ಚಂದ್ರಶೇಖರ್ ಆಜಾದ್ ಅವರು ಕುಂಭಮೇಳಕ್ಕೆ ಪಾಪ ಮಾಡಿದವರು ಮಾತ್ರ ಹೋಗುತ್ತಾರೆ ಎಂದು ಹೇಳಿದ್ದಾರೆ. ತಾವು ಯಾವುದೇ ಪಾಪ ಮಾಡಿಲ್ಲವಾದ್ದರಿಂದ ಕುಂಭಮೇಳಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆಗೆ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಕಿಡಿಕಾರಿದ್ದಾರೆ.
ಕುಂಭಮೇಳ 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಪ್ರಾರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಪ್ರಯಾಗರಾಜ್‌ನಲ್ಲಿ ಮಹಾಕುಂಭವು ಜನವರಿ 13 ರಿಂದ ಪ್ರಾರಂಭವಾಗಲಿದೆ. ಎಲ್ಲ ಸಿದ್ಧತೆಗಳು ನಡೆದಿರುವ ನಡುವೆ, ಮಹಾಕುಂಭಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳ ಸರಣಿಯೂ ಮುಂದುವರಿದಿದೆ. ಇದೀಗ ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ನಗೀನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ಅವರು ಮಹಾಕುಂಭ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಪ ಮಾಡಿದವರು ಮಾತ್ರ ಮಹಾಕುಂಭಕ್ಕೆ ಹೋಗುತ್ತಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಪಾಪ ಮಾಡಿದವರು ಮಾತ್ರ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ನಾನು ಯಾವುದೇ ಪಾಪ ಮಾಡಿಲ್ಲ. ಹೀಗಾಗಿ ಈ ರೀತಿ ಸಾರ್ವಜನಿಕವಾಗಿ ಸ್ನಾನ ಮಾಡುವ ನಾಟಕ ಮಾಡುವುದಿಲ್ಲ’ ಎಂದು ಭೀಮ್ ಆರ್ಮಿ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಸಂಸದ ಚಂದ್ರಶೇಖರ ಆಜಾದ್ ಹೇಳಿದ್ದಾರೆ