(pmayg) ಪ್ರಧಾನ ಮಂತ್ರಿ ಆವಾಸ್ ಯೋಜನೆಯ 10 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ದೇಶದಾದ್ಯಂತ ಸುಮಾರು 10 ಲಕ್ಷ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂಎವೈ- ಜಿ ಮೊದಲ ಕಂತನ್ನು ನಾಳೆ ಬಿಡುಗಡೆ ಮಾಡಲಿದ್ದು, ಜೊತೆಗೆ ಕೆಲವು ಫಲಾನುಭವಿಗಳಿಗೆ ಅವರ ಮನೆಗಳ ಕೀಲಿಗಳನ್ನು ಪ್ರಧಾನಿ ಹಸ್ತಾಂತರಿಸಲಿದ್ದಾರೆ.
14 ರಾಜ್ಯಗಳ ಪಿಎಂಎವೈ-ಜಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 3,180 ಕೋಟಿ ರೂ.ಗಳ ಮೊದಲ ಕಂತಿನ ಡಿಜಿಟಲ್ ವರ್ಗಾವಣೆ. ಹಾಗೆಯೇ ವರ್ಚುವಲ್ ಮೋಡ್ ನಲ್ಲಿ ದೇಶದಾದ್ಯಂತದ ಪಿಎಂಎವೈ (ಗ್ರಾಮೀಣ ಮತ್ತು ನಗರ) 26 ಲಕ್ಷ ಫಲಾನುಭವಿಗಳಿಗೆ ನೆರವು ನೀಡಲಿದ್ದಾರೆ. ಇನ್ನು ಕೆಲವು ಫಲಾನುಭವಿಗಳಿಗೆ ಅವರ ಮನೆಗಳ ಕೀಲಿಗಳನ್ನು ಪ್ರಧಾನಿ ಹಸ್ತಾಂತರಿಸಲಿದ್ದಾರೆ.