SUDDIKSHANA KANNADA NEWS/ DAVANAGERE/ DATE_03-07_2025
ದಾವಣಗೆರೆ: ಆನ್ ಲೈನ್ ಗೇಮ್ ಗಳು ಈಗ ಯುವಪೀಳಿಗೆ ಸೇರಿದಂತೆ ಎಲ್ಲರ ಜೀವ ಹಿಂಡುತ್ತಿದೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ 25 ವರ್ಷದ ಯುವಕ ಆನ್ ಲೈನ್ ಗೇಮ್ ಗೆ ಬಲಿಯಾಗಿದ್ದಾನೆ.
ದಾವಣಗೆರೆ ನಗರದ ಸರಸ್ವತಿ ನಗರದ 25 ವರ್ಷದ ಯುವಕ ಶಶಿಕುಮಾರ್ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂಪಾಯಿ ತೊಡಗಿಸಿಕೊಂಡು ಮೋಸ ಹೋಗಿ ಸಾವಿಗೆ ಶರಣಾದವನು.

READ ALSO THIS STORY: ಪ್ರಧಾನಮಂತ್ರಿ ಅವಾಸ್ 2.0 ಯೋಜನೆಯಡಿ ಅರ್ಜಿ ಆಹ್ವಾನ
ಕಳೆದೊಂದು ವರ್ಷದಿಂದ ಆನ್ ಲೈನ್ ಗೇಮ್ ನಲ್ಲಿ ಹಣ ಹೂಡಿಕೆ ಮಾಡಿದ್ದ ಶಶಿಕುಮಾರ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಇದರಲ್ಲಿ ಹಣ ಬರುತ್ತದೆ ಎಂದು ಕನಸು ಕಟ್ಟಿಕೊಂಡು ಹಂತ ಹಂತವಾಗಿ ಹಣ ಹಾಕಿದ್ದ. ಆದ್ರೆ, ಯಾವಾಗ ಸಾಲ ಹೆಚ್ಚಾಯಿತೋ ಕುಸಿದು ಹೋಗಿದ್ದ. ಸಾವಿಗೂ ಮುನ್ನ ಸುದೀರ್ಘ ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಆನ್ ಲೈನ್ ಗೇಮ್ ನಿಷೇಧಿಸುವಂತೆ ಶಶಿಕುಮಾರ್ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.
ಡೆತ್ ನೋಟ್ ನಲ್ಲೇನಿದೆ?
ಸುಮಾರು ಆರು ಪುಟಗಳ ಸುದೀರ್ಫ ಡೆತ್ ನೋಟ್ ಬರೆದಿಟ್ಟಿದ್ದು, ಮುಖ್ಯ ನ್ಯಾಯಾಧೀಶರಿಗೂ ಎರಡು ಪುಟಗಳ ಮನವಿ ಪತ್ರ ಬರೆದಿದ್ದಾನೆ.
ಇವತ್ತು ಏನು ಹೇಳುತ್ತಿದ್ದೇನೆಂದರೆ ಆನ್ ಲೈನ್ ಗೇಮ್, ಗ್ಯಾಬ್ಲಿಂಗ್ ಬಗ್ಗೆ ವೆಬ್ ಸೈಟ್ ವಿರುದ್ಧ ದೂರು ಕೊಟ್ಟಿದ್ದೇನೆ. ಅಧಿಕಾರಿಗಳು ಮೂರ್ನಾಲ್ಕು ತಿಂಗಳಿನಿಂದ ಓಡಾಡಿಸುತ್ತಿದ್ದರು. ಕ್ರೌನ್ ಯು4 ವೆಬ್ ಸೈಟ್ ವಿರುದ್ದ ದೂರು ದಾಖಲಿಸಲು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಕ್ರೌನ್ ವೆಬ್ ಸೈಟ್ ಏಜೆಂಟ್ 5 ಲಕ್ಷ ರೂಪಾಯಿ ಕೊಟ್ಟರೆ ನಿನ್ನನ್ನು ಸಾಯಿಸುತ್ತಾರೆ. ಹತ್ತು ಲಕ್ಷ ರೂಪಾಯಿ ಕೊಟ್ಟರೆ ಪೊಲೀಸರು ಕೇಸ್ ಮುಚ್ಚಿ ಹಾಕ್ತಾರೆ ಎಂದು ಹೇಳಿದ್ದಾನೆ. ಅವನ ಮಾತುಗಳಿಂದ ಬೇಸರವಾಗಿದ್ದೆ. ಡಿಸಿ, ಎಸ್ಪಿ, ಲೋಕಾಯುಕ್ತ, ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ಹಲವು ಕಚೇರಿಗಳಿಗೆ ಲಿಖಿತ ದೂರು ನೀಡಿದ್ದೇನೆ. ಮಾನವ ಹಕ್ಕುಗಳು ಕಚೇರಿ ಕೇವಲ ಹಣ ಇದ್ದವರಿಗೆ ಮಾತ್ರ. ಎಲ್ಲಾ ಚಾನೆಲ್ ಗಳಿಗೂ ಸಾಕ್ಷ್ಯ ಕಳುಹಿಸಿದ್ದೇನೆ. ಅನಧಿಕೃತ ವೆಬ್ ಸೈಟ್ ನಡೆಸುತ್ತಿರುವವರು ಭ್ರಷ್ಟಾಚಾರಿಗಳು. ಪೊಲೀಸರಿಗೆ ಹಣ ಹೋಗುತ್ತಿದೆ. ನನ್ನ ಕೇಸ್ ಮುಚ್ಚಿ ಹಾಕುವ ಸಾಧ್ಯತೆ ಹೆಚ್ಚಿದೆ.
ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಮಾತನಾಡಬೇಕು. ನಾವು ಬಡವರು. ನಾನು ನೋಡಿದ ಮಟ್ಟಿಗೆ ಜನಪರ ಕಾಳಜಿ ಹೊಂದಿರುವ ನೀವು. ಲೀಗಲ್ ಮತ್ತು ಕಾನೂನು ಬಾಹಿರ ವೆಬ್ ಸೈಟ್ ಗಳು ಇರಬಾರದು. ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಸಾವಿನಿಂದಾದರೂ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನಗೆ ಈ ರೀತಿಯ ಹಿಂಸೆಗಳು ಇ-ಮೇಲ್ ನಿಂದ ಬಂದಿದೆ. ಲೀಗಲ್ ಮತ್ತು ಇಲ್ ಲೀಗಲ್ ಗಳಿಂದ ಹಣ ಕಳೆದುಕೊಂಡವರು ಹೆಚ್ಚಿದ್ದಾರೆ. ಇಂಥ ವೆಬ್ ಸೈಟ್ ಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಎಲ್ಲರಿಗೂ ಹಣ ಹೋಗುತ್ತದೆ. ಈ ಕಾನೂನು ಬಡವರು ಮತ್ತು ಮಧ್ಯಮವರ್ಗದವರಿಗೆ ನ್ಯಾಯ ಸಿಗಲ್ಲ. ಇಲ್ಲಿರುವ ಕಾನೂನು ಲಂಚ ತಿನ್ನುವ ಅಧಿಕಾರಿಗಳು ಪಂಚಾಯಿತಿ ಮಾಡುತ್ತಿದ್ದಾರೆ ಎಂದು ಬರೆದಿದ್ದಾನೆ.
ಡ್ರೀಮ್ ಇಲೆವೆನ್ ಸೇರಿದಂತೆ ಹಲವು ವೆಬ್ ಸೈಟ್ ಗಳಿವೆ. ನನ್ನ ತಂದೆ ತಾಯಿ ಮತ್ತು ಗೆಳೆಯಲು ಸಹಕಾರ ಮಾಡಿದ್ದಾರೆ. ಬದುಕಿದ್ದಾಗ ನ್ಯಾಯ ಸಿಗಲ್ಲ. ಸತ್ತ ಮೇಲಾದರೂ ನ್ಯಾಯ ಸಿಗಲಿ. ಸ್ನೇಹಿತರಿಗೆ ಮಾಹಿತಿ ನೀಡಿದ್ದೇನೆ. ಏನೂ ಮಾಡದೇ ಸಾಯುತ್ತಿಲ್ಲ. ಎಲ್ಲಾ ಮಾಡಿಯೇ ಸಾಯುತ್ತಿದ್ದೇನೆ. ನನ್ನ ಸಾವಿನಿಂದ ಎಲ್ಲಾ ವೆಬ್ ಸೈಟ್ ಗಳು ಬ್ಯಾನ್ ಆಗಲಿ. ಎಲ್ಲರ ಮಕ್ಕಳಿಗೂ ಒಳ್ಳೆಯದಾಗಲಿ. ಅಧಿಕಾರಿಗಳ ದುರ್ವರ್ತನೆಯಿಂದ ಸಾಯುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದೇನೆ ಎಂದು ಹೇಳಿದ್ದಾನೆ.
ಆನ್ ಲೈನ್ ಗೇಮ್ ನಲ್ಲಿ 19 ಕೋಟಿ ರೂಪಾಯಿ ಗೆದ್ದಿದ್ದೇನೆ ಎಂದು ಶಶಿಕುಮಾರ್ ಹೇಳಿಕೊಂಡಿದ್ದಾನೆ. ಆನ್ ಲೈನ್ ಗೇಮ್ ಕಂಪೆನಿ ನೀಡಿಲ್ಲ. ದೂರು ನೀಡಿದ್ದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದೇನೆ ಎಂದಿದ್ದಾನೆ. ನಾನು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.