(PM- kisan:) ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ ಹಣ ಈ ಹಿಂದೆಯೇ ಜಮಾ ಆಗಿದ್ದು, ಇದೀಗ ರೈತರು 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದಾರೆ. 18 ನೇ ಕಂತಿನ ಹಣ ಜಮಾದ ಕುರಿತು ಹಾಗೂ ಜಮಾ ಆಗಬೇಕಿದ್ದರೆ ಕೆಲವು ಕೆಲಸ ಮಾಡುವುದು ಕಡ್ಡಾಯವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 6,000 ರೂಪಾಯಿ ಹಾಕಲಾಗುತ್ತಿದ್ದು, ಈ ಹಣವನ್ನ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಕಳುಹಿಸಲಾಗುತ್ತಿದೆ. ಇದೀಗ 18ನೇ ಕಂತಿಗೆ ರೈತರು ಕಾಯುತ್ತಿದ್ದಾರೆ. 18 ನೇ ಕಂತಿನ ಹಣ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
18 ನೇ ಕಂತನ ಹಣ ಜಮಾ ಆಗಲು ಈ ಕೆಲಸ ಕಡ್ಡಾಯ:
ಈ ಯೋಜನೆಯ ಲಾಭವನ್ನ ಪಡೆಯಲು ಕೆಲವು ಕೆಲಸ ಮಾಡುವುದು ಕಡ್ಡಾಯವಾಗಿದೆ. ಹೌದು, ಆಧಾರ್ ಕಾರ್ಡ್’ನ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿ. ನೀವು ಈ ಕೆಲಸವನ್ನ ಮಾಡದಿದ್ದರೆ, ನಿಮ್ಮ ಮುಂದಿನ ಕಂತು ಸಿಲುಕಿಕೊಳ್ಳಬಹುದು. ಅಲ್ಲದೆ ನೀವು ಇನ್ನೂ ಇ-ಕೆವೈಸಿ ಮಾಡದಿದ್ದರೂ ಕೂಡ ಹಣ ಜಮಾ ಆಗುವುದಿಲ್ಲ.
ಕಿಸಾನ್ ಯೋಜನೆಗೆ ಸಂಬಂಧಿಸಿದ ನವೀಕರಣಗಳಿಗಾಗಿ, ನೀವು ಅಧಿಕೃತ ಸೈಟ್ pmkisan.gov.i ನ ಸಹಾಯವನ್ನ ತೆಗೆದುಕೊಳ್ಳಬಹುದು. ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಇ-ಕೆವೈಸಿ ಮಾಡಬಹುದು. ರೈತರು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಸಹಾಯವಾಣಿ ಸಂಖ್ಯೆ 155261 ಗೆ ಕರೆ ಮಾಡಬಹುದು. ಯೋಜನೆಗೆ ಸಂಬಂಧಿಸಿದ ವಿವರಗಳನ್ನ ತಿಳಿಯಲು 1800115526 ಸಂಪರ್ಕಿಸಬಹುದು.