ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತಪಸ್ಸಿನಂತೆ ಅಭಿವೃದ್ಧಿ, ಬರದ ನಾಡಿಗೆ ನೀರೊದಗಿಸಿದ ಭಗೀರಥ, ಬಡವರ ಧಣಿ ನಮ್ಮ ಮಲ್ಲಣ್ಣ: ವಿನಾಯಕ್ ಬಿ. ಎನ್.

On: September 21, 2025 3:01 PM
Follow Us:
ಭಗೀರಥ
---Advertisement---

ವಿನಾಯಕ B N, B E (c s)
ವಿಹಾ ಡೆಲೋಪರ್ಸ್ ನಾ ಮಾಲೀಕರು, ಕೆಪಿಸಿಸಿ ನೀತಿ , ಸಂಶೋಧನೆ ಮತ್ತು ತರಬೇತಿ ರಾಜ್ಯ ಸಂಚಾಲಕರು, ಕೆಪಿಸಿಸಿ ಮಾಧ್ಯಮ ವಕ್ತಾರರು 

ದಾವಣಗೆರೆ: ತಪಸ್ಸಿನಂತೆ ಅಭಿವೃದ್ಧಿ ಧರೆಗಿಳಿಸಿದ, ಬರದ ನಾಡಿಗೆ ನೀರೊದಗಿಸಿ, ವಿಶ್ವ ಭೂಪಟದಲ್ಲಿ ದಾವಣಗೆರೆ ಗುರುತಿಸುವಂತೆ ಮಾಡಿದ ಮಹಾನ್ ನಾಯಕ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದ ಹೆಸರಾಗಿರುವ, ಅಭಿವೃದ್ಧಿಗೆ ಮತ್ತೊಂದು ಹೆಸರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಪುತ್ರರಾಗಿಯೂ ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಮಲ್ಲಿಕಾರ್ಜುನ್ ಅವರು, ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡ ರಾಜಕಾರಣಿ
ಅಲ್ಲ. ಒಮ್ಮೆ ಭರವಸೆ ಕೊಟ್ಟರೆ, ಈಡೇರಿಸುತ್ತೇನೆ ಎಂದು ಹೇಳಿದರೆ ಅದು ಈಡೇರಿದಂತೆಯೇ. ಇಂಥ ಸಾವಿರಾರು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಒಮ್ಮೆ ಯೋಜನೆ ತರಬೇಕೆಂದು ನಿರ್ಧರಿಸಿದರೆ ಎಷ್ಟೇ ಕಷ್ಟವಾದರೂ
ತಂದೆ ತರುವ ಛಲಬಿಡದ ವಿಕ್ರಮ ಮಲ್ಲಣ್ಣ.

ಜನರ ನಾಡಿಮಿಡಿತದಲ್ಲಿ ಮಲ್ಲಣ್ಣ
ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ಹೃದಯವಂತ. ಕೊರೊನಾ ಸಂಕಷ್ಟದಲ್ಲಿ ಜನರ ನಾಡಿಮಿಡಿತ ಅರಿತು ವ್ಯಾಕ್ಸಿನ್, ಬೆಡ್, ಚಿಕಿತ್ಸೆಗೆ ನೆರವು ನೀಡಿದ ಕರುಣಾಮಯಿ. ಎಲ್ಲರನ್ನೂ ಸರಿಸಮಾನವಾಗಿ ಕಾಣುವ ಗುಣವಂತ. ದಾವಣಗೆರೆ ಧಣಿ, ಎಲ್ಲರ ಪಾಲಿನ ಮಲ್ಲಣ್ಣ ಅಂತಾನೇ ಕರೆಯಲ್ಪಡುವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ 58ರ ಹರೆಯದ ಸಂಭ್ರಮ.

ದಾವಣಗೆರೆಯತ್ತ ಕರ್ನಾಟಕವೇ ತಿರುಗಿ ನೋಡುವಂತ ಅಭಿವೃದ್ಧಿ ಶಕೆ ಆರಂಭಿಸಿದ ರಾಜಕಾರಣಿ ಎಂದರೆ ಅದು ಶಾಮನೂರು ಮಲ್ಲಿಕಾರ್ಜುನ್ ಅವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ
ಶಾಮನೂರು ಶಿವಶಂಕರಪ್ಪರ ಜೊತೆ ದಾವಣಗೆರೆ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಮಲ್ಲಿಕಾರ್ಜುನ್ ಅವರು ಕಾರ್ಯವೈಖರಿಯಿಂದಲೇ ಜನಮನ್ನಣೆ ಗಳಿಸಿದ ನಾಯಕ. ಮಲ್ಲಿಕಾರ್ಜುನ್ ಅವರು ಚುನಾವಣೆಯಲ್ಲಿ ಗೆದ್ದಾಗಲೆಲ್ಲಾ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ವಿಶೇಷ. ಸಿಕ್ಕ ಅಧಿಕಾರದಲ್ಲಿ ಜನರಿಗಾಗಿ, ಜನರಿಗೋಸ್ಕರ ಕೆಲಸ ಮಾಡುವ ಮಲ್ಲಿಕಾರ್ಜುನ್ ಅವರ ದೂರದೃಷ್ಟಿತ್ವ, ನಾಯಕತ್ವ, ಅಭಿವೃದ್ಧಿ ತತ್ವಕ್ಕೆ ಪ್ರತಿಯೊಬ್ಬರೂ ತಲೆದೂಗುವವರೇ.

ಕುಂದುವಾಡ ಕೆರೆ ಪಕ್ಕದಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಗಾಜಿನ ಮನೆ ನಿರ್ಮಾಣದಲ್ಲಿ ಮಲ್ಲಣ್ಣ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬೇರೆ ಜಿಲ್ಲೆಗೆ ಹೋಗುವುದನ್ನು ತಪ್ಪಿಸಿ ದಾವಣಗೆರೆಯಲ್ಲಿ ಆಗುವಂತೆ ಮಾಡಿದವರು. ದಾವಣಗೆರೆ ಹಸಿರುಕರಣಕ್ಕೂ ಅಪಾರ ಕಾಣಿಕೆ ನೀಡಿದ್ದಾರೆ‌. ಕೋರ್ಟ್ ಪಕ್ಕದ ಎಸ್. ಎಸ್. ಉದ್ಯಾನವನ, ವಿಶ್ವೇಶ್ವರಯ್ಯ ಪಾರ್ಕ್, ಸೇವಾಲಾಲ್ ಉದ್ಯಾನವನ, ಎಸ್. ನಿಜಲಿಂಗಪ್ಪ ಬಡಾವಣೆಯ ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪ ಪಾರ್ಕ್, ಶ್ರೀ ಚೌಡೇಶ್ವರಿ ಉದ್ಯಾನವನ, ಮುದ್ನಾಳ್ ಬಸವೇಶ್ವರ ಪಾರ್ಕ್, ಸಂಗೀತ ಕಾರಂಜಿ, ಚುಕುಬುಕು ರೈಲು, ಮಾತೃಛಾಯ ನಿರ್ಮಾಣ ಮಲ್ಲಿಕಾರ್ಜುನ್ ಅವರ ಕಾರ್ಯಗಳಲ್ಲಿ ಪ್ರಮುಖವಾದವು.

ದಾವಣಗೆರೆ ಹೇಳಬೇಕೆಂದರೆ ಬಯಲುಸೀಮೆ ಪ್ರದೇಶ. ಭದ್ರಾ ಅಚ್ಚುಕಟ್ಟು ಪ್ರದೇಶ ಹೆಚ್ಚೇನೂ ಇಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಜನರಿಗೆ ಬರಗಾಲದಂತ ವೇಳೆಯಲ್ಲೂ ನೀರಿನ ಹಾಹಾಕಾರ ಬಾರದಂತೆ ನೋಡಿಕೊಂಡವರು. ಕೆರೆಗಳನ್ನು ಅಭಿವೃದ್ಧಿಪಡಿಸಿ ಪುನರುಜ್ಜೀವನಗೊಳಿಸುವ ಜೊತೆಗೆ ಕಾಯಕಲ್ಪ ನೀಡಿ ಜನರಿಗೆ ನೀರೊದಗಿಸಿದ ಆಧುನಿಕ ಭಗೀರಥ ಇವರು. ಬೇತೂರು, ನಾಗನೂರು, ರಾಂಪುರದ ಮೆಟ್ಟಿ ಸೇರಿದಂತೆ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರು ಸಿಗುವಂತೆ ಮಾಡುವ ಮೂಲಕ ಅನ್ನದಾತರ ಪಾಲಿನ ಸಂಜೀವಿನಿ ಆದರು. ಎಲ್ಲಾ ಇಲಾಖೆಗಳಲ್ಲಿನ ಕೆಲಸ ಮಾಡಿಸುವಲ್ಲಿಯೂ ಯಶಸ್ವಿಯಾದರು.

ಇನ್ನು ಮತ್ತೊಂದು ಮಹಾನ್ ಕಾರ್ಯ ಎಂದರೆ 118 ಕೋಟಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀತರಳಬಾಳು ಜಗದ್ಗುರುಗಳ ಮಹಾಂತ್ವಕಾಂಕ್ಷೆಯ 22 ಕೆರೆಗಳನ್ನು ತುಂಗಾಭದ್ರಾ ನದಿಯಿಂದ ಏಕಕಾಲಕ್ಕೆ ತುಂಬಿಸುವ
ಯೋಜನೆ. ಇನ್ನು ಹಲವು ಸೇತುವೆಗಳನ್ನು ನಿರ್ಮಾಣ ಮಾಡುವಲ್ಲಿ ಕಾರಣೀಕರ್ತರಾಗಿದ್ದಾರೆ.

ಮಲ್ಲಿಕಾರ್ಜುನ್ ಬೆಳೆದು ಬಂದ ಹಾದಿ:

2023ರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದರು.

ಎಸ್.ಎಸ್. ಮಲ್ಲಿಕಾರ್ಜುನ್‍ರವರು ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾಗಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದವರು.

ಸದಾ ಹಸನ್ಮುಖಿ, ಜನಾನುರಾಗಿ ಸಹೃದಯ ಹಾಗೂ ಸಾಮಾಜಿಕ ಕಳಕಳಿಯುಳ್ಳ ದೂರದೃಷ್ಟಿತ್ವದ ನಾಯಕ. ಖ್ಯಾತ ಕೈಗಾರಿಕೋದ್ಯಮಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪರವರ ಸುಪುತ್ರರು.

1967ರಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪರ ತೃತೀಯ ಪುತ್ರರಾಗಿ ಜನನ. ಮೈಸೂರು ವಿವಿಯಲ್ಲಿ ಬಿ.ಕಾಂ. ಪದವಿ ಪಡೆದಿದ್ದಾರೆ. 1999ರಲ್ಲಿಜಿ.ಪಿ.ಪ್ರಭಾ ಅವರನ್ನು ವಿವಾಹವಾದರು. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯ ತಂದೆ.

ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಮಲ್ಲಿಕಾರ್ಜುನ್ ಅವರು ನಾಡಿಗೆ ತಮ್ಮನ್ನು ಸಮರ್ಪಿಸಿಕೊಂಡು, ಜನರ ಕಲ್ಯಾಣಕ್ಕಾಗಿ, ನಿರಂತರವಾಗಿ ದುಡಿಯುತ್ತಾ ಬಂದಿದ್ದಾರೆ. ಶಾಮನೂರು ಕುಟುಂಬ
ಎಂದೇ ಕರ್ನಾಟಕದಾದ್ಯಂತ ಹೆಸರಾಗಿರುವ ಇವರ ಮನೆತನ ಅನೇಕ ಸಂಸ್ಥೆಗಳನ್ನು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಾ ಬಂದಿದೆ.

ದಾವಣಗೆರೆ ಕ್ಷೇತ್ರದ ಜನರು ಇವರ ಸೇವೆಯನ್ನು ಮನಗಂಡು 3ನೇ ಬಾರಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾದರು. ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ನಿರ್ಮಾಣ ಮಾಡಲು ತುಂಬಾ ಉತ್ಸಾಹಿಗಳಾಗಿ ಶ್ರಮಿಸಿದವರು.

ಸ್ವತಃ ಕ್ರೀಡಾಪಟುಗಳು ಹೌದು. ಎಸ್.ಎಸ್. ಮಲ್ಲಿಕಾರ್ಜುನ್ ರವರಿಗೆ ಅಚ್ಚುಮೆಚ್ಚಿನ ಆಟಗಳೆಂದರೆ ಕ್ರಿಕೆಟ್ ಹಾಗೂ ಷಟಲ್ ಬ್ಯಾಡ್ಮಿಂಟನ್. ಈ ಕಾರಣಕ್ಕೆ ಇವರಿಗೆ ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಷನ್ ನ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ಈ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಆಗಿಯೂ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸ್ವಂತ ಕೈಗಾರಿಕೋದ್ಯಮಿಯಾದ ಮಲ್ಲಿಕಾರ್ಜುನ್ ಅವರು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಐ.ಸಿ.ಪಿ.ಎಲ್. ಸಕ್ಕರೆ ಕಾರ್ಖಾನೆ ಜೊತೆ ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿ ಯಶಸ್ವಿಯೂ ಆಗಿದ್ದಾರೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿ ಐ.ಸಿ.ಪಿ.ಎಲ್. ಡಿಸ್ಟಲರಿ ಘಟಕ ಪ್ರಾರಂಭಿಸಿದ್ದಾರೆ. ಬಿಜಾಪುರ ಜಿಲ್ಲೆ ಬಬಲೇಶ್ವರ ಗ್ರಾಮದಲ್ಲಿ ಶ್ರೀ ಸೋಮೇಶ್ವರ ಷುಗರ್ಸ್ ಲಿಮಿಟೆಡ್, ಕಾರ್ಖಾನೆ ನಡೆಸುತ್ತಿದ್ದಾರೆ.

ಕೈಗಾರಿಕೋದ್ಯಮದಲ್ಲಿ ಅಪಾರ ಆಸಕ್ತಿ ಹೊಂದಿರುವ ಎಸ್.ಎಸ್. ಮಲ್ಲಿಕಾರ್ಜುನ್ ರವರು ವಿದೇಶಗಳಾದ ರಷ್ಯಾ, ಬ್ರೆಜಿಲ್, ಇಂಗ್ಲೆಂಡ್, ಸಿಂಗಪೂರ್, ಅಮೆರಿಕಾ, ದುಬೈ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳಿಗೆ ಭೇಟಿ ನೀಡಿ ಬಹಳಷ್ಟು ಅನುಭವ ಪಡೆದಿದ್ದಾರೆ. 1999 ರಲ್ಲಿ ಅಧಿಕಾರಕ್ಕೆ ಬಂದ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದವರು.

ಮಲ್ಲಿಕಾರ್ಜುನ್ ಕನಸುಗಳೇನು…?

ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ನಿವೇಶನರಹಿತರಿಗೆ ನಿವೇಶನ ನೀಡುವ ಕನಸು ಕಂಡಿದ್ದಾರೆ. ಇದಕ್ಕಾಗಿ 500 ಎಕರೆ ನೋಡುವಂತೆ ದೂಡಾ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾವಿರಾರು ಜನರಿಗೆ ವಸತಿ ನೀಡುವ ಮೂಲಕ ಸೂರು ಒದಗಿಸುವ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಈ ನಿಟ್ಟಿನಲ್ಲಿ ಆದಷ್ಟು ಬೇಗ ಜಮೀನು ಗುರುತಿಸಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಕಾಂಗ್ರೆಸ್ ನ 5 ಗ್ಯಾರಂಟಿಗಳ ಪೈಕಿ ನಾಲ್ಕು ಅನುಷ್ಠಾನಕ್ಕೆ ಬಂದಿದ್ದು, ಜನರಿಗೆ ತಲುಪಿಸಲು ಪಾರದರ್ಶಕವಾಗಿ ಕೆಲಸ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಸಂಕಲ್ಪ ಮಾಡಿದ್ದಾರೆ. ಮಲ್ಲಿಕಾರ್ಜುನ್ ಅವರು ಶಾಸಕರಾಗುತ್ತಿದ್ದಂತೆ ಮಹಾನಗರ ಪಾಲಿಕೆಯೂ ಕೈ ವಶವಾಗಿದೆ. ಇಲ್ಲಿಯೂ ಉತ್ತಮ ಆಡಳಿತ ನೀಡುವಂತೆ ಸೂಚನೆ ನೀಡಿದ್ದಾರೆ.

ಕೆಲಸದ ಮೂಲಕವೇ ಉತ್ತರ ಕೊಡುವುದು ಮಲ್ಲಿಕಾರ್ಜುನ್ ರ ಕಾರ್ಯವೈಖರಿ. ಶಾಮನೂರು ಶಿವಶಂಕರಪ್ಪರ ಬಗ್ಗೆ ಮಾತನಾಡಿದ್ದ ಸಂಸದ ಜಿ. ಎಂ. ಸಿದ್ದೇಶ್ವರ್ ಅವರ ಟೀಕೆಗೆ ಗುಡುಗು ಸಿಡಿಲನಂತ ಪ್ರತಿಕ್ರಿಯೆ ಕೊಟ್ಟಿದ್ದರು. ಮಾತ್ರವಲ್ಲ,
ಅಭಿವೃದ್ಧಿ ವಿಚಾರದಲ್ಲಿ, ಕೊರೊನಾದಂತ ಸಂಕಷ್ಟದ ವೇಳೆಯಲ್ಲಿ ಮಲ್ಲಿಕಾರ್ಜುನ್ ಅವರ ಜ್ಞಾನಕ್ಕೆ ಎಲ್ಲರೂ ಮಾರು ಹೋಗಿದ್ದರು. ಆಕ್ಸಿಜನ್, ಬೆಡ್, ಪಿಪಿಇ ಕಿಟ್, ಕೊರೊನಾ ವ್ಯಾಕ್ಸಿನ್… ಹೀಗೆ ಪ್ರತಿಯೊಂದು ಮಾಹಿತಿ ಪಡೆದಿದ್ದ ಮಲ್ಲಣ್ಣ
ಅವರು ಡಿಸಿ, ಎಸ್ಪಿಯವರಿಗೆ ಹಲವು ಬಾರಿ ಸಲಹೆ, ಸಹಕಾರ ನೀಡಿದ್ದರು. ಅಷ್ಟು ಜನಪ್ರಜ್ಞೆ ಅವರಲ್ಲಿದೆ.

ನಾಲ್ಕೂವರೆ ಸಾವಿರ ಕೋಟಿ ರೂ. ಅನುದಾನ:

ಅನುದಾನ ತರುವ ವಿಚಾರದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸದಾಮುಂದು. ದಾವಣಗೆರೆ ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 5 ವರ್ಷಗಳಲ್ಲಿ 2802.75 ಕೋಟಿ ರೂಪಾಯಿ ಅನುದಾನ ತಂದಿದ್ದರು. ಅವರು ಅಧಿಕಾರದಲ್ಲಿ ಇರುವವರೆಗೆ 1559.65 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದರೆ, 1243 ಕೋಟಿ ರೂಪಾಯಿ ಕೆಲಸ ಪ್ರಗತಿಯಲ್ಲಿದ್ದವು. ಈಗ ಮತ್ತೆ ಸಚಿವರಾಗಿದ್ದು, ಈ ಎಲ್ಲಾ ಯೋಜನೆಗಳು ಪೂರ್ಣಗೊಳ್ಳುವ ವಿಶ್ವಾಸ ಜನರದ್ದು.

ಹಸಿರು ದಾವಣಗೆರೆಗೆ ಶ್ರಮ:

– ಕುಂದುವಾಡ ಕೆರೆ ಪಕ್ಕದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ: ಸಿಎಂ ಸಿದ್ದರಾಮಯ್ಯರನ್ನು ದಾವಣಗೆರೆಗೆ ಕರೆಯಿಸಿ ಉದ್ಘಾಟನೆ, ಕೋರ್ಟ್ ಪಕ್ಕದ ಎಸ್. ಎಸ್. ಉದ್ಯಾನವನ, ವಿಶ್ವೇಶ್ವರಯ್ಯ ಪಾರ್ಕ್, ಸೇವಾಲಾಲ್ ಉದ್ಯಾನವನ, ಎಸ್. ನಿಜಲಿಂಗಪ್ಪ ಬಡಾವಣೆಯ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಉದ್ಯಾನವನ, ಶ್ರೀ ಚೌಡೇಶ್ವರಿ ಉದ್ಯಾನವನ, ಮುದ್ನಾಳ್ ಬಸವೇಶ್ವರ ಪಾರ್ಕ್, ಸಂಗೀತ ಕಾರಂಜಿ, ಚುಕುಬುಕು ರೈಲು, ಮಾತೃಛಾಯ.

2013ರಿಂದ 2017-18ರವರೆಗೆ ಒಟ್ಟಾರೆ 47. 31 ಕೋಟಿ ರೂಪಾಯಿ ಮಂಜೂರಾತಿ ತಂದು ಬಹುಮುಖ್ಯವಾಗಿ ಕುಂದುವಾಡ ಕೆರೆಯ ಪಕ್ಕದಲ್ಲಿ ಅತಿ ದೊಡ್ಡದಾದ ಮತ್ತು ಸುಂದರವಾದ ಗಾಜಿನ ಮನೆಯನ್ನು 25 ಕೋಟಿ 63 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಸಮಗ್ರ ಜೈವಿಕ ಕೇಂದ್ರದ ಕಟ್ಟಡವನ್ನು 9 ಕೋಟಿ 8 ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಿಸಲಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ 31 ಉದ್ಯಾನವನಗಳನ್ನು ಅಭಿವೃದ್ದಿಪಡಿಸಲಾಗಿದೆ.

ಎಪಿಎಂಸಿ ಅಭಿವೃದ್ಧಿ:

ಜಾನುವಾರು ಮಾರುಕಟ್ಟೆ ಪರಿವೀಕ್ಷಣೆ, ಚಿಕ್ಕನಹಳ್ಳಿ – ಬಸಾಪುರ ಹಳ್ಳದ ಅಭಿವೃದ್ಧಿ ಕಾಮಗಾರಿ, ಎಂಸಿಸಿ ಎ ಮತ್ತು ಬಿ ಬ್ಲಾಕ್ 6 ನೇ ಮುಖ್ಯರಸ್ತೆ, ಎಸ್. ಎಸ್. ಹೈಟೆಕ್ ಆಸ್ಪತ್ರೆ ರಸ್ತೆ

2013-14ರಿಂದ 2018ರವರೆಗೆ ಒಟ್ಟಾರೆ 226.63 ಕೋಟಿ ರೂಪಾಯಿ ಮೊತ್ತದ ಯೋಜನೆ ರೂಪಿಸಿ, ಆಧುನಿಕ ತಂತ್ರಜ್ಞಾನ ಹೊಂದಿರುವಂಥ ಜಾನುವಾರು ಮಾರುಕಟ್ಟೆ ನಿರ್ಮಾಣ, ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಗೋದಾಮುಗಳ ನಿರ್ಮಾಣ, ಮುಖ್ಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಹಲವಾರು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಹಮಾಲರ ವಸತಿ ಗೃಹಗಳ ನಿರ್ಮಾಣ. ರೈತರಿಗೆ ದಿನನಿತ್ಯದ ಧಾರಣೆಗಳ ಮಾಹಿತಿಗಾಗಿ ಕಿಯೋಸ್ಕ್ ಅಳವಡಿಕೆ.

ನೀರಾವರಿ ಯೋಜನೆಗಳು:

ಶ್ರೀ ತರಳಬಾಳು ಜಗದ್ಗುರುಗಳ ಮಹಾತ್ವಾಕಾಂಕ್ಷೆಯ 22 ಕೆರೆಗಳನ್ನು ತುಂಗಾಭದ್ರಾ ನದಿಯಿಂದ ಏಕಕಾಲದಲ್ಲಿ ತುಂಬಿಸುವ ಯೋಜನೆಯ ಕಾಮಗಾರಿ ಪರಿವೀಕ್ಷಣೆ, ಕಾಡಜ್ಜಿ – ಚಿಕ್ಕಮ್ಯಾಗಳೇರಿ ರಸ್ತೆ ಕಾಮಗಾರಿ, ಆವರಗೊಳ್ಳದಿಂದ – ದೊಗ್ಗಳ್ಳಿಯವರೆಗೆ ಕಾಂಕ್ರೀಟ್ ರಸ್ತೆ.

118 ಕೋಟಿ 55 ಲಕ್ಷ ರೂಪಾಯಿ ಅನುದಾನ. ಶ್ರೀ ತರಳಬಾಳು ಜಗದ್ಗುರುಗಳ ಮಹಾತ್ವಾಕಾಂಕ್ಷೆಯ 22 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ಏಕಕಾಲದಲ್ಲಿ ನೀರು ತುಂಬಿಸುವ ಯೋಜನೆ ಪೂರ್ಣಕ್ಕೆ ಯತ್ನ. ಈ ಕಾಮಗಾರಿಗೆ 79
ಕೋಟಿ ರೂಪಾಯಿ ವೆಚ್ಚ.

ಭದ್ರಾ ನೀರಾವರಿ ಯೋಜನೆಗೆ ಒಳಪಟ್ಟ ಪ್ರದೇಶದಲ್ಲಿ ಚಾನಲ್ ರಸ್ತೆಗಳ ಅಭಿವೃದ್ಧಿ ಜೊತೆಗೆ ಎಸ್ ಸಿ ಪಿ ಮತ್ತು ಟಿಎಸ್ ಪಿ ಯೋಜನೆಯಡಿ ಕಾಲೋನಿಯ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ.

ನಗರದ ಅಭಿವೃದ್ಧಿ ಕೆಲಸಗಳು:

ರಿಂಗ್ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ರಸ್ತೆ ಸೇರುವ ವೃತ್ತ ಅಭಿವೃದ್ಧಿ, ಪಿ. ಬಿ. ರಸ್ತೆಯಲ್ಲಿ ಅಲಂಕಾರಿಕಾ ವಿದ್ಯುತ್ ದೀಪ ಅಳವಡಿಕೆ, ವಿಜಯಲಕ್ಷ್ಮೀ ರಸ್ತೆಯಲ್ಲಿರುವ ನವೀಕೃತಗೊಂಡ ಗಡಿಯಾರ ಕಂಬ, ರಿಂಗ್ ರಸ್ತೆಯಲ್ಲಿರುವ ನೌಕರರ ಸಮುದಾಯದ ವೃತ್ತದಲ್ಲಿ ಅತ್ಯಾಧುನಿಕ ಗಡಿಯಾರ ಅಳವಡಿಕೆ, ಎಸ್. ಎಸ್. ಮಲ್ಲಿಕಾರ್ಜುನ್ ಸಾಗರದಲ್ಲಿ ಹೈಜೆಟ್ ಕಾರಂಜಿ.

ಒಟ್ಟು 72.85 ಕೋಟಿ ರೂಪಾಯಿ ಬಿಡುಗಡೆ. ಈ ಅನುದಾನದಲ್ಲಿ ರೈಲ್ವೆ ಮೇಲು ಸೇತುವೆಗೆ ಎರಡೂ ಬದಿಗೆ ಏರಿ ರಸ್ತೆ ನಿರ್ಮಾಣ, ಕುಂದುವಾಡ ಕೆರೆಗೆ ಹೈಜೆಟ್ ಕಾರಂಜಿ, ಹಳೇ ಪಿ. ಬಿ. ರಸ್ತೆಯ ವಿಭಜಕಕ್ಕೆ ಅಲಂಕಾರಿಕಾ ವಿದ್ಯುತ್ ದೀಪ, ಕಾಂಕ್ರೀಟ್ ರಸ್ತೆ, ಒಳಚರಂಡಿ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾಮಗಾರಿ.

– ಗ್ರಾಮೀಣ ಕುಡಿಯುವ ನೀರು;

ನಾಗನೂರು ಶುದ್ಧ ಕುಡಿಯುವ ನೀರಿನ ಘಟಕ, ಮಾಳಗೊಂಡನಹಳ್ಳಿ ಶುದ್ಧ ಕುಡಿಯುವ ನೀರಿನ ಘಟಕ.

ಸುಮಾರು 55 ಕೋಟಿ 37 ಲಕ್ಷ ರೂಪಾಯಿ ಅನುದಾನ ಬಿಡುಗಡೆ. ಗ್ರಾಮೀಣ ಜನರಿಗೆ ಕುಡಿಯಲು ಶುದ್ಧ ನೀರು ಒದಗಿಸಲು ಭಗೀರಥ ಪ್ರಯತ್ನಪಟ್ಟು ಮಾಳಗೊಂಡನಹಳ್ಳಿ ಜೊತೆಗೆ 15 ಹಳ್ಳಿಗಳಿಗೆ, ಬೇತೂರು ಗ್ರಾಮದ ಜೊತೆಗೆ 7 ಹಳ್ಳಿಗಳಿಗೆ ಮತ್ತು ಶಿರಮಗೊಂಡನಹಳ್ಳಿ ಸೇರಿದಂತೆ 19 ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರಿನ ಯೋಜನೆ ಅನುಷ್ಠಾನ. ವಿವಿಧ ಗ್ರಾಮಗಳಲ್ಲಿ 76 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ.

2018-19 ನೇ ಸಾಲಿನ ಆಯವ್ಯಯದಲ್ಲಿ ಮಾಗಾನಹಳ್ಳಿ, ಬೇತೂರು, ಕಾಡಜ್ಜಿ, ರಾಂಪುರ ಮತ್ತು ಹಿರೇಮ್ಯಾಗಳಗೇರಿ ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸಲು 135 ಕೋಟಿ ರೂಪಾಯಿ ಮಂಜೂರು.

– ನಗರದ ರಸ್ತೆ, ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳು:

ಹಳೇ ಪಿ. ಬಿ. ರಸ್ತೆ, ಶಾಂತವೇರಿ ಗೋಪಾಲಗೌಡ ವೃತ್ತ

ಒಟ್ಟು 233.88 ಕೋಟಿ ರೂಪಾಯಿ ಬಿಡುಗಡೆ. ಬೀರೂರು – ಸಮ್ಮಸಗಿ ರಸ್ತೆ ಅಭಿವೃದ್ದಿಪಡಿಸಲು 49 ಕೋಟಿ ರೂಪಾಯಿ. ಶಾಮನೂರು ರಸ್ತೆ (ದಾವಣಗೆರೆ – ಮಲೇಬೆನ್ನೂರು) ರಸ್ತೆ ಅಭಿವೃದ್ಧಿಗೆ 20 ಕೋಟಿ, ವಿವಿಧ ಸ್ಥಳಗಳಲ್ಲಿ ಸೇತುವೆ ನಿರ್ಮಾಣ, ವೃತ್ತಗಳ; ಅಭಿವೃದ್ದಿ ಮತ್ತು ಡಾಂಬರೀಕರಣದ ರಸ್ತೆ ಅಭಿವೃದ್ಧಿ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ವಾಸಿಸುವ ಕಾಲೋನಿಗಳ ಕೂಡು ರಸ್ತೆಗಳನ್ನು ಅಭಿವೃದ್ಧಿಪಡಿಸಿರುವುದು.

ಜಲಸಿರಿ ಯೋಜನೆಯಡಿ ದಾವಣಗೆರೆ ನಗರಕ್ಕೆ ಸದಾ 24 ಗಂಟೆ ತುಂಗಾಭದ್ರಾ ನದಿಯಿಂದ ಬೃಹತ್ ನೀರು ಸರಬರಾಜು ಮಾಡಿಕೊಂಡು ದಾವಣಗೆರೆ ನಗರಕ್ಕೆ ನೀರು ಪೂರೈಸಲು 19 ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಜೊತೆಗೆ ಪೈಪ್ ಲೈನ್ ಅಳವಡಿಸಲು ಒಟ್ಟು 596.99 ಕೋಟಿ ರೂಪಾಯಿ ಮಂಜೂರಾಗಿತ್ತು. ಕಾಮಗಾರಿಗಳು ಪ್ರಗತಿಯಲ್ಲಿದ್ದವು.

– ನಮ್ಮ ಗ್ರಾಮ – ನಮ್ಮ ರಸ್ತೆ:

ನಾಗರಕಟ್ಟೆ – ಬೇತೂರು ರಸ್ತೆ, – ಆವರಗೊಳ್ಳದ ಹತ್ತಿರ ಸೇತುವೆ, – ಕಕ್ಕರಗೊಳ್ಳದಿಂದ ಆಂಜನೇಯ ಬಡಾವಣೆ ವೃತ್ತ, – ಮಾಗಾನಹಳ್ಳಿ ಕೋಡಿ ಕ್ಯಾಂಪ್ ನಿಂದ ಬದಿಯ ನಾಯಕನ ತಾಂಡ ರಸ್ತೆ, ಕಾಡಜ್ಜಿ – ಅಮೃತ ನಗರ ರಸ್ತೆ,
ಕೋಲ್ಕುಂಟೆ ರಸ್ತೆ

ಐದು ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು 115 ಕೋಟಿ 85 ಲಕ್ಷ ರೂಪಾಯಿ ಮೊತ್ತ ಮಂಜೂರು. ಬಹುತೇಕ ಎರಡೂ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ರಸ್ತೆಗಳನ್ನು ಅಭಿವೃದ್ದಿಪಡಿಸಿ ಸಂಪರ್ಕ
ಕಲ್ಪಿಸಲಾಗಿದೆ. ಈ ಇಲಾಖೆಯಲ್ಲಿ 125.17 ಕಿಲೋಮೀಟರ್ ಉದ್ದಕ್ಕೆ ಡಾಂಬರೀಕರಣ ಮತ್ತು 75.17 ಕಿಲೋ ಮೀಟರ್ ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ.

ತೋಟಗಾರಿಕೆ – 47.31 ಕೋಟಿ ರೂ., ಎಪಿಎಂಸಿ – 226.63 ಕೋಟಿ ರೂ., ನಗರಾಭಿವೃದ್ಧಿ ಪ್ರಾಧಿಕಾರ – 72.85 ಕೋಟಿ ರೂ., ನೀರಾವರಿ – 118. 55 ಕೋಟಿ ರೂ., ಗ್ರಾಮೀಣ ನೀರು ಸರಬರಾಜು – 55.37 ಕೋಟಿ ರೂ., ಲೋಕೋಪಯೋಗಿ ಇಲಾಖೆ –
233.88 ಕೋಟಿ ರೂ., ಪಿ ಎಂ ಜೆ ಎಸ್ ವೈ – 115.82 ಕೋಟಿ ರೂ.

– ಮಹಾನಗರ ಪಾಲಿಕೆ – 385 ಕೋಟಿ

ಕೆ ಯು ಡಿ ಎಫ್ ಸಿ, ಎನ್ ಕೆ ಯು ಎಸ್ ಐ ಪಿ ಯೋಜನೆಯಡಿ ನೀರು ಸರಬರಾಜು, ಒಳಚರಂಡಿ, ಕೊಳಚೆ ನೀರು ಶುದ್ದೀಕರಣ ಘಟಕಕ್ಕೆ 81.63 ಕೋಟಿ ರೂ., ಕೆ ಯು ಡಿ ಎಫ್ ಸಿ, ಜಲಸಿರಿ ಯೋಜನೆಯಡಿ ನೀರು ಸರಬರಾಜು, ಒಳಚರಂಡಿ, ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ 596.99 ಕೋಟಿ ರೂ., ಸಣ್ಣ ನೀರಾವರಿ – 58.89 ಕೋಟಿ ರೂ.,

ಶಾಸಕರ ಅನುದಾನ – 20 ಕೋಟಿ ರೂ., ಬೆಸ್ಕಾಂ (ವಿದ್ಯುತ್ ಇಲಾಖೆ) – 649.28 ಕೋಟಿ ರೂ., ವಸತಿ (ಕರ್ನಾಟಕ ಗೃಹ ಮಂಡಳಿ) – 20.10 ಕೋಟಿ ರೂ., ಸಮಾಜ ಕಲ್ಯಾಣ – 33.10 ಕೋಟಿ ರೂ., ವಾರ್ತಾ ಇಲಾಖೆ – 300 ಕೋಟಿ ರೂ.

ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ – 34.70 ಕೋಟಿ ರೂ., ಪ್ರವಾಸೋದ್ಯಮ ಇಲಾಖೆ – 3.75 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ – 18 ಕೋಟಿ ರೂ., ಇಂದಿರಾ ಕ್ಯಾಂಟೀನ್ – 3.94 ಕೋಟಿ ರೂಪಾಯಿ.

ಇದಿಷ್ಟು 2018ಕ್ಕಿಂತ ಮುಂಚೆ ಮಾಡಿದ ಅಭಿವೃದ್ಧಿ ಕಾರ್ಯಗಳು. ಎಲ್ಲಾ ಸೇರಿ ಒಟ್ಟು 2800.75 ಕೋಟಿ ರೂಪಾಯಿ ಅನುದಾನ ತರುವ ಮೂಲಕ ಅಭಿವೃದ್ಧಿ ಹರಿಕಾರ ಎನಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅಭಿವೃದ್ಧಿ ಹರಿಕಾರ, ದೂರದೃಷ್ಟಿತ್ವ ಉಳ್ಳ ಜನಪ್ರತಿನಿಧಿ ಎಂದು ಮಲ್ಲಿಕಾರ್ಜುನ್ ಅವರನ್ನು ಕರೆಯುವುದು.

ಈ ವರ್ಷ ಮಲ್ಲಿಕಾರ್ಜುನ್ ಅವರು ಸುಮಾರು ಒಂದು ಸಾವಿರದ ಮುನ್ನೂರು ಕೋಟಿ ರೂಪಾಯಿಗೂ ಅಧಿಕ ಅನುದಾನ ತಂದಿದ್ದಾರೆ, ತರುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆಯು ಇಂದು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣವೇ ಮಲ್ಲಣ್ಣ. ಬಡವರ ಬಂಧು, ಹಿರಿಯ ರಾಜಕಾರಣಿ, 26 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳು ಪ್ರಮುಖ ಕಾರಣ. ದಾವಣಗೆರೆ ಧಣಿ, ನಮ್ಮ ಪ್ರೀತಿಯ ಸಾಹುಕಾರರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ 58ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಮನದುಂಬಿ, ಹೃದಯಪೂರ್ಕವಾಗಿ ಕೋರುತ್ತೇನೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment