ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ವಾತಾವರಣ ಮತ್ತು ಕೆಂಪು ಸಮುದ್ರದಲ್ಲಿನ ಸಂಚಾರ ಅಡಚಣೆಯಿಂದಾಗಿ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸರ್ಕಾರದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಪಾಕಿಸ್ತಾನ ಸರ್ಕಾರ ದೇಶಾದ್ಯಂತ ಕೋವಿಡ್-19 ನಿಯಂತ್ರಣಗಳ ಮಾದರಿಯ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಕಠಿಣ ನಿಯಮಗಳ ವಿವರ ಇಲ್ಲಿದೆ:
ಮದುವೆ ಸಮಾರಂಭಗಳಲ್ಲಿ ‘ಒಂದೇ ತಿಂಡಿ’: ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಅನಗತ್ಯ ವೆಚ್ಚ ತಪ್ಪಿಸಲು ಕೇವಲ ಒಂದು ಖಾದ್ಯವನ್ನು (One Dish) ಮಾತ್ರ ಬಡಿಸಲು ಆದೇಶಿಸಲಾಗಿದೆ. ಅಲ್ಲದೆ, ಮದುವೆ ಹಾಲ್‌ಗಳನ್ನು ರಾತ್ರಿ 10 ಗಂಟೆಯೊಳಗೆ ಬಂದ್ ಮಾಡಬೇಕು.
ವಾಹನ ಖರೀದಿ ಮತ್ತು ಇಂಧನ ಕಡಿತ: ಸರ್ಕಾರಿ ಇಲಾಖೆಗಳಿಗೆ ಹೊಸ ವಾಹನಗಳನ್ನು ಖರೀದಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೊತೆಗೆ, ಸರ್ಕಾರಿ ಅಧಿಕಾರಿಗಳ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಕೋಟಾದಲ್ಲಿ ಶೇ. 50 ರಷ್ಟು ಕಡಿತಗೊಳಿಸಲಾಗಿದೆ.
ಮಾರುಕಟ್ಟೆಗಳು ರೇಗ್ಯುಲೇಟೆಡ್ (ರಾತ್ರಿ 9 ಕ್ಕೆ ಕ್ಲೋಸ್): ಶಾಪಾಂಗ್ ಮಾಲ್‌ಗಳು, ತರಕಾರಿ ಮಾರುಕಟ್ಟೆಗಳು ಹಾಗೂ ದಿನಸಿ ಅಂಗಡಿಗಳನ್ನು ರಾತ್ರಿ 9 ಗಂಟೆಗೆ ಕಡ್ಡಾಯವಾಗಿ ಮುಚ್ಚಬೇಕು. ರೆಸ್ಟೋರೆಂಟ್‌ಗಳು ರಾತ್ರಿ 11 ಗಂಟೆಯವರೆಗೆ ಮಾತ್ರ ತೆರೆದಿರಬಹುದು.
ವಿದೇಶ ಪ್ರವಾಸದ ಮೇಲೆ ನಿಷೇಧ: ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರಿಗೆ ಮುಂದಿನ ಮೂರು ತಿಂಗಳ ಕಾಲ ವಿದೇಶ ಪ್ರವಾಸವನ್ನು ನಿಷೇಧಿಸಲಾಗಿದೆ. ಅನಿವಾರ್ಯ ಸನ್ನಿವೇಶಗಳಲ್ಲಿ ಮಾತ್ರ ಎಕನಾಮಿ ಕ್ಲಾಸ್‌ನಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಅಗತ್ಯ ಸೇವೆಗಳಿಗೆ ವಿನಾಯಿತಿ: ಆಸ್ಪತ್ರೆಗಳು, ಫಾರ್ಮಸಿಗಳು, ಪೆಟ್ರೋಲ್ ಪಂಪ್‌ಗಳು, ಇವಿ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಐಟಿ ಕಂಪನಿಗಳಿಗೆ ಈ ಸಮಯದ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ.
ಸರ್ಕಾರವು ತನ್ನ ಒಟ್ಟು ಕಾರ್ಯನಿರ್ವಹಣಾ ವೆಚ್ಚದಲ್ಲಿ ಶೇಕಡಾ 5 ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದು, ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.





Leave a comment