ಭುವನೇಶ್ವರ: ಒಡಿಶಾ ಸಚಿವಿಯೊಬ್ಬರ ಪತ್ರಿಕಾಗೋಷ್ಠಿಯ ವೇಳೆ ಗಂಜಾಂ ಜಿಲ್ಲೆಯ ಚಿಕಿಟಿ ಕ್ಷೇತ್ರದ ಬಿಜೆಪಿ ಶಾಸಕ ಮನೋರಂಜನ್ ದ್ಯಾನ್ ಸಮಂತ್ರಾಯ್ ಅವರು ವ್ಯಕ್ತಿಯೊಬ್ಬರನ್ನು ತಬ್ಬಿಕೊಂಡು ಮುತ್ತಿಡಲು ಯತ್ನಿಸುತ್ತಿದ್ದಾರೆ ಎಂಬ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದ ಸೃಷ್ಟಿಸಿದೆ.
ಈ ವಿಡಿಯೋ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋ ಎಂದು ಶಾಸಕರ ಪತ್ನಿ ಮೀನಾ ಸಾಹು ಸ್ಪಷ್ಟಪಡಿಸಿದ್ದಾರೆ.
ವ್ಯಕ್ತಿಗೆ ಶಾಸಕ ಮುತ್ತು ಕೊಡುವ ವಿಡಿಯೋ:
ଗଞ୍ଜାମ ଭାସିଗଲା ବନ୍ୟାରେ 😢
ବିଜେପି ନେତା ଉଛୁଳୁଛନ୍ତି ଖୁସିରେ 😠#Ganjam #CycloneArnab #BJPAntiPeople #ହଟାଅବିଜେପି #JababMaguchiOdisha pic.twitter.com/EEIux6zSfD— Biju Janata Dal (@bjd_odisha) November 13, 2026
ಪ್ರವಾಹ ಪರಿಸ್ಥಿತಿಯ ಕುರಿತು ಮೀನುಗಾರಿಕೆ ಮತ್ತುಾಣ ಸಂಪನ್ಮೂಲ ಅಭಿವೃದ್ಧಿ ಸಚಿವ ಗೋಕುಲಾನಂದ ಮಲ್ಲಿಕ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. ವಿರೋಧ ಪಕ್ಷವಾದ ಬಿಜು ಜನತಾ ದಳ (BJD) ಈ ಕ್ಲಿಪ್ ಅನ್ನು ಎಕ್ಸ್ (X) ತಾಣದಲ್ಲಿ ಹಂಚಿಕೊಂಡಿತ್ತು. ಆದರೆ, ಇದು ವಿಪಕ್ಷಗಳ ರಾಜಕೀಯ ಕುತಂತ್ರವಾಗಿದ್ದು, ಶಾಸಕರ ಹೆಸರಿಗೆ ಮಸಿ ಬಳಿಯಲು ಎಐ ತಂತ್ರಜ್ಞಾನ ಬಳಸಿ ವೀಡಿಯೊ ತಿರುಚಲಾಗಿದೆ ಎಂದು ಶಾಸಕರ ಪತ್ನಿ ಮೀನಾ ಸಾಹು ಆರೋಪಿಸಿದ್ದಾರೆ.
ಎಐ ಬಳಸಿ ವೀಡಿಯೊ ತಿರುಚಿದ ಆರೋಪ: ಸಚಿವರ ಪತ್ರಿಕಾಗೋಷ್ಠಿಯ ಅಸಲಿ ವಿಡಿಯೋ ಹಂಚಿಕೊಂಡಿರುವ ಶಾಸಕರ ಪತ್ನಿ ಮೀನಾ ಸಾಹು, ಬಿಜಿಡಿ (BJD) ಸಾಮಾಜಿಕ ಜಾಲತಾಣ ತಂಡವು ಎಐ ಸೃಷ್ಟಿತ ನಕಲಿ ಕ್ಲಿಪ್ ವೈರಲ್ ಮಾಡಿದೆ ಎಂದಿದ್ದಾರೆ.
ಬಿಜೆಪಿ ಶಾಸಕರ ವಿರುದ್ಧ ವಿರೋಧ ಪಕ್ಷಗಳ ವಾಗ್ದಾಳಿ: ಪ್ರವಾಹ ಸಂಕಷ್ಟದ ನಡುವೆ ಬಿಜೆಪಿ ನಾಯಕರು ಇಂತಹ ವರ್ತನೆ ತೋರುತ್ತಿದ್ದಾರೆ ಎಂದು ವಿಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿವೆ.
ಪೊಲೀಸ್ ತನಿಖೆಗೆ ಒತ್ತಾಯ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸುಳ್ಳು ವೀಡಿಯೊ ಹಬ್ಬಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬ್ರಹ್ಮಪುರ ಪೊಲೀಸರಿಗೆ ಮನವಿ ಮಾಡಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಲು ಶಾಸಕ ಮನೋರಂಜನ್ ದ್ಯಾನ್ ಸಮಂತ್ರಾಯ್ ಹಾಗೂ ಸ್ಥಳೀಯ ಬಿಜೆಪಿ ವಕ್ತಾರರು ಲಭ್ಯವಾಗಿಲ್ಲ. ವೈರಲ್ ಆಗಿರುವ ವೀಡಿಯೊದ ನೈಜತೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲವಾದರೂ, ಎಐ ತಂತ್ರಜ್ಞಾನದ ದುರ್ಬಳಕೆ ಕುರಿತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.





Leave a comment