ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 23ನೇ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿದೆ.
ಪ್ರಧಾನ ಮಂತ್ರಿಗಳು 2026 ನೇ ಜೂನ್ 20 ರಂದು ಪಶ್ಚಿಮ ಬಂಗಾಳ ರಾಜ್ಯದ ತಾರಕೇಶ್ವರ್, ಹೂಗ್ಲಿಯಲ್ಲಿ ಸಂಜೆ 4 ಗಂಟೆಗೆ ಆಯೋಜಿಸಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ದೇಶದ ಕೋಟ್ಯಂತರ ರೈತರ ಖಾತೆಗಳಿಗೆ ಅಧಿಕೃತವಾಗಿ ಹಣ ವರ್ಗಾವಣೆ ಮಾಡಲಿದ್ದಾರೆ. ಈ ವಿಶೇಷ ದಿನವನ್ನು ದೇಶಾದ್ಯಂತ “ಪಿ.ಎಂ. ಕಿಸಾನ್ ಉತ್ಸವ ದಿವಸ್” ಎಂದು ಆಚರಿಸಲಾಗುತ್ತಿದೆ.
ಕರ್ನಾಟಕದ ರೈತರಿಗೆ ರೂ. 830.832 ಕೋಟಿ ಅನುದಾನ:
ಈ ಯೋಜನೆಯಡಿ ಕರ್ನಾಟಕ ರಾಜ್ಯದ ಒಟ್ಟು 41,54,160 ಫಲಾನುಭವಿ ರೈತರಿಗೆ ಕೇಂದ್ರ ಸರ್ಕಾರದಿಂದ ಒಟ್ಟಾರೆ ರೂ. 830.832 ಕೋಟಿಗಳ ಆರ್ಥಿಕ ನೆರವು ನೇರ ನಗದು ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ. ಪ್ರಸಕ್ತ ಕೃಷಿ ಹಂಗಾಮಿನಲ್ಲಿ ರೈತರ ಕೃಷಿ ವೆಚ್ಚಕ್ಕೆ ಇದು ಸಕಾಲದಲ್ಲಿ ಆರ್ಥಿಕ ಆಸರೆ ಸಿಕ್ಕಂತಾಗಲಿದೆ.
ವರ್ಷಕ್ಕೆ ಸಿಗಲಿದೆ 6,000 ರೂಪಾಯಿ ಆರ್ಥಿಕ ನೆರವು:
ಅರ್ಹ ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳ ನಿರ್ವಹಣೆ ಹಾಗೂ ಉತ್ತಮ ಇಳುವರಿ ಪಡೆಯಲು ನೆರವಾಗುವಂತೆ ಕೇಂದ್ರ ಸರ್ಕಾರವು ವಾರ್ಷಿಕವಾಗಿ ಒಟ್ಟು ರೂ. 6,000/- ಗಳ ಆರ್ಥಿಕ ಸಹಾಯ ನೀಡುತ್ತದೆ. ಈ ಮೊತ್ತವನ್ನು ತಲಾ ರೂ. 2,000/- ಗಳಂತೆ ಮೂರು ಸಮಾನ ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಫೆಬ್ರವರಿ 2019 ರಿಂದ ಈ ಯೋಜನೆ ಜಾರಿಯಲ್ಲಿದ್ದು, ದಿನಾಂಕ: 01.02.2019 ರ ಅನ್ವಯ ಸಾಗುವಳಿ ಭೂಮಿ ಹೊಂದಿರುವ ಅರ್ಹ ರೈತ ಕುಟುಂಬಗಳು (ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು) ಇದರ ಪ್ರಯೋಜನ ಪಡೆಯುತ್ತಿದ್ದಾರೆ.
- Farmers financial aid Karnataka
- Karnataka farmers DBT scheme
- Narendra Modi Hooghly event
- PM Kisan 23rd installment
- PM kisan money release date
- PM Kisan Utsav Divas
- PM Kisan Yojana 2026
- ಕರ್ನಾಟಕ ರೈತರು ಆರ್ಥಿಕ ನೆರವು
- ಕೃಷಿ ಸಾಲ ನೆರವು
- ಜೂನ್ 20 ಪಿಎಂ ಕಿಸಾನ್
- ಡಿಬಿಟಿ ವರ್ಗಾವಣೆ
- ಪಿಎಂ ಕಿಸಾನ್ 23ನೇ ಕಂತು
- ಪಿಎಂ ಕಿಸಾನ್ ಉತ್ಸವ ದಿವಸ್
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
- ರೈತರ ಖಾತೆಗೆ ಹಣ
- ₹2000 installment date





Leave a comment