SUDDIKSHANA KANNADA NEWS/ DAVANAGERE/ DATE-22-04-2025
ಪಹಲ್ಲಾಮ್: ಜಮ್ಮು ಕಾಶ್ಮೀರದ ಪಹಲ್ಲಾಮ್ ನಲ್ಲಿ ಹತ್ಯೆಗೀಡಾದ ಉದ್ಯಮಿ ಶಿವಮೊಗ್ಗದ ಮಂಜುನಾಥ್ ಅವರ ಮಾತು ಕೇಳಿದರೆ ಎದೆ ಝಲ್ ಎನಿಸುತ್ತದೆ. ಮಾತ್ರವಲ್ಲ, ಕಣ್ಣೆದುರೆಗೆ ಪತಿ ಕೊಂದು ಹಾಕಿದ ಉಗ್ರರ ಕೃತ್ಯ ಕಣ್ಣಾರೆ ಕಂಡು ಶಾಕ್ ಗೆ ಒಳಗಾಗಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪತಿ ಕೊಂದು ಹಾಕಿದೆ. ನನ್ನನ್ನು ಕೊಂದು ಹಾಕು ಎಂದು ಪುತ್ರನೂ ಹೇಳಿದ. ನನ್ನನ್ನು ಸಾಯಿಸು ಎಂದೆ. ಆದರೂ ಉಗ್ರ ಕೇಳಲಿಲ್ಲ. ಸೇನೆಗೆ ಸಂಬಂಧಿಸಿದವರು ಯಾರೂ ಇರಲಿಲ್ಲ. ಸೇನೆ ಸಮವಸ್ತ್ರ ಧರಿಸಿರಲಿಲ್ಲ. ಮಾಮೂಲಿ ಡ್ರೆಸ್ ನಲ್ಲಿದ್ದರು ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ನಾನು ನೋಡುತ್ತಿದ್ದಂತೆ ಗುಂಡು ಹಾರಿಸಿ ತಲೆಗೆ ಇಟ್ಟು ಹೊಡೆದರು. ಮಹಿಳೆಯರಿಗೆ ಏನೂ ಮಾಡಿಲ್ಲ. ಪುರುಷರಿಗೆ ಮಾತ್ರ ಗುಂಡು ಹೊಡೆದರು ಎಂದು ತಿಳಿಸಿದರು. ನನ್ನ ಪತಿಯ ಮೃತದೇಹ ಸಿಗಬೇಕಿದೆ ಎಂದು ಹೇಳಿದ್ದಾರೆ.