನೂರು ಮನೆತನದವರು ಒಂದು ಗಂಟೆ ತಡವಾಗಿ ಬಂದರೂ “ಪೊಮೆರೇನಿಯನ್ ನಾಯಿ” ರೀತಿಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೇಟ್ ಬಾಗಿಲಿನಲ್ಲಿ ಕಾಯುತ್ತಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಕೆಂಡಮಂಡಲರಾದರು.
READ ALSO THIS STORY: ಮಸೀದಿ ಪಕ್ಕದಲ್ಲೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ, ತಣ್ಣಗಿರದಿದ್ರೆ ಒಳಗೆ ಹಾಕಿಸ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗರಂ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಸಭೆಗೆ ಬಂದರೆ ಮುಖ ತಿರುಗಿಸಿಕೊಂಡು ಎಸ್ಪಿ ಕುಳಿತುಕೊಳ್ಳುತ್ತಾರೆ. ಅದೇ ಶಾಮನೂರು ಮನೆತನದವರು ಬಂದರೆ ಪೊಮೆರೇನಿಯನ್ ನಾಯಿ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಯಾಕೆ ಹೀಗೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಭಾಷಣ ಮುಗಿದ ಬಳಿಕ ಡಿಸಿ, ಎಸ್ಪಿ, ಕಮೀಷನರ್ ಕೂರಿಸಿಕೊಂಡು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ರಾಜಕೀಯ ಭಾಷಣ ಮಾಡಿದ್ದಾರೆ. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ
ಅವರನ್ನು ಅವನು, ಇವನು ಎಂದು ಮಾತನಾಡಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿ ಅವರಿಗಾದರೂ ತಿಳುವಳಿಕೆ ಬೇಡವಾ. ರಾಜಕೀಯ ಪತ್ರಿಕಾಗೋಷ್ಠಿ ನಡೆಸುತ್ತಿದ್ದರೂ ಎದ್ದು ಹೋಗದೇ ಸುಮ್ಮನೆ ಕುಳಿತಿದ್ದಾರೆ ಎಂದು ಛಾಡಿಸಿದರು.
ಹರಿಹರ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಬರುತ್ತಾರೆಂದು ಅರ್ಧಗಂಟೆ ಉರಿಬಿಸಿಲಿನಲ್ಲಿ ದಾವಣಗೆರೆ ಎಸ್ಪಿ ನಿಂತಿದ್ದರು. ತಡವಾಗಿ ಬರುವುದು ಶಾಮನೂರು ಮನೆತನದ ಗುಣ. ಪಾಪ ಜನರು ಶ್ರೀಮಂತಿಕೆಗೋಸ್ಕರ ಕಾಯುತ್ತಾರೆ. ಸೆಂಟ್ ಕಾನ್ವೆಂಟ್ ನಲ್ಲಿ ಮಕ್ಕಳನ್ನು ಹತ್ತೂವರೆಯವರೆಗೆ ಕೂರಿಸಿದ್ದಾರೆ. ಆ ತಾಯಿ 12 ಗಂಟೆಗೆ ಬಂದರು. ಹರಿಹರದಲ್ಲಿ ಕಾರ್ಯಕ್ರಮದ ನಿಮಿತ್ತ ನಾನು ಹೋದೆ. ಅದೇ ಎಸ್ಪಿ ಇದ್ದಿದ್ದರೆ ಒಂದೂವರೆ ಗಂಟೆ ಶಾಲೆಯ ಬಾಲಿಗಿನಲ್ಲಿ ಕಾಯುತ್ತಿದ್ದರು ಎಂದು ಕಿಡಿಕಾರಿದರು.
ನಾನೊಬ್ಬ ಶಾಸಕ. ಪ್ರಭಾ ಮಲ್ಲಿಕಾರ್ಜುನ್ ಲೋಕಸಭಾ ಸದಸ್ಯರು. ಇಬ್ಬರೂ ಜನಪ್ರತಿನಿಧಿಗಳೇ. ಎಸ್ಪಿ ಅವರಿಗೆ ಒಂದೇ ಅವರಿಗೆ ಆಗಬೇಕಿತ್ತು. ಶ್ರೀಮಂತರು, ಅಧಿಕಾರದ ಮದದಡಿ ಇದ್ದರೆ ಒಳ್ಳೆಯದಾಗುತ್ತದೆ ಎಂದು ಎಸ್ಪಿ ಅಂದುಕೊಂಡಿದ್ದಾರೆ. ಇದು ಬಹಳ ದಿನ ನಡೆಯಲ್ಲ. ಬಹಳ ದಿನ ಇರಲು ಸಾಧ್ಯವೂ ಇಲ್ಲ, ತಾತ್ಕಾಲಿಕ ಲಾಭ ಅಷ್ಟೇ. ತುಂಬಾ ನೋವಾಯ್ತು ಎಂದು ಹರೀಶ್ ಹೇಳಿದರು.
ಆಗಸ್ಟ್ 15ರಂದು ಇರಲಿಲ್ಲ. ಇದ್ದಿದ್ದರೆ ಅಂದೇ ಪ್ರತಿಭಟಿಸುತ್ತಿದ್ದೆ. ಸಚಿವ ಮಲ್ಲಿಕಾರ್ಜುನ್ ಅವರಿಗಾದರೂ ಜ್ಞಾನ ಬೇಡವೇ. ಅಧಿಕಾರಿಗಳನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಬಾರದು ಎಂಬ ತಿಳುವಳಿಕೆ ಇಲ್ಲವಾ? ಪತ್ರಕರ್ತರು ಯಾರೂ ಪ್ರಶ್ನೆ ಕೇಳಿಲ್ಲ. ನಮ್ಮಂಥವರಿಗಾದರೆ ಪ್ರಶ್ನೆ ಕೇಳುತ್ತೀರಾ. ಸಣ್ಣ ತಪ್ಪು ಮಾಡಿದರೂ ಕೇಳುತ್ತೀರಾ. ನಾವು ಹುಟ್ಟು ಹೋರಾಟಗಾರರು. ನಮಗೆ ಭಯವಿಲ್ಲ. ಅವರಿಗೂ ಪ್ರಶ್ನೆ ಕೇಳಬೇಕು. ರಾಜಕೀಯ ಶುರುವಾದಕ್ಷಣ ಎದ್ದು ಹೋಗಬೇಕಲ್ವ. ಪೊಮೆರೇನಿಯನ್ ನಾಯಿಗಳ ರೀತಿಯಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ ಸೇರಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.
ಹರಿಹರದಲ್ಲಿ ಗಣೇಶೋತ್ಸವ ಕುರಿತ ಶಾಂತಿ ಸಭೆಗೆ ಎಸ್ಪಿ ಅವರು ಹರಿಹರಕ್ಕೆ ಬಂದರೂ ಆ ಕಡೆ ತಿರುಗಿ ಕೂತರು. ನಾನು ಹಂಗೆ ಇದ್ದೆ. ನಿಜವಾಗಿಯೂ ಆ ಸಂದರ್ಭದಲ್ಲಿ ಡಿವೈಎಸ್ಪಿ ಬಸವರಾಜಪ್ಪ ಅವರಿಗೆ ನೇರವಾಗಿ ಏನು ತಿಳಿಸಬೇಕೋ ಅದನ್ನು ತಿಳಿಸಿದ್ದೇನೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.