ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕುಸ್ತಿಪಟು ‘ವಿನೇಶ್ ಫೋಗಟ್’ ‘ಬೆಳ್ಳಿ ಪದಕ’ ಗೆಲ್ಲುವ ಅವಕಾಶ..! ಕೋಟ್ಯಂತರ ಭಾರತೀಯರ ಪ್ರಾರ್ಥನೆ

On: August 8, 2024 6:13 PM
Follow Us:
---Advertisement---

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ವಿಭಾಗದ ಅಂತಿಮ ಪಂದ್ಯದಿಂದ ಅನರ್ಹಗೊಂಡ ನಂತರ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CAS) ಮೇಲ್ಮನವಿ ಸಲ್ಲಿಸಿದ್ದರು. ಅವರು ನ್ಯಾಯಾಲಯಕ್ಕೆ ಎರಡು ಮನವಿಗಳನ್ನ ಬರೆದಿದ್ದರು: ಒಂದು, ಫೋಗಟ್’ರನ್ನ ಮತ್ತೆ ತೂಕ ಮಾಡಿ ಆಡಲು ಅವಕಾಶ ನೀಡುವುದು.

ಆದ್ರೆ, ಇದನ್ನ ನ್ಯಾಯಾಲಯವು ತಿರಸ್ಕರಿಸಿತು ಮತ್ತು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಅಂತಿಮ ಚಿನ್ನದ ಪದಕದ ಪಂದ್ಯವನ್ನ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಮತ್ತು ಯುಎಸ್‌ಎಯ ಸಾರಾ ಆನ್ ಹಿಲ್ಡೆಬ್ರಾಂಟ್ ನಡುವೆ ಆಡಲಾಯಿತು ಎಂದು ಹೇಳಿದೆ.

ತನ್ನ ಎರಡನೇ ಮನವಿಯಲ್ಲಿ, ಪೋಗಟ್ ಬೆಳ್ಳಿ ಪದಕಕ್ಕೆ ಅರ್ಹಳು. ಯಾಕಂದ್ರೆ, ಆಕೆ ಆ ದಿನವೇ ಅದನ್ನ ಗಳಿಸಿದಳು ಮತ್ತು ಅವ್ರ ತೂಕವೂ ಉತ್ತಮವಾಗಿತ್ತು ಎಂದು ಹೇಳಿದರು. ಸಿಎಎಸ್ ತೀರ್ಪು ಫೋಗಟ್ ಪರವಾಗಿ ಬಂದರೆ, ಐಒಸಿ ಅದಕ್ಕೆ ಬದ್ಧವಾಗಿರಬೇಕು. ಬೆಳ್ಳಿಗಾಗಿ ಫೋಗಟ್ ಅವರ ಮನವಿಯ ಬಗ್ಗೆ ಸಿಎಎಸ್’ನ ಅಂತಿಮ ತೀರ್ಪು ಶುಕ್ರವಾರ ಬೆಳಿಗ್ಗೆ 11: 30ರ ಸುಮಾರಿಗೆ ಬರಲಿದೆ.

ವಿನೇಶ್ ಫೋಗಟ್ ಅವರು 50 ಕೆಜಿ ಕುಸ್ತಿ ವಿಭಾಗದಲ್ಲಿ ಒಲಿಂಪಿಕ್ ಜಂಟಿ ಬೆಳ್ಳಿ ಪದಕವನ್ನ ಕೋರಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (CAS)ಗೆ ಅರ್ಜಿ ಸಲ್ಲಿಸಿದ್ದರು. ಅಂದ್ಹಾಗೆ, ಚಿನ್ನದ ಪದಕ ಪಂದ್ಯದ ದಿನವಾದ ಬುಧವಾರ ವಿನೇಶ್ ಅವರನ್ನ ಅನರ್ಹಗೊಳಿಸಲಾಯಿತು.

ಏತನ್ಮಧ್ಯೆ, ಗುರುವಾರ ಬೆಳಿಗ್ಗೆ, ವಿನೇಶ್ ಫೋಗಟ್ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಭಾವನಾತ್ಮಕ ಸಂದೇಶದೊಂದಿಗೆ ತಮ್ಮ ನಿವೃತ್ತಿಯನ್ನ ದೃಢಪಡಿಸಿದರು. ಇದನ್ನು ತನ್ನ ತಾಯಿಗೆ ಅರ್ಪಿಸಿದ ಫೋಗಟ್, “ಅಮ್ಮಾ, ಕುಸ್ತಿ ಗೆದ್ದಿದೆ ಮತ್ತು ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸು. ನಿಮ್ಮ ಕನಸುಗಳು ಭಗ್ನಗೊಂಡಿವೆ. ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಾನು ಯಾವಾಗಲೂ ನಿಮಗೆ ಋಣಿಯಾಗಿದ್ದೇನೆ. ಕ್ಷಮಿಸಿ” ಎಂದಿದ್ದಾರೆ.

Join WhatsApp

Join Now

Join Telegram

Join Now

Leave a Comment