ದಾವಣಗೆರೆ: 22 ಕೆರೆಗಳ ಏತ ನೀರಾವರಿ ಯೋಜನೆಯ ಹೊಸ ಪೈಪ್‌ಲೈನ್ ಕಾಮಗಾರಿಗೆ 18 ಕೋಟಿ ರೂ. ಬಿಡುಗಡೆಗೊಂಡಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
READ ALSO THIS STORY: ದಲಿತ, ಹಿಂದುಳಿದ ಮಠಾಧೀಶರು ನನ್ನ ಮಾತು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಬೇರೆ ಮಠಗಳ ಬಗ್ಗೆ ಯಾರೂ ಮಾತನಾಡಬಾರದು: ಬಾಳೆಹೊನ್ನೂರು ರಂಭಾಪುರಿ ಶ್ರೀ ಸ್ಪಷ್ಟನೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸದರು. ರಾಜನಹಳ್ಳಿಯಿಂದ ಹನಗವಾಡಿವರೆಗೆ 3.8 ಕಿ.ಮೀ ಪೈಪ್ ಲೈನ್ ಬದಲಾವಣೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಹಾಗೂ ಹನಗವಾಡಿಯಿಂದ 18 ಕಿ.ಮೀ ಪೈಪ್ ಲೈನ್
ಬದಲಾವಣೆ ಕಾಮಗಾರಿ 75 ಕೋಟಿ ರೂ.ವೆಚ್ಚದಲ್ಲಿ ನಡೆಸಲು ಎಲ್ಲಾ ತಾಂತ್ರಿಕ ಒಪ್ಪಿಗೆ ದೊರೆತಿದ್ದು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
22 ಕೆರೆಗಳ ಏತ ನೀರಾವರಿ ಕಾಮಗಾರಿ ಆರಂಭದಲ್ಲೇ ಕಳಪೆಯಾಗಿ ನಡೆದಿದ್ದರಿಂದ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿತ್ತೇ ವಿನಾಃ 22 ಕೆರೆಗಳಿಗೆ ನೀರು ತುಂಬಿಲ್ಲ. ಎಲ್ ಎಂಡ್ ಟಿ ಕಂಪನಿಯ ಕಳಪೆ ಕಾಮಗಾರಿಯಿಂದ ನೀರು ತುಂಬಿಸಲು ಸಾಧ್ಯವಾಗಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸಿದರು. ಇದನ್ನು ಮನಗಂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ನೀರಾವರಿ ಸಚಿವರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಒತ್ತಡ ಹಾಕಿ ಹೊಸ ಪೈಪ್ ಲೈನ್ ಗೆ ಕಾಮಗಾರಿಗೆ ಮನವಿ ಮಾಡಿದ್ದರು.
READ ALSO THIS STORY: ರಂಭಾಪುರಿ ಶ್ರೀಗಳು ಮಾತಿನ ವರಸೆ ಬದಲಿಸದಿದ್ದರೆ ಹೋರಾಟ: ದಲಿತ, ಹಿಂದುಳಿದ ಮಠಾಧೀಶರ ಒಕ್ಕೊಟ ಎಚ್ಚರಿಕೆ!
ಈಗಾಗಿ ಸರ್ಕಾರ ಮೊದಲ ಹಂತದ 3.8 ಕಿ.ಮೀ ಕಾಮಗಾರಿಗೆ 18 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ತಕ್ಷಣವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ರೈತರಿಗೆ ನೀಡಿದ್ದ ಭರವಸೆಗೆ ಬದ್ದರಾಗಿದ್ದು ಅದರಂತೆ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.