SUDDIKSHANA KANNADA NEWS/ DAVANAGERE/ DATE:29-06-2024
ದಾವಣಗೆರೆ: ಆನ್ ಲೈನ್ ನಲ್ಲಿ ಮೋಸ ಮಾಡುತ್ತಿರುವ ಜಾಲ ಸಕ್ರಿಯವಾಗಿದ್ದು, ಅನಾಮಧೇಯ ಕರೆಗಳಿಗೆ ಸ್ಪಂದಿಸಬೇಡಿ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸಲಹೆ ನೀಡಿದೆ.
ಸಿಇಎನ್ ಪೊಲೀಸ್ ಠಾಣೆಗೆ ದೂರು:
ಆನ್ ಲೈನ್ ನಲ್ಲಿ ಬೆದರಿಸಿ ಹಣ ವರ್ಗಾವಣೆ ಮಾಡಿಕೊಂಡ ಕುರಿತಂತೆ ಸಿಇಎನ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ದೂರುದಾರನು ಕೆಲಸ ಮಾಡುವ ಕಂಪನಿಯವರು ಗುಜರಾತ್ ರಾಜ್ಯದ ಅಮದಾಬಾದ್ ನಲ್ಲಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಖಾತೆ ಮಾಡಿಕೊಟ್ಟಿದ್ದು ಈ ಖಾತೆಗೆ ತಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿಸಿದ್ದಾರೆ. ಆದ್ರೆ, ಜೂನ್ 13ರಂದು ಬೆಳಗ್ಗೆ 8.45ರ ಸುಮಾರಿನಲ್ಲಿ ಮೊಬೈಲ್ ನಂಬರ್ ಗೆ ಮೊಬೈಲ್ ನಂಬರ್ 7808775255 ನಂಬರಿನಿಂದ ಯಾರೂ ಅಪರಿಚಿತ ವ್ಯಕ್ತಿ ಕರೆ ಮಾಡಿ ನಾವು ಫೆಡೆಕ್ಸ್ ಕೊರಿಯರ್ ನ ಉದ್ಯೋಗಿ. ನೀವು ಕೋರಿಯರ್ ಮೂಲಕ ಮಾದಕ ವಸ್ತುವನ್ನು ಪಾಸ್ ಪೋರ್ಟ್, ನಿಮ್ಮ ಆಧಾರ್ ಕಾರ್ಡ್ ಪುರಾವೆಯ ಮೂಲಕ ಮುಂಬೈ ಯಿಂದ ತೈವಾನ್ ಗೆ ಕಳುಹಿಸುತ್ತಿದ್ದಿರಾ ಅಂತಾ ನನಗೆ ಕರೆ ಮಾಡಿ ಹೇಳಿದ್ದಾನೆ.
ಆಗ ಯಾವುದೇ ಕೋರಿಯರ್ ಕಳಿಸುತ್ತಿಲ್ಲಎಂದು ದೂರುದಾರ ತಿಳಿಸಿದ್ದಾರೆ. ಆಗ ಇದು ಮಾದಕ ವಸ್ತು ಹಾಗೂ ಟ್ರಾವೆಲಿಂಗ್ ಪಾಸ್ ಪೋರ್ಟ್ ಗೆ ಸಂಬಂಧಿಸಿರುವುದಿರಂದ ಮುಂಬೈ ಪೊಲೀಸ್ ಗೆ ಕರೆ ಮಾಡಿ ಸಂಪರ್ಕ ಮಾಡುತ್ತೇವೆ ಎಂದು ಹೇಳಿದ್ದು, ಯಾರೋ ಅಪರಿಚಿತ ಪೊಲೀಸ್ ಅಧಿಕಾರಿಯವರಿಗೆ ಕರೆ ಸಂಪರ್ಕ ಮಾಡಿದಂತೆ ಮಾಡಿ ಆಧಾರ್ ಕಾರ್ಡ್ ನಂಬರ್ ಅನ್ನು ಪಡೆದುಕೊಂಡು ನೀವು ಮುಂಬೈಗೆ ಬಂದು ಈ ಬಗ್ಗೆ ದೂರು ನೀಡಬೇಕೆಂದು ಸೂಚಿಸಲಾಯಿತು.
ಆಗ ಅಲ್ಲಿಗೆ ಬರಲು ಆಗವುದಿಲ್ಲ ಎಂದು ಹೇಳಿದೆ. ನೀವು ಆನ್ ಲೈನ್ ಮೂಲಕವೂ ದೂರು ನೀಡಬಹುದು ಎಂದು ಹೇಳಿ Skype ID 8:live:.cid.402b28669145bf2c ಯನ್ನು ನೀಡಿದರು. ಈ ಸ್ಕೈಪ್ ಐಡಿಗೆ ನನ್ನ ಕರೆ ಸಂಪರ್ಕ ಮಾಡಿ ನನ್ನ ಆನ್ ಲೈನ್ ಸ್ಟೇಟ್ ಮೆಂಟ್ ಪಡೆಯುವುದಾಗಿ ಹೇಳಿದ್ದಾರೆ. ನಿಮ್ಮ ಆಧಾರ ಕಾರ್ಡ್ ನಿಂದ ಮುಂಬೈ ಆಕ್ಸಿಸ್ ಬ್ಯಾಂಕ್ ಖಾತೆ ತೆರೆದಿದ್ದು, ಈ ಖಾತೆಯ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡಿದ ಹಣ ವರ್ಗಾವಣೆ ಆಗಿದೆ. ಮನಿ ಲ್ಯಾಂಡರಿಂಗ್ ನಲ್ಲಿ ನಿಮ್ಮ ಖಾತೆ ಬಳಕೆಯಾಗಿದೆ ಅಂತಾ ಹೇಳಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಆರ್ ಬಿ ಐ ಏಜೆಂಟ್ ಖಾತೆಗೆ ವರ್ಗಾಯಿಸುವಂತೆ ಹೇಳಲಾಯಿತು.ಇದಕ್ಕೆ ಸಂಬಂಧಿಸಿದಂತೆ ವೆರಿಫಿಕೇಷನ್ ಮಾಡಿದ ನಂತರ ನಿಮಗೆ ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ಹಾಕುತ್ತೇವೆ ಅಂತಾ ಹೇಳಿ 3,57,780 ರೂ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ನಂತರ ಹಣ ಕಡಿತವಾದ ಬಳಿಕ ಅಪರಿಚಿತನು ಹಣವನ್ನು ನನ್ನ ಖಾತೆಗೆ ಹಾಕಲಿಲ್ಲ. ಆಗ ಆನ್ ಲೈನ್ ಮೂಲಕ ಅಪರಿಚಿತ ವ್ಯಕ್ತಿಗಳಿಂದ ವಂಚನೆಗೆ ಒಳಗಾಗಿರುವುದಾಗಿ ಅನುಮಾನ ಬಂದ ತಕ್ಷಣ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಕಂಪ್ಲೆಂಟ್ ಟ್ರೋಲ್ ಫ್ರೀ ನಂಬರ್ 1930 ಗೆ ಕಾಲ್ ಮಾಡಿ ಆನ್ ಲೈನ್ ಸೈಬರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿ ದೂರಿನ ನಂಬರ್ ಪಡೆದಿದ್ದಾರೆ. ರೂ 3,57,780 ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಸಾರ್ವಜನಿಕರ ಗಮನಕ್ಕೆ:
ಸೈಬರ್ ವಂಚಕರು, ಆನ್ ಲೈನ್ ವಂಚಕರು ವಿವಿಧ ರೀತಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದು, ಸಾರ್ವಜನಿಕರು ಈ ತರಹದ ಅನಾಮಧೇಯ ಕರೆಗಳಿಗೆ ಸ್ಪಂದಿಸದೇ, ವಂಚನೆಗಳಿಗೆ ಒಳಗಾಗದೆ ಜಾಗೃತರಾಗಬೇಕು. ಇಂತಹ ಕರೆಗಳು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಹೇಳಿದ್ದಾರೆ.