ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್ ವಿಜಯ ದಿವಸವಾದ ಇಂದು ಲಡಾಖ್ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.
ಸರ್ವಋತುವಿನಲ್ಲಿ ಪರ್ಯಾಯ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಮತ್ತು ಲಡಾಖ್ ಗೆ ಮಿಲಿಟರಿ ಪಡೆ ಕ್ಷಿಪ್ರವಾಗಿ ತೆರಳಲು ಅನುಕೂಲವಾಗುವಂತೆ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಎನಿಸಿದ ಶಿಂಕೂಲ್ ಲಾ ಸುರಂಗಕ್ಕೆ ಮೋದಿ ವರ್ಚುವಲ್ ಚಾಲನೆ ನೀಡಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಬ್ರಿಗೇಡಿಯರ್ (ಡಾ.) ಬಿಡಿ ಮಿಶ್ರಾ (ನಿವೃತ್ತ), ಸಿಡಿಎಸ್ ಮತ್ತು ಮೂರು ಸೇನಾ ಮುಖ್ಯಸ್ಥರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.