SUDDIKSHANA KANNADA NEWS/ DAVANAGERE/ DATE:12-03-2025
ದಾವಣಗೆರೆ: ಪ್ಲಾಸ್ಟಿಕ್ ಉದ್ದಿಮೆದಾರರಿಗೆ ಮಹಾನಗರ ಪಾಲಿಕೆ ವತಿಯಿಂದ ದಂಡ ವಿಧಿಸಲಾಗಿದೆ.
ಬರೋಬ್ಬರಿ 1,05,000 ರೂಪಾಯಿ ದಂಡ ವಿಧಿಸಿದ್ದು, ಪ್ಲಾಸ್ಟಿಕ್ ನಿಷೇಧವಿದ್ದರೂ ಉದ್ದಿಮೆ ನಡೆಸುತ್ತಿರುವುದಕ್ಕೆ ಈ ಫೈನ್ ಹಾಕಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಇಂದು ನಗರದಲ್ಲಿ ಎಂ.ಜಿ ರಸ್ತೆ ವಿಕಾಸ್ ಪಾಲಿ ಪ್ಯಾಕ್ಸ್, ಕರ್ನಾಟಕ ಪ್ಲಾಸ್ಟಿಕ್, ಪ್ರೇಮ್ ಪ್ಲಾಸ್ಟಿಕ್ ಉದ್ದಿಮೆಗಳ ತಪಾಸಣೆ ಮಾಡಲಾಯಿತು. 240 ಕೆ.ಜಿ ಏಕ ಬಳಕೆ ಪ್ಲಾಸ್ಟಿಕನ್ನು ವಶಪಡಿಸಿಕೊಂಡು ಉದ್ದಿಮೆದಾರರಾದ ಪುಕ್ರಾಜ್, ವಿಕಾಸ್ ಕುಮಾರ್, ಬುದ್ದರಾಂ ಅವರಿಗೆ ರೂ.1,05,000 ರೂ.ಗಳ ದಂಡವನ್ನು ವಿಧಿಸಲಾಗಿದೆ.
ಪರಿಸರ ವಿಭಾಗದ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಗಳು, ಆರಕ್ಷಕರು ಹಾಗೂ ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಹಾಜರಿದ್ದರು.