ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆಪರೇಷನ್ ಸಿಂಧೂರ 2.0? ಅಲ್ಲಾಡ್ತಿದೆ ಪಾಕ್ ಬುಡ!

On: May 8, 2025 10:26 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-08-05-2025

ಪಹಲ್ಗಾಮ್ ಘಟನೆಗೆ ಪ್ರತೀಕಾರ ತೀರಿಸಿಕೊಂಡಿರುವ ಭಾರತದ ಸಿಟ್ಟು ತಣ್ಣಗಾದಂತೆ ಕಂಡು ಬರುತ್ತಿಲ್ಲ. ಯಾಕೆಂದರೆ 26 ಪ್ರವಾಸಿಗರ ಕೊಂದು ಹಾಕಿದ ಉಗ್ರರ ಕೃತ್ಯಕ್ಕೆ ಇಡೀ ವಿಶ್ವವೇ ಖಂಡಿಸಿದೆ. ರಕ್ತಬಿಜಾಸುರರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಟೊಂಕಕಟ್ಟಿ ನಿಂತಿದ್ದಾರೆ.

ಭಯೋತ್ಪಾದನಾ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರ ಹುಟ್ಟಡಗಿಸಿರುವ ಭಾರತೀಯ ವಾಯು ಸೇನೆಯು ಆಪರೇಷನ್ ಸಿಂಧೂರ 2.0 ನಡೆಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದೆ. 80 ಭಯೋತ್ಪಾದಕರ ಸಂಹಾರ ಮಾಡಿರುವ
ಭಾರತವು ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಪ್ರೋತ್ಸಾಹಿಸಿದ ಪಾಕ್ ಬುಡ ಅಲ್ಲಾಡಿಸಿದೆ.

ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮಧ್ಯರಾತ್ರಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 80ಕ್ಕೂ ಅಧಿಕ ಉಗ್ರರು ಫಿನಿಶ್ ಆಗಿದ್ದಾರೆ. ದಾಳಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಸೇನೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು, ಪಾಕ್ ಗೆ ಮತ್ತಷ್ಟು ಹೊಡೆತ ಕೊಡುವುದು ಖಚಿತ.

ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಸೈರನ್ ಸದ್ದು ಮೊಳಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗ್ತಾ ಇದೆ .ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನದ ಸಿಯಾಲ್‌ಕೋಟ್‌ದು ಎಂದು ಹೇಳಲಾಗಿದ್ದು, ಇದರಲ್ಲಿ ಸೈರನ್ ಶಬ್ಧ ಮೊಳಗುತ್ತಿದ್ದಂತೆ ಅಲ್ಲಿನ ಸ್ಥಳೀಯ ನಿವಾಸಿಗಳು ದೇವರ ಹೆಸರು ಹೇಳುತ್ತಾ ಓಡಿ ಹೋಗುತ್ತಿರುವ ದೃಶ್ಯಾವಳಿಗಳೂ ಕೂಡ ವೈರಲ್ ಆಗಿವೆ.

ಭಾರತ ಕೇವಲ ಒಂದು ದಾಳಿ ನಡೆಸಿ ಸುಮ್ಮನಾಗುವ ಲಕ್ಷಣ ಗೋಚರಿಸುತ್ತಿಲ್ಲ. ಈ ವಿಡಿಯೋದ ಕುರಿತು ಅಥವಾ ದಾಳಿಯ ಸತ್ಯಾಸತ್ಯತೆಯ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಭಾರತೀಯ ಸೇನೆಯಾಗಲಿ, ಸರ್ಕಾರವಾಗಲಿ ಸ್ಪಷ್ಟನೆ
ನೀಡಿಲ್ಲ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇರುವ ವಿಡಿಯೋವನ್ನು ಅನೇಕರು ಶೇರ್ ಮಾಡ್ತಾ ಇದ್ದು, ಇದನ್ನೂ ಗಾಜಾ ಮೇಲಿನ ದಾಳಿಯ ಹಳೆಯ ವಿಡಿಯೋ ಅಂತಲೂ ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ನಿನ್ನೆಯ ಹಾಗೂ ಈ ವಿಡಿಯೋ ಎರಡನ್ನೂ ಸೇರಿಸಿ ವೈರಲ್ ಮಾಡ್ತಾ ಇದ್ದಾರೆ. ಒಟ್ಟಾರೆಯಾಗಿ ನೋಡುವುದಾದ್ರೆ, ಪಾಕಿಸ್ತಾನ ಮೇಲಿನ ದಾಳಿ ಇನ್ನೂ ಮುಗಿದಿಲ್ಲ ಎನ್ನುವುದು ಸತ್ಯ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment