ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೀವು ಕೂಡ ಹಾಸಿಗೆ ಬಳಿ ಮೊಬೈಲ್ ಇಟ್ಟು ಮಲಗುತ್ತೀರಾ? ಹಾಗಿದ್ರೆ ಎಚ್ಚರ

On: July 22, 2024 2:24 PM
Follow Us:
---Advertisement---

ಜನರು ಮೊಬೈಲ್ಗೆ ಅಂಟಿರುವುದನ್ನು ಚಟ ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಈ ರೀತಿಯ ಅಭ್ಯಾಸ ತುಂಬಾ ಅಪಾಯಕಾರಿ. ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಬಹುದು.

ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವಿದ್ದರೆ ಮೊದಲು ಇದನ್ನು ಬಿಟ್ಟುಬಿಡಿ. ಏಕೆಂದರೆ ಈ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ . ಇತ್ತೀಚಿನ ದಿನಗಳಲ್ಲಿ ಬಂಜೆತನ ಹೆಚ್ಚುತ್ತಿರುವುದಕ್ಕೆ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವೂ ಒಂದು ಕಾರಣವಾಗಿರಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ ಹೊತ್ತು ಹೆಚ್ಚು ಸಮಯದ ವರೆಗೆ ಮೊಬೈಲ್ ನೋಡುತ್ತಾ ಮಲಗುವುದು, ಪಕ್ಕದಲ್ಲಿಯೇ ಇಟ್ಟುಕೊಂಡು ನಿದ್ರೆ ಹೋಗುವುದು ಸಾಮಾನ್ಯವಾಗಿದ್ದು ಇದು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ‍

ಇದರ ಜೊತೆಗೆ, ಈ ಅಭ್ಯಾಸಗಳು ಪುರುಷರಲ್ಲಿ ವೀರ್ಯದ ಗಣತಿಯನ್ನು ಕಡಿಮೆ ಮಾಡುವುದರೊಂದಿಗೆ ಅವುಗಳ ಗುಣಮಟ್ಟವನ್ನು ತಗ್ಗಿಸಬಹುದು, ಹಾಗಾಗಿ ಈ ಅಭ್ಯಾಸ ಪುರುಷರಲ್ಲಿನ ಬಂಜೆತನಕ್ಕೆ ಪ್ರಮುಖ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಮೊಬೈಲ್ ವಿಕಿರಣದಿಂದ ದೂರವಿರುವುದು ಒಳ್ಳೆಯದು.ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದರಿಂದ ತಲೆಗೆ ಸಂಬಂಧಪಟ್ಟ ಕ್ಯಾನ್ಸರ್ ಬೆಳವಣಿಗೆ ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ

Join WhatsApp

Join Now

Join Telegram

Join Now

Leave a Comment