SUDDIKSHANA KANNADA NEWS/ DAVANAGERE/DATE:14_08_2025
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಿದೆ. ಜಾಮೀನು ರದ್ದುಪಡಿಸುತ್ತಿದ್ದಂತೆ ದರ್ಶನ್ ತೂಗುದೀಪ ಪ್ರೇಯಸಿ ಪವಿತ್ರಾ ಗೌಡ ಗಳಗಳನೇ ಅತ್ತಿದ್ದಾರೆ.
READ ALSO THIS STORY: BIG BREAKING: ಕಿಲ್ಲಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಪವಿತ್ರಾ ಗೌಡಗೆ ಮತ್ತೆ ಜೈಲುಪಾಲು!
ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಪವಿತ್ರಾ ಗೌಡ ನನ್ನ ಮಗಳಿದ್ದು, ತಂದೆ ಇಲ್ಲ. ತಾಯಿಯಾಗಿ ನೋಡಿಕೊಳ್ಳುತ್ತಿದ್ದೇನೆ. ಜಾಮೀನು ಆದೇಶಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದ್ದರು. ಮಾತ್ರವಲ್ಲ,
ಇತ್ತೀಚೆಗಷ್ಟೇ ಖುಷಿಖುಷಿಯಾಗಿ ಫೋಟೋ ಶೂಟ್ ಮಾಡಿಸಿದ್ದ ಪವಿತ್ರಾ ಗೌಡಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಮತ್ತೆ ಜೈಲಿಗೆ ಹೋಗಬೇಕು. ಜೈಲಿನಲ್ಲಿ ರಾಜಾತಿಥ್ಯವೂ ಸಿಗುವುದಿಲ್ಲ.
ಪವಿತ್ರಾ ಗೌಡ ಬೆಳಿಗ್ಗೆಯಿಂದಲೇ ದೇವರ ನಾಮ ಸ್ಮರಣೆ ಮಾಡುತ್ತಿದ್ದರು. ಸುಪ್ರೀಂಕೋರ್ಟ್ ಆದೇಶ ಬರುತ್ತಿದ್ದಂತೆ ಅಳು ತಡೆದುಕೊಳ್ಳಲಾಗದೇ ಗಳಗಳನೇ ಕಣ್ಣೀರು ಸುರಿಸಿದ್ದಾರೆ. ಎಷ್ಟೇ ಸಂತೈಸಲು ಮುಂದಾದರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪವಿತ್ರಾ ಗೌಡ ಮುಂದೇನೂ ಮಾಡಬೇಕೆಂದು ಗೊತ್ತಾಗದೇ ದಿಕ್ಕೆಟ್ಟು ಕುಳಿತಿದ್ದಾರೆ. ಯಾರೇ ಮಾತನಾಡಿಸಿದರೂ ಮೌನವಾಗಿಯೇ ಕುಳಿತಿದ್ದರು.
ಜಾಮೀನು ನೀಡಿದ್ದನ್ನು ಪ್ರಶ್ನಿಸಿ ದರ್ಶನ್ ಮತ್ತು ಸಹಚರರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಸುಪ್ರೀಂಕೋರ್ಟ್ ಕರ್ನಾಟಕದ ಹೈಕೋರ್ಟ್ ಆದೇಶವನ್ನೇ ರದ್ದುಪಡಿಸಿದೆ. ಇದೊಂದು ಐತಿಹಾಸಿಕ ತೀರ್ಪು ಎಂದು ಹೇಳಿದೆ. ಈ ಮೂಲಕ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಏಳು ಸಹಚರರು ಜೈಲಿಗೆ ಹೋಗಬೇಕಾಗಿದೆ. ರಾಜಾತಿಥ್ಯ ಕೊಟ್ಟಿದ್ದ ಬಗ್ಗೆ ಕೆಂಡಮಂಡಲವಾದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ, ಜೈಲು ಅಧಿಕಾರಿಗಳು, ಗೃಹ ಇಲಾಖೆಗೆ ಚಾಟಿ ಬೀಸಿದೆ.
ದರ್ಶನ್ ತೂಗುದೀಪ ಕೇಸ್ ನಲ್ಲಿ ನಾವು ನೀಡುತ್ತಿರುವ ತೀರ್ಪು ಐತಿಹಾಸಿಕ. ಕರ್ನಾಟಕ ಹೈಕೋರ್ಟ್ ಆದೇಶ ವಿಕೃತ ಎಂದು ಸುಪ್ರೀಂಕೋರ್ಟ್ ಹೇಳಿದೆ.