SUDDIKSHANA KANNADA NEWS/ DAVANAGERE/ DATE-19-05-2025
ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಮಿತ್ರ ಪಡೆ ಉದ್ಘಾಟನೆ ನೆರವೇರಿಸಲಾಗಿದೆ.
ಹದಡಿ ಪೊಲೀಸ್ ಠಾಣೆಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಬಸವರಾಜ್ ಬಿ. ಎಸ್. ಅಧ್ಯಕ್ಷತೆಯಲ್ಲಿ ಪೊಲೀಸ್ ಮಿತ್ರ ಪಡೆಗೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ಮಾಯಕೊಂಡ ಸಿಪಿಐ ರಾಘವೇಂದ್ರ, ಹದಡಿ ಪಿಎಸ್ಐಗಳಾದ ಶ್ರೀಶೈಲ ಪಟ್ಟಣಶೆಟ್ಟಿ ಮತ್ತು ಅಪರಾಧ ವಿಭಾಗದ ಪಿಎಸ್ಐ ಶಕುಂತಲಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯ ಒಟ್ಟು 25 ಜನ ಪೊಲೀಸ್ ಮಿತ್ರರು ಹಾಜರಿದ್ದರು. ಅವರಿಗೆ ಡಿವೈಎಸ್ಪಿ ಬಸವರಾಜ್ ಬಿ. ಎಸ್. ಅವರು ಟೀ-ಶರ್ಟ್, ಕ್ಯಾಪ್ ಮತ್ತು ಐಡಿ ಕಾರ್ಡ್ ಗಳನ್ನು ವಿತರಿಸಿದರು.
ಪೊಲೀಸ್ ರೊಂದಿಗೆ ರಾತ್ರಿ ಗಸ್ತು, ಚೆಕ್ ಪೋಸ್ಟ್, ವಿಶೇಷ ಬಂದೋಬಸ್ತ್ ಗಳು, ಅಪರಾಧಗಳು ಜರುಗಿದಾಗ ಪೊಲೀಸರೊಂದಿಗೆ ಸಹಕರಿಸುವಂತೆ ಕೆಲಸ ಮಾಡುವಂತೆ ಸೂಚಿಸಿದರು. ಪೊಲೀಸ್ ಮಿತ್ರ ಪಡೆಯ ಸ್ವಯಂ ಸೇವಕರಿಗೆ ಅವರುಗಳ ಕಾರ್ಯ ವ್ಯಾಪ್ತಿ ಹಾಗೂ ಏನೂ ಮಾಡಬೇಕು ? ಏನೂ ಮಾಡಬಾರದು ಎಂಬ ಅಂಶಗಳನ್ನು ತಿಳಿಸಿಕೊಡಲಾಯಿತು.