ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೇಂದ್ರ, ಕರ್ನಾಟಕ ಸರ್ಕಾರ ಆನ್ ಲೈನ್ ಗೇಮ್ ನಿಷೇಧಿಸಬೇಕು: ಮೊಹಮ್ಮದ್ ಜಿಕ್ರಿಯಾ

On: July 4, 2025 3:53 PM
Follow Us:
ಕರ್ನಾಟಕ ಸರ್ಕಾರ
---Advertisement---

SUDDIKSHANA KANNADA NEWS/ DAVANAGERE/ DATE_04-07_2025

ದಾವಣಗೆರೆ: ಆನ್ ಲೈನ್ ಗೇಮ್ ಆಟದ ಚಟಕ್ಕೆ ಬಿದ್ದು ಹಲವಾರು ಮಂದಿ ಹಣ ಕಳೆದುಕೊಂಡು ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರವು ಕೂಡಲೇ ಆನ್ ಲೈನ್ ಗೇಮ್ ನಿಷೇಧಿಸಬೇಕು ಎಂದು ದಾವಣಗೆರೆ ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.

READ ALSO THIS STORY: “19 ಕೋಟಿ 25 ಲಕ್ಷ ರೂ. ಬಂದಿದ್ದರೂ ಕೊಡುತ್ತಿಲ್ಲ”: ಸಾವಿಗೆ ಕಾರಣ ಬರೆದಿಟ್ಟು ಹೋದ ದಾವಣಗೆರೆಯ ಶಶಿಕುಮಾರ!

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಆನ್ ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಇತರೆ ಜೂಜಾಟಗಳ ಚಟಕ್ಕೆ ಬಿದ್ದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಬಿಗಿಯಾದ ಕ್ರಮ ಜರುಗಿಸಬೇಕು. ಯುವಪೀಳಿಗೆಯವರು ದುಶ್ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಾರೆ. ಸಾಲ ಮಾಡಿ ಜೂಜಾಡಿ ಸಾಲ ಮಾಡಿಕೊಳ್ಳುತ್ತಾರೆ. ತೀರಿಸಲು ಸಾಧ್ಯವಾಗದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಮತ್ತಷ್ಟು ಮಂದಿ ಬಲಿಯಾಗುತ್ತಾರೆ. ಇದಕ್ಕೆ ಆಸ್ಪದ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ಗೆ ಶಶಿಕುಮಾರ ಎಂಬ ಯುವಕ ಬಲಿಯಾಗಿದ್ದಾನೆ. ಹದಿನೆಂಟು ಲಕ್ಷ ರೂಪಾಯಿ ಸಾಲ ಮಾಡಿದ್ದು, 19 ಕೋಟಿ ರೂಪಾಯಿ ಹಣ ಬಂದಿದ್ದರೂ ವೆಬ್ ಸೈಟ್ ನವರು ನೀಡಿಲ್ಲ ಎಂದು ಆರೋಪ ಮಾಡಿದ್ದಾನೆ. ಇಂಥ ಯುವಕರು ದಿನೇ ದಿನೇ ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

READ ALSO THIS STORY: ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಹಣ ಪಡೆಯುವುದಷ್ಟೇ ಆನ್ ಲೈನ್ ಗೇಮ್ ಜೂಜಾಟ ನಡೆಸುವ ನಕಲಿ ವೆಬ್ ಸೈಟ್ ಗಳದ್ದಾಗಿದೆ. ಯುವಕರಿಗೆ ಪೊಲೀಸ್ ಇಲಾಖೆಯು ಜಾಗೃತಿ ಮೂಡಿಸುತ್ತಿದ್ದರೂ, ಇಂಥ ಗೀಳಿಗೆ ಬಿದ್ದು ಸಾವು ಕಾಣುತ್ತಿದ್ದಾರೆ. ಪೋಷಕರೂ ಸಹ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಇಂಥ ಆನ್ ಲೈನ್ ಗೇಮ್ ನಡೆಸುವ ನಕಲಿ ವೆಬ್ ಸೆಟ್ ಗಳ ಮಾಲೀಕರ ಬಂಧಿಸಬೇಕು. ಅನುಮತಿ ಕೊಟ್ಟಿದ್ದರೆ ಕೂಡಲೇ ರದ್ದುಪಡಿಸಬೇಕು ಎಂದು ಮೊಹಮ್ಮದ್ ಜಿಕ್ರಿಯಾ ಆಗ್ರಹಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment