Home ಕ್ರೈಂ ನ್ಯೂಸ್ ಅರೇಬಿಯನ್ ಸಮುದ್ರದಲ್ಲಿ ಭಾರತ-ಪಾಕ್ ನೌಕೆಗಳ ನಡುವೆ ಡಿಕ್ಕಿ: ಇಸ್ಲಮಾಬಾದ್ ರಾಯಭಾರಿಗೆ ಭಾರತ ಖಡಕ್ ಎಚ್ಚರಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅರೇಬಿಯನ್ ಸಮುದ್ರದಲ್ಲಿ ಭಾರತ-ಪಾಕ್ ನೌಕೆಗಳ ನಡುವೆ ಡಿಕ್ಕಿ: ಇಸ್ಲಮಾಬಾದ್ ರಾಯಭಾರಿಗೆ ಭಾರತ ಖಡಕ್ ಎಚ್ಚರಿಕೆ!

Share
ಅರೇಬಿಯನ್
Share

ನವದೆಹಲಿ: ಉತ್ತರ ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಪಾಕಿಸ್ತಾನದ ನೌಕಾಪಡೆಯ ನೌಕೆಯೊಂದು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಸಂಬಂಧ ನವದೆಹಲಿಯಲ್ಲಿರುವ ಪಾಕಿಸ್ತಾನದ ಹಿರಿಯ ರಾಯಭಾರಿಗೆ ಭಾರತ ಸರ್ಕಾರ ಸಮನ್ಸ್ ನೀಡಿದೆ.

ಸೆಪ್ಟೆಂಬರ್ 15ರ ಸಾಯಂಕಾಲ ಅಂತರರಾಷ್ಟ್ರೀಯ ಜಲಸೀಮೆಯಲ್ಲಿ ಭಾರತೀಯ ನೌಕೆಯು ಗಸ್ತು ತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಾಕಿಸ್ತಾನದ ನೌಕೆಯ ಬೇಜವಾಬ್ದಾರಿ ಹಾಗೂ ಅಸಂಭಾವಿತ ವರ್ತನೆಯೇ ಈ ಡಿಕ್ಕಿಗೆ ಕಾರಣ ಎಂದು ವಿದೇಶಾಂಗ ಸಚಿವಾಲಯ (MEA) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಭಾರತೀಯ ಯುದ್ಧನೌಕೆಗೆ ಯಾವುದೇ ಹಾನಿಯಾಗಿಲ್ಲ.

1991ರ ದ್ವಿಪಕ್ಷೀಯ ಒಪ್ಪಂದದ ಆರ್ಟಿಕಲ್ 10ರ ನಿಯಮಗಳನ್ನು ಪಾಕಿಸ್ತಾನ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ತಿಳಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಮ್ಮ ಸೇನಾ ಪಡೆಗಳಿಗೆ ಸೂಕ್ತ ಸೂಚನೆ ನೀಡಬೇಕೆಂದು ಪಾಕ್ ರಾಯಭಾರಿಗೆ ಸ್ಪಷ್ಟಪಡಿಸಿದೆ. ‘ಆಪರೇಷನ್ ಸಿಂಧೂರ್’ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದ್ದು, ಕಡಲ ತೀರದಲ್ಲಿ ಕಟ್ಟುನಿಟ್ಟಿನ ಕಾವಲು ಕಾಯಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles