ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಭಾರತದ ವಿರುದ್ಧ ತನ್ನ ದ್ವೇಷಪೂರಿತ ಹೇಳಿಕೆಯನ್ನು ಮುಂದುವರಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರವಾಗಿ ಭಾರತಕ್ಕೆ ಮತ್ತೊಮ್ಮೆ ನೇರ ಎಚ್ಚರಿಕೆ ನೀಡಿದ್ದಾರೆ. “ನಮ್ಮ ನೀರಿನ ಪ್ರತಿಯೊಂದು ಹನಿಯೂ ನಮಗೆ ರೆಡ್‌ಲೈನ್ ಇದ್ದಂತೆ, ಭಾರತ ಸರಿಯಾದ ಹಾದಿಗೆ ಬಾರದಿದ್ದರೆ ನೇರ ಉತ್ತರ ನೀಡಲಾಗುವುದು” ಎಂದು ಬೆದರಿಕೆ ಹಾಕಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ‘ಯಾದ್‌ಗಾರ್-ಎ-ಫತೇಹ್’ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಿ ಶಾಂತಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು. ಜತೆಗೆ, ಭವಿಷ್ಯದಲ್ಲಿ ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಯಾರಾದರೂ ಧಕ್ಕೆ ತಂದರೆ, ಹಿಂದೆಂದಿಗಿಂತಲೂ ಕಠಿಣವಾದ ತಿರುಗೇಟು ನೀಡುವುದಾಗಿ ಹೆದರಿಸಲುತ್ನಿಸಿದರು.
ಹಿನ್ನೆಲೆ ಏನು?
ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು. ಗಡಿಪಾರಿನ ಭಯೋತ್ಪಾದನೆಯನ್ನು ಪಾಕಿಸ್ತಾನ ಸಂಪೂರ್ಣವಾಗಿ ನಿಲ್ಲಿಸುವವರೆಗೆ ಈ ನಿರ್ಧಾರ ಬದಲಾಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ತಮ್ಮ ಭಾಷಣದಲ್ಲಿ ಕಾಶ್ಮೀರ ವಿಷಯವನ್ನೂ ಮತ್ತೆ ಪ್ರಸ್ತಾಪಿಸಿದ ಶರೀಫ್, ಕಾಶ್ಮೀರಿಗಳಿಗೆ ಸ್ವಯಂ ನಿರ್ಣಯದ ಹಕ್ಕು ಸಿಗುವವರೆಗೆ ಪಾಕಿಸ್ತಾನ ರಾಜಕೀಯ, ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.
- India Pak Relations
- India Pakistan Water Dispute
- Indus Waters Treaty
- International News
- Kashmir Issue
- Operation Sindoor
- Pahalgam terror attack
- Shehbaz Sharif
- Shehbaz Sharif Speech
- ಇಂಟರ್ನ್ಯಾಷನಲ್ ನ್ಯೂಸ್.
- ಕನ್ನಡ ಸುದ್ದಿ
- ಕಾಶ್ಮೀರ ವಿಷಯ
- ಪಹಲ್ಗಾಮ್ ದಾಳಿ
- ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್
- ಭಾರತ ಪಾಕಿಸ್ತಾನ ವಿವಾದ
- ಭಾರತಕ್ಕೆ ಪಾಕ್ ಬೆದರಿಕೆ
- ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ





Leave a comment