ದಾವಣಗೆರೆ: “ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಗೆಲುವು ನಿಶ್ಚಿತ,” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಸುದೀರ್ಘ ಆಡಳಿತದಲ್ಲಿ ಕ್ಷೇತ್ರವು ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಬಾರಿಯ ಉಪಚುನಾವಣೆ ರಾಜ್ಯ ರಾಜಕಾರಣದ ದಿಕ್ಸೂಚಿಯಾಗಲಿದ್ದು, ಹಣಬಲ ಮತ್ತು ತೋಳ್ಬಲದ ವಿರುದ್ಧ ಸಾಮಾನ್ಯ ಕಾರ್ಯಕರ್ತ ಜಯಗಳಿಸಲಿದ್ದಾನೆ ಎಂದರು.
ಮುಖ್ಯಾಂಶಗಳು:
ಅಭಿವೃದ್ಧಿ ಶೂನ್ಯ: ದಶಕಗಳಿಂದ ಕಾಂಗ್ರೆಸ್ ಹಿಡಿತದಲ್ಲಿದ್ದರೂ ದಕ್ಷಿಣ ಕ್ಷೇತ್ರದಲ್ಲಿ ಯಾವುದೇ ಪ್ರಗತಿಯಾಗಿಲ್ಲ.
ಸಾಮಾನ್ಯನಿಗೆ ಮಣೆ: ಹಮಾಲಿ ಕೆಲಸಗಾರನ ಮಗ, ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೊಸ ಸಮೀಕರಣ ಸೃಷ್ಟಿಸಿದೆ.
ಒಗ್ಗಟ್ಟಿನ ಹೋರಾಟ: ಆರಂಭಿಕ ಗೊಂದಲಗಳಿದ್ದರೂ, ಈಗ ಪಕ್ಷದ ಎಲ್ಲಾ ನಾಯಕರು ಒಂದಾಗಿ ಕಮಲ ಅರಳಿಸಲು ಪಣತೊಟ್ಟಿದ್ದಾರೆ.
ಅಹಿಂದ ವರ್ಗದ ಬೆಂಬಲ: ಹಿಂದುಳಿದ ಮತ್ತು ದಲಿತ ವರ್ಗಗಳ ಹಿತರಕ್ಷಣೆಗಾಗಿ ಬಿಜೆಪಿ ಗೆಲುವು ಅನಿವಾರ್ಯ ಎಂದು ವಿಜಯೇಂದ್ರ ಪ್ರತಿಪಾದಿಸಿದರು.





Leave a comment