PM ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಬಿಡುಗಡೆಯ ದಿನಾಂಕ ಘೋಷಣೆ ಆಗಿದೆ.
ಜೂನ್ 18 ರಂದು ದೇಶದ 9.3 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ PM ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಿಂದ ತಲಾ 2,000 ರೂ.ಗಳನ್ನು ಜಮೆ ಮಾಡಲಿದ್ದಾರೆ. ಈ ಅವಧಿಯಲ್ಲಿ ರೈತರ ಖಾತೆಗಳಿಗೆ ಸುಮಾರು 20 ಸಾವಿರ ಕೋಟಿ ರೂ. ವರ್ಗಾವಣೆಯಾಗಲಿದೆ. ಮೋದಿ ಪದಗ್ರಹಣ ನಂತರ, ಮೊದಲ ಬಾರಿಗೆ ಕಿಸಾನ್ ಸಮ್ಮಾನ್ ನಿಧಿಯ ಕಡತಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದರು.