SUDDIKSHANA KANNADA NEWS/ DAVANAGERE/ DATE:12-06-2023
ಬೆಂಗಳೂರು (Bangalore) : ಪಿಎಸ್ಐಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಇಬ್ಬಗೆ ನೀತಿ ಬಟಾಬಯಲಾಗಿದೆ. ಪೊಲೀಸರ (Police) ಕೌಟುಂಬಿಕ ಕಾರಣಗಳಿಗಾಗಿ ವೈಯಕ್ತಿಕ ಕೋರಿಕೆ ಮೇಲೆ ವರ್ಗಾವಣೆಗೆ ಅವಕಾಶ ಇಲ್ಲ ಎನ್ನೋದು ಸರಿಯಾದ ಕ್ರಮ ಅಲ್ಲ. ಒಂದೇ ವಲಯದಲ್ಲಿ ಹದಿನೈದರಿಂದ ಇಪ್ಪತ್ತು ವರ್ಷ ಪದೋನ್ನತಿ ಹೊಂದುವವರೆಗೆ ಅಲ್ಲೇ ಕೆಲಸ ಮಾಡಿದರೆ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮಾತ್ರವಲ್ಲ, ವೈಯಕ್ತಿಕವಾಗಿ ಬೆಳೆಯುತ್ತಾರೆ ಹೊರತು ಜನಸೇವೆ ಮಾಡುವುದು ಕಡಿಮೆ. ಹಾಗಾಗಿ ಪೊಲೀಸ್ (Police) ಸಬ್ ಇನ್ ಸ್ಪೆಕ್ಟರ್, ಸಿಬ್ಬಂದಿಯ ಕುಟುಂಬದವರಿಗೆ ತೊಂದರೆಯಾಗುತ್ತಿದೆ.
ಈಗಾಗಲೇ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿರುವ ಪಿಎಸ್ಐ ಗಳ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿದೆ. ಇದಕ್ಕೆ ಜಿ. ಪರಮೇಶ್ವರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿಟ್ಟು ತಿದ್ದುಪಡಿ ಮಾಡಬೇಕಿದೆ.
ಇದು ಆಗುತ್ತಾ ಎಂದು ಕಾಯುತ್ತಿರುವ ಪೊಲೀಸ್ ಅಧಿಕಾರಿಗಳು, ಕುಟುಂಬದವರಿಗೆ ಸರ್ಕಾರ ಗುಡ್ ನ್ಯೂಸ್ ಕೊಡುತ್ತಾ ಎಂದು ಎದುರುನೋಡುತ್ತಿದ್ದಾರೆ.
ಪೊಲೀಸ್ (Police) ವರ್ಗಾವಣೆ ಯಾಕಾಗಿ…?
ಪೊಲೀಸ್ (Police) ಅಧಿಕಾರಿಗಳ ತಂದೆ ತಾಯಿಯವರು ಅನಾರೋಗ್ಯಪೀಡಿತರಾಗಿದ್ದು/ ವಯಸ್ಸಾದ ಹಿರಿಯ ನಾಗರೀಕರಾಗಿದ್ದು ಅವರ ಪಾಲನೆ, ಪೋಷಣೆ ಮತ್ತು ಆರೈಕೆ ಸಲುವಾಗಿ ಅವರೊಟ್ಟಿಗೆ ಇರಬೇಕಾದ ಸಂದರ್ಭದಲ್ಲಿ ದೂರದವಲಯ/ ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ವೈಯಕ್ತಿಕ ಕೋರಿಕೆ ಮೇಲೆ ವರ್ಗಾವಣೆ ಬಯಸಿದ್ದಲ್ಲಿ ಅದಕ್ಕೆಅವಕಾಶ ಇಲ್ಲ.
ಪೊಲೀಸ್ (Police) ಅಧಿಕಾರಿಗಳು ಪತಿ-ಪತ್ನಿ ಪ್ರಕರಣದ ಅಡಿಯಲ್ಲಿ ವರ್ಗಾವಣೆ ಬಯಸಿದ್ದಲ್ಲಿ ಅದಕ್ಕೆ ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರೈಸಿರಬೇಕು. ಬೇರೆವಲಯ/ಜಿಲ್ಲೆಗೆ ವರ್ಗಾವಣೆ ಹೋಗುವಾಗ ಸೇವಾ ಜೇಷ್ಠತೆಯನ್ನು ಬಿಟ್ಟುಕೊಟ್ಟು ಹೋಗಬೇಕು ಎಂಬ ನಿಯಮವಿದ್ದು ಪತಿ-ಪತ್ನಿ ಪ್ರಕರಣದ ನೌಕರರ ವರ್ಗಾವಣೆಗೆ ಅನಾನುಕೂಲವಾಗಿರುತ್ತದೆ.
ಮಾಜಿ ಸೈನಿಕ ಕೋಟಾದ ಅಡಿಯಲ್ಲಿ ಸೇವೆಗೆ ಸೇರಿರುವ ಪೊಲೀಸ್ ಅಧಿಕಾರಿಗಳು ಸಹ ಕೌಟುಂಬಿಕ ಕಾರಣಗಳ ಅಡಿಯಲ್ಲಿ ವರ್ಗಾವಣೆ ಬಯಸಿದಲ್ಲಿ ಕನಿಷ್ಠ 3ವರ್ಷಗಳ ಸೇವೆಯನ್ನು ಪೂರೈಸಿರಬೇಕು ಹಾಗು ಬೇರೆ ವಲಯ/ಜಿಲ್ಲೆಗೆ ವರ್ಗಾವಣೆ ಹೋಗುವಾಗ ಸೇವಾಜೇಷ್ಠತೆಯನ್ನು ಬಿಟ್ಟುಕೊಟ್ಟು ಹೋಗಬೇಕು ಎಂಬ ನಿಯಮವಿದ್ದು ವರ್ಗಾವಣೆಗೆ ಅನಾನುಕೂಲವಾಗಿರುತ್ತದೆ.
ಸರ್ಕಾರಿ ನೌಕರರು ಕುಟುಂಬದವರ ಬಗ್ಗೆ ನಿರ್ಲಕ್ಷಿಸುವಂತಿಲ್ಲ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ತಮ್ಮ ಕುಟುಂಬದ ಬಗ್ಗೆ ನಿರ್ಲಕ್ಷತೆ ತೋರುವಂತಿಲ್ಲ, ಹಾಗೇನಾದರೂ ಕುಟುಂಬದ ಕಡೆ ಗಮನ ನೀಡದಿದ್ದಲ್ಲಿ ಅದುಸರ್ಕಾರಿ ನಿಯಮಗಳು ಮತ್ತು ಕಾನೂನುಗಳ ಪ್ರಕಾರ ದುರ್ನಡತೆಯೂ ಹಾಗೂ ಅಪರಾಧವೂಆಗಿರುತ್ತದೆ.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆಯ ಹಳ್ಳಿ ಬೆಡಗಿ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಆದದ್ದೇ ರೋಚಕ…! ಹೆಣ್ಣುಮಕ್ಕಳಿಗೆ ಸ್ಫೂರ್ತಿ ತುಂಬುವ ಸ್ಪೆಷಲ್ ಸ್ಟೋರಿ
ಬಿಡುವಿನ ಇಲಾಖೆಯ ಸರ್ಕಾರಿ ನೌಕರರು ತಮ್ಮ ಬಿಡುವಿನ ವೇಳೆಯಲ್ಲಿ ಹಾಗೂ ಸರ್ಕಾರಿ ರಜಾದಿನಗಳಲ್ಲಿ ತಮ್ಮ ಕುಟುಂಬಕ್ಕೆ ಸಮಯವನ್ನು ನೀಡಬಹುದಾಗಿರುತ್ತದೆ. ಆದರೆ ಬಿಡುವಿಲ್ಲದ ಇಲಾಖೆಯಾದ ಪೊಲೀಸ್ (Police)ನೌಕರರಿಗೆ ಅಂತಹ ಸಮಯಾವಕಾಶ ದೊರಕುವುದು ತೀರಾ ಕಡಿಮೆ, ಅದರಲ್ಲೂ ಕುಟುಂಬದಿಂದ ದೂರದವಲಯ/ ಜಿಲ್ಲೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿ-ವೃಂದದಪೊಲೀಸ್ ಅಧಿಕಾರಿಗಳಿಗೆ(PC to PSI) ತಮ್ಮ ಕುಟುಂಬದ ಕಡೆಗಮನಹರಿಸಲು ಸಾಧ್ಯವೇ ಇಲ್ಲ. ಆದ್ದರಿಂದಇದು ಒಂದು ರೀತಿಯಲ್ಲಿ ಸ್ವತಃ ಅಂತಹ ಅಧಿಕಾರಿಗಳಿಗೆ ಮಾನಸಿಕ ತೊಂದರೆಯೂ
ಕಾನೂನಾತ್ಮಕಸಂಘರ್ಷವೂಆಗಿರುತ್ತದೆ.
ಇಬ್ಬಗೆ ನೀತಿ:
ಸಿ-ವೃಂದದ ಪೊಲೀಸ್ ( Police) ಅಧಿಕಾರಿಗಳಾದ (PC to PSI) ರವರುಗಳಿಗೆಅಂತರ್ ಜಿಲ್ಲಾ/ವಲಯದವರ್ಗಾವಣೆಗೆ ಅವಕಾಶವಿಲ್ಲದ ಕಾರಣ ನೇಮಕಾತಿ ಹೊಂದಿದ ಜಿಲ್ಲೆ/ ವಲಯದಲ್ಲಿಯೇ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆಯ ಒತ್ತಡವಿರುತ್ತದೆ. ಇದರಿಂದ ಸರ್ಕಾರವೇ ಇವರನ್ನು ಕುಟುಂಬದಿಂದ ದೂರವಿಟ್ಟಂತಾಗಿದ್ದು ಸರ್ಕಾರದ ಇಬ್ಬಗೆಯ ನೀತಿಯಾಗಿರುತ್ತದೆ.
PC ಹುದ್ದೆಯ ಅಧಿಕಾರಿಗಳನ್ನು ಜಿಲ್ಲಾಮಟ್ಟಕ್ಕೆ ನೇಮಕಾತಿ ಮಾಡಿಕೊಂಡಿದ್ದು, ಅವರನ್ನು ನೇಮಕಾತಿ ಹೊಂದಿದ ಜಿಲ್ಲೆಯಾದ್ಯಂತ ವರ್ಗಾವಣೆಮಾಡಬಹುದಾಗಿರುತ್ತದೆ. PC ಹುದ್ದೆಯ ಅಧಿಕಾರಿಗಳಿಗೆ ಮುಂಬಡ್ತಿ (HC, ASI) ನೀಡಿದ್ದಲ್ಲಿ ಅವರನ್ನ ಅದೇ ಜಿಲ್ಲೆಯಲ್ಲಿಯೇ ನಿಯೋಜಿಸಲಾಗುತ್ತದೆ. ಆದ್ದರಿಂದ ಸೇವಾವದಿಯಲ್ಲಿ ನೇಮಕಾತಿ ಹೊಂದಿದ ಜಿಲ್ಲೆ ಬಿಟ್ಟು ಹೊರಗೆ ಹೋಗುವ ಸಂಭವವಿರುವುದಿಲ್ಲ ಹಾಗೂ ವೈಯಕ್ತಿಕ ಕೋರಿಕೆ ಮೇರೆಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿರುವುದಿಲ್ಲ. PC ಇಂದ ASI ವರೆಗಿನ ಹುದ್ದೆಯ ಜೇಷ್ಠತಾ ಪಟ್ಟಿಯನ್ನು ಜಿಲ್ಲಾಮಟ್ಟದಲ್ಲಿಯೇ ನಿರ್ವಹಣೆ ಮಾಡಲಾಗುತ್ತದೆ.
ಕುಟುಂಬದಿಂದ ದೂರವಿರುವ ಜಿಲ್ಲೆಗೆ ನೇಮಕವಾಗಿರುವ PC ಗಳು ಅನಿವಾರ್ಯವಾಗಿ ಕುಟುಂಬವನ್ನು ನಿರ್ಲಕ್ಷಿಸುವ ಪರಿಸ್ಥಿತಿಯಲ್ಲಿರುತ್ತಾರೆ. ಆ ಕಾರಣಕ್ಕಾಗಿ PC/HC/ASI ಹುದ್ದೆಯಅಧಿಕಾರಿಗಳು ವೈಯಕ್ತಿಕ ಕೋರಿಕೆ ಮೇಲೆ ಕೌಟುಂಬಿಕ ಕಾರಣಗಳಿಗಾಗಿ ವರ್ಗಾವಣೆ ಕೋರಿದಾಗ ಪರಿಶೀಲಿಸಿ ಸೂಕ್ತ ಕಾರಣಗಳಿದ್ದಲ್ಲಿ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕಿರುತ್ತದೆ.
PC ಇಂದ ASI ವರೆಗಿನಜೇಷ್ಠತಾಪಟ್ಟಿಯನ್ನು ಜಿಲ್ಲಾಮಟ್ಟದಲ್ಲಿ ನಿರ್ವಹಿಸುವ ಕಾರಣ ಜೇಷ್ಠತೆ ಬಿಟ್ಟು ವರ್ಗಾವಣೆ ಹೊಂದಲು ಅಧಿಕಾರಿಗಳ ಆಕ್ಷೇಪಣೆಯಿಲ್ಲದಿದ್ದರೂ ಸಹ ವರ್ಗಾವಣೆಗೆಬೇಕಾದ ಕನಿಷ್ಟ ಸೇವಾವಧಿಯೂ ವೈಙ್ನಾನಿಕವಾಗಿರಬೇಕಿದೆ. ಈ ಬಗ್ಗೆಸಂಬಂದಿಸಿದ ವರ್ಗಾವಣೆ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಸರ್ಕಾರವು
ಮಾಡಬೇಕಿದೆ.
ಪಿಎಸ್ಐ ಹುದ್ದೆಯ ಅಧಿಕಾರಿಗಳನ್ನು ರಾಜ್ಯಮಟ್ಟದಲ್ಲಿ ನೇಮಕಾತಿ ಮಾಡಿಕೊಂಡಿದ್ದು, ನಂತರವಲಯ/ ಆಯುಕ್ತಾಲಯಗಳಿಗೆ ನಿಯೋಜಿಸಲಾಗುತ್ತದೆ. ಒಂದುವಲಯ/ಆಯುಕ್ತಾಲಯಗಳಲ್ಲಿ ಹಲವಾರು ಜಿಲ್ಲೆಗಳು/ವಿಭಾಗಗಳಿದ್ದು ಅಲ್ಲೆಲ್ಲಾ ವರ್ಗಾವಣೆ ಮಾಡಬಹುದಾಗಿರುತ್ತದೆ. ಪಿಎಸ್ಐರವರುಗಳ ಜೇಷ್ಠತಾ ಪಟ್ಟಿಯನ್ನು ವಲಯಮಟ್ಟದಲ್ಲಿ ನಿರ್ವಹಿಸಲಾಗುತ್ತದೆ. ಆದರೆ ಅಲ್ಲಿಯೇ ಮುಂಬಡ್ತಿಯನ್ನುನೀಡುವುದಿಲ್ಲ.
ಎಲ್ಲಾ ವಲಯಗಳ ಜೇಷ್ಠತಾ ಪಟ್ಟಿಯನ್ನು ಪಡೆದುಕೊಂಡು ರಾಜ್ಯಮಟ್ಟದಲ್ಲಿ ಕ್ರೋಡೀಕರಿಸಿ ರಾಜ್ಯಮಟ್ಟದ ಜೇಷ್ಠತಾಪಟ್ಟಿಯ ಪ್ರಕಾರ ಮುಂಬಡ್ತಿಯನ್ನುನೀಡಲಾಗುತ್ತದೆ. ಆದ್ದರಿಂದ ಪಿಎಸ್ಐ ಹುದ್ದೆಯು ರಾಜ್ಯಮಟ್ಟದಸಿ- ವೃಂದದಹುದ್ದೆಯಾಗಿದ್ದು ಪಿಎಸ್ಐಗಳನ್ನುರಾಜ್ಯದ ಯಾವುದೇ ವಲಯದಿಂದ ಯಾವುದೇ ವಲಯಕ್ಕೆ ಜೇಷ್ಠತೆಗೆ ದಕ್ಕೆಯಾಗದೇ ವರ್ಗಾವಣೆ ಮಾಡಬಹುದಾಗಿರುತ್ತದೆ.
2015ಕ್ಕೂ ಮುಂಚೆ ರಾಜ್ಯಮಟ್ಟದಲ್ಲಿ ಪೊಲೀಸ್ ಪ್ರಧಾನಕಛೇರಿಯಿಂದ ವರ್ಗಾವಣೆಯನ್ನು ಇದೇರೀತಿಯಲ್ಲಿ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಲಯಮಟ್ಟದಲ್ಲಿ ಪಿಎಸ್ಐರವರ ವರ್ಗಾವಣೆಗಳನ್ನು ಮಾಡುತ್ತಿದ್ದು ವರ್ಷಕ್ಕೊಮ್ಮೆ ವರ್ಗಾವಣೆ ಹೊಂದುವ ಪಿಎಸ್ಐ ಹುದ್ದೆಯ ನೌಕರರು ವಯಸ್ಸಾದ ಹಿರಿಯ ನಾಗರೀಕರಾದ ಮತ್ತು ಅನಾರೋಗ್ಯಕ್ಕೆ ತುತ್ತಾದ ತಮ್ಮ ತಂದೆತಾಯಿಯವರನ್ನು ಪದೇಪದೇ ತಮ್ಮೊಟ್ಟಿಗೆ ವರ್ಗಾವಣೆಯಾದಾಗ ಕರೆದುಕೊಂಡು ಹೋಗುವುದುಕಷ್ಟ ಸಾಧ್ಯವಾಗಿರುತ್ತದೆ.
ಕುಟುಂಬದಿಂದ ದೂರವಿರುವವಲಯಗಳಿಗೆ ನೇಮಕವಾಗಿರುವ ಪಿಎಸ್ಐಗಳು ಅನಿವಾರ್ಯವಾಗಿ ಕುಟುಂಬವನ್ನು ನಿರ್ಲಕ್ಷಿಸುವ ಪರಿಸ್ಥಿತಿಯಲ್ಲಿರುತ್ತಾರೆ. ಹಾಗೂಹಾಲಿಇರುವನಿಯಮಗಳ ಪ್ರಕಾರ ಕನಿಷ್ಠ ವಾರದ ರಜೆಗೂ ಅವಕಾಶವಿಲ್ಲದ, 24*7ಕರ್ತವ್ಯನಿರ್ವಹಿಸುವ ಪಿಎಸ್ಐ ಹುದ್ದೆಯ ಅಧಿಕಾರಿಗಳು ದೂರದಲ್ಲಿರುವ ತಮ್ಮ ತಂದೆತಾಯಿಯನ್ನಷ್ಟೆ ಅಲ್ಲದೇ
ಜೊತೆಯಲ್ಲಿರುವತಮ್ಮಪತಿ/ಪತ್ನಿಹಾಗೂಮಕ್ಕಳನ್ನೂ ಸಹ ನಿರ್ಲಕ್ಷಿಸುವಂತಾಗಿದೆ. ಆ ಕಾರಣಕ್ಕಾಗಿ ಪಿಎಸ್ಐ ಹುದ್ದೆಯ ಅಧಿಕಾರಿಗಳು ವೈಯಕ್ತಿಕ ಕೋರಿಕೆ ಮೇಲೆ ಕೌಟುಂಬಿಕ ಕಾರಣಗಳಿಗಾಗಿ ವರ್ಗಾವಣೆ ಕೋರಿದಾಗ ಪರಿಶೀಲಿಸಿ ಸೂಕ್ತ ಕಾರಣಗಳಿದ್ದಲ್ಲಿ ವರ್ಗಾವಣೆಗೆ ಅವಕಾಶಮಾಡಿಕೊಡಬೇಕಿರುತ್ತದೆ ಹಾಗೂ ಪಿಎಸ್ಐರವರ ಜೇಷ್ಠತಾಪಟ್ಟಿಯನ್ನು ರಾಜ್ಯಮಟ್ಟದಲ್ಲಿ ಕ್ರೋಡೀಕರಿಸಿ ನಿರ್ವಹಿಸುವ ಕಾರಣ ಜೇಷ್ಠತೆಗೆ ಧಕ್ಕೆಯಾಗದೆ ವರ್ಗಾವಣೆ ಮಾಡಬಹುದಾಗಿರುತ್ತದೆ.
ವರ್ಗಾವಣೆಗೆ ಬೇಕಾದ ಕನಿಷ್ಟ ಸೇವಾವಧಿಯು ವೈಙ್ನಾನಿಕವಾಗಿರಬೇಕಿದೆ. ಈ ಬಗ್ಗೆ ಸಂಬಂದಿಸಿದ ವರ್ಗಾವಣೆ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಸರ್ಕಾರವು ಮಾಡಬೇಕಿದೆ.
ಅನಾನುಕೂಲಗಳು ಏನು…?
ಸಿ-ವೃಂದದ ಪಿಸಿ ಇಂದ ಪಿಎಸ್ಐವರೆಗಿನ ಅಧಿಕಾರಿಗಳು ತಳಹಂತದ ಅಧಿಕಾರಿಗಳಾಗಿದ್ದು ಸರ್ಕಾರದ ನೀತಿ ನಿಯಮಗಳನ್ನು ನೇರವಾಗಿ ಜಾರಿ ಮಾಡುವ ಜವಾಬ್ದಾರಿ ಇವರ ಮೇಲಿದ್ದು ಕೌಟುಂಬಿಕವಾಗಿ ನೊಂದಿರುವ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುವಲ್ಲಿ ಎಡವುವ ಸಾಧ್ಯತೆ ಇರುತ್ತದೆ.
ಕೌಟುಂಬಿಕವಾಗಿ ನೊಂದಅಧಿಕಾರಿಗಳು ಮಾನಸಿಕವಾಗಿ ಕುಗ್ಗಿ, ಸ್ಥೈರ್ಯಕ ಳೆದುಕೊಂಡರೆ ಪೊಲೀಸ್ (Police) ಕರ್ತವ್ಯ ನಿರ್ವಹಿಸುವುದು ಕೂಡ ಕಷ್ಠಕರವಾಗಿರುತ್ತದೆ.
ಕೌಟುಂಬಿಕವಾಗಿ ನೊಂದ ಅಧಿಕಾರಿಗಳು ಸ್ವತಃ ಅನಾರೋಗ್ಯಕ್ಕೆ ತುತ್ತಾಗುವ/ ಮನೋಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಕೌಟುಂಬಿಕವಾಗಿ ನೊಂದ ಅಧಿಕಾರಿಗಳು ಮಾನಸಿಕ ಒತ್ತಡದ ಕಾರಣಗಳಿಂದ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸದೇ ಇರುವ ಸಾಧ್ಯತೆಗಳಿದ್ದು ಇಲಾಖೆಗೆ ಮತ್ತು ಸರ್ಕಾರಕ್ಕೆಕೆಟ್ಟಹೆಸರು.
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಾರಣಗಳಿಗಾಗಿ ಪೊಲೀಸ್ ಇಲಾಖೆಯಲ್ಲಿ ಆತ್ಮಹತ್ಯೆಗಳು ಸಾಮಾನ್ಯವಾದಂತೆ ಕಂಡುಬಂದಿರುತ್ತದೆ
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಾರಣಗಳಿಗಾಗಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಮದ್ಯಪಾನ ಮತ್ತು ಧೂಮಪಾನದ ಚಟಗಳ ದಾಸರಾಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿಅನಾರೋಗ್ಯದ ಕಾರಣಗಳಿಗಾಗಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಸಾವನ್ನಪ್ಪುವುದು ಸಹ ಹೆಚ್ಚಾಗಿದೆ.
ಆದ್ದರಿಂದ ಸರ್ಕಾರವು ಸೂಕ್ತವೈಯಕ್ತಿಕ ಕಾರಣಗಳಿರುವ ಸಿ-ವೃಂದದ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆಗೆ ಅವಕಾಶಮಾಡಿಕೊಡಲು, ವರ್ಗಾವಣೆ ನಿಯಮಗಳಿಗೆ ತಿದ್ದುಪಡಿಮಾಡಿ ಈ ಹಿಂದೆ ಇದ್ದಂತೆ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕಿದೆ.
ಹಿಂದೆ ಯಾವ ನಿಯಮವಿತ್ತು…?
ಪೊಲೀಸ್ ಕಾನ್ಸ್ಟೇಬಲ್ CPC/APC/SplRPCಹುದ್ದೆಯ ಅಧಿಕಾರಿಗಳು ವೈಯಕ್ತಿಕ ಕಾರಣಗಳಿಗಾಗಿ ಒಂದು ಜಿಲ್ಲೆಯಿಂದ/ಘಟಕದಿಂದ ಮತ್ತೊಂದುಜಿಲ್ಲೆ/ಘಟಕಕ್ಕೆ ವರ್ಗಾವಣೆ ಬಯಸಿದರೆ, ಆ ಅಧಿಕಾರಿಯನ್ನು ವರ್ಗಾವಣೆ ಮಾಡಲು ಅಂತಹ ಸಿಬ್ಬಂದಿಯು ಪ್ರೊಬೇಷನ್ ಅವಧಿ ಮುಗಿಸಿರಬೇಕು, ಹಾಗೂ ವರ್ಗಾವಣೆ ಕೇಳಿದ ಜಿಲ್ಲೆ/ಘಟಕದಲ್ಲಿ ಸದರಿ ಹುದ್ದೆಯರಿಕ್ತ ಸ್ಥಾನ ಇರಬೇಕುಮತ್ತುಸೇವಾಜೇಷ್ಠತೆಯನ್ನು ಬಿಟ್ಟುಕೊಟ್ಟು ಹೋಗಬೇಕು.(CHC/AHC/SplRHCಹಾಗೂ ASI ಹುದ್ದೆಯ ಅಧಿಕಾರಿಗಳಿಗೂ ಸಹ ಮೇಲ್ಕಂಡಂತೆ ವರ್ಗಾವಣೆ ಮಾಡಲಾಗುತ್ತಿತ್ತು)
PSI/RSI/SplRSI ಹುದ್ದೆಯ ಅಧಿಕಾರಿಗಳು ವೈಯಕ್ತಿಕ ಕಾರಣಗಳಿಗಾಗಿ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ವರ್ಗಾವಣೆ ಬಯಸಿದರೆ, ಆ ಅಧಿಕಾರಿಯನ್ನು ವರ್ಗಾವಣೆ ಮಾಡಲು ಅಂತಹ ಅಧಿಕಾರಿಯು ಪ್ರೊಬೇಷನ್ ಅವಧಿ ಮುಗಿಸಿರಬೇಕು, ಹಾಗೂ ವರ್ಗಾವಣೆ ಕೇಳಿದ ವಲಯದಲ್ಲಿ ಸದರಿ ಹುದ್ದೆಯರಿಕ್ತ ಸ್ಥಾನ ಇರಬೇಕು. ಒಂದು ಬಾರಿಗೆ ವೈಯಕ್ತಿಕ ಕೋರಿಕೆ ವರ್ಗಾವಣೆಗೆ ಜೇಷ್ಠತೆಗೆ ಧಕ್ಕೆಯಾಗದಂತೆ ವರ್ಗಾವಣೆ ಮಾಡಬಹುದಾಗಿತ್ತು.
ಪಿಎಸ್ಐ ಹುದ್ದೆಯ ವರ್ಗಾವಣೆಗಳನ್ನು 2015ಕ್ಕೂ ಮುಂಚೆ ಡಿಜಿಪಿರವರೇ ಮಾಡುತ್ತಿದ್ದು, ರಾಜ್ಯಮಟ್ಟದ ಹುದ್ದೆಯಾದ ಕಾರಣ ರಾಜ್ಯಾದ್ಯಾಂತ ವರ್ಗಾವಣೆ ಮಾಡಲಾಗುತ್ತಿತ್ತು. ಕ್ರೋಡೀಕೃತ ಜೇಷ್ಠತೆಯನ್ನು ರಾಜ್ಯಮಟ್ಟದಲ್ಲಿಯೇ ನಿರ್ವಹಿಸುವ ಕಾರಣ ಯಾವುದೇ ವಲಯದಿಂದ ಯಾವುದೇ ವಲಯಕ್ಕೆ ವರ್ಗಾವಣೆ ಮಾಡಿದರೂ ಸಹ ಜೇಷ್ಠತೆಗೆ ಧಕ್ಕೆಯಾಗದಂತೆ ಮಾಡಬಹುದಾಗಿತ್ತು. ಈಗ ಅದನ್ನೇ ಜಾರಿಗೊಳಿಸಬೇಕು ಎಂಬ ಆಗ್ರಹ ಹೆಚ್ಚಾಗುತ್ತಿದೆ.
Karnataka Police, Karnataka state police, Karnataka Psi Demand, Karnataka Police manavi
ಕರ್ನಾಟಕ ಪೊಲೀಸರ ಮನವಿ, ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ ಪೊಲೀಸರು, ಪೊಲೀಸರ ಬೇಡಿಕೆ ಈಡೇರುವುದೇ..? ಸಚಿವ ಸಂಪುಟದಲ್ಲಿ ಓಕೆ ಎನ್ನುತ್ತೆದೆಯಾ ಸರ್ಕಾರ
Comments 1