SUDDIKSHANA KANNADA NEWS/ DAVANAGERE/ DATE:26-12-2024
ಬೆಂಗಳೂರು: ನಂಗೆ ಯಾಕೆ ಹಿಂಗಾಗುತ್ತೆ. ನನ್ನ ಹೆಸರು ಯಾಕೆ ಹಾಳು ಮಾಡ್ತಾರೋ ಗೊತ್ತಿಲ್ಲ. ನಾನೇನೂ ತಪ್ಪು ಮಾಡಿದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಆತ್ಮೀಯ ಗೆಳತಿ ಪವಿತ್ರಾ ಗೌಡ ಶ್ಯಾನೆ ಬೇಸರ ಮಾಡಿಕೊಂಡಿದ್ದಾರಂತೆ.
ಹಾಗಂತ ಪವಿತ್ರಾ ಗೌಡಳ ಆಪ್ತ ಗೆಳತಿ ಸಮತಾ ಗೌಡ ಹೇಳಿರುವ ಮಾತು. ಕೋಟಿ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ತಳುಕು ಹಾಕಿಕೊಳ್ಳುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪರಿಚಯ ಇಲ್ಲದಿದ್ದರೂ ಯಾಕೆ ಎಳೆದು ತರುತ್ತಿದ್ದಾರೆ. ನನಗೆ ಯಾಕೆ ಈ ರೀತಿ ಆಗುತ್ತಿದೆ ಎಂದು ಪವಿತ್ರಾ ಗೌಡ ಬೇಸರ ಮಾಡಿಕೊಂಡಿದ್ದಾರೆ ಎಂದು ಸಮತಾ ಗೌಡ ತಿಳಿಸಿದ್ದಾರೆ.
ನಾನು ಈ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಕರೆ ಮಾಡಿದ್ದರು. ನಾನು ಪವಿತ್ರಾ ಗೌಡರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹೋದಾಗ ಐಶ್ವರ್ಯಾ ಬಂದಿದ್ದಳು. ಆದ್ರೆ, ನನಗೆ ಪರಿಚಯವೇ ಇರಲಿಲ್ಲ. ನಿನ್ನ ಪಾಡಿಗೆ ಹೋಗು ಎಂದರೂ ನನ್ನ ಜೊತೆಗೆ ಬಂದಿದ್ದಳು. ಈಗ ನೋಡಿದರೆ ನನ್ನ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿರುವುದು ಆಶ್ಚರ್ಯ ತಂದಿದೆ. ನಾನು ಯಾವತ್ತೋ ಐಶ್ವರ್ಯಾ ಗೌಡಳಿಗೆ ಫೋನ್ ಮಾಡಿಲ್ಲ. ಆಕೆಯೇ ಜೈಲಿಗೆ ಹೋಗುವಾಗ ಪಕ್ಕದಲ್ಲಿ ನಿಂತಿದ್ದಳು. ಮಾಧ್ಯಮದವರು ನೋಡತ್ತಿದ್ದಂತೆ ನನ್ನನ್ನು ಮಾತನಾಡಿಸಿದಳು. ಮೊದಲೇ ಟೆನ್ಶನ್ ನಲ್ಲಿ ಇದ್ದೆ. ಈ ವೇಳೆ ಮಾತನಾಡುವುದು ಬೇಡ ಎಂದು ಸುಮ್ಮನೆ ಹೋದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪವಿತ್ರಾ ಗೌಡಳಿಗೆ ವಿವರಿಸಿದ್ದೇನೆ. ಆಕೆಯೂ ಬೇಸರವಾಗಿದ್ದಾಳೆ. ಈಗ ಆರಾಮಾಗಿದ್ದಾಳೆ. ಚೆನ್ನಾಗಿದ್ದಾಳೆ ಎಂದು ಸಮತಾ ಗೌಡ ಹೇಳಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪವಿತ್ರಾ ಗೌಡ ಪ್ರಕರಣದ ಮೊದಲ ಆರೋಪಿಯಾಗಿದ್ದರು. ಜೈಲುಪಾಲಾಗಿದ್ದರು. ಲಿಫ್ಟಿಕ್ ರಾಣಿ ಅಂತಾನೂ ಫೇಮಸ್ ಆಗಿದ್ದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪವಿತ್ರಾಗೌಡಳಿಗೆ
ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.