ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮತ್ತೆ ಇಳಿಮುಖದತ್ತ ಸಾಗುತ್ತಿರುವ ಅಡಿಕೆ ಧಾರಣೆ: ಕಂಗಾಲಾದ ರೈತರು, ಮತ್ತೊಂದು ಸಂಕಷ್ಟ ತಂದಿಟ್ಟಿದೆ ಫಜೀತಿ…!

On: February 10, 2024 3:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:10-02-2024

ದಾವಣಗೆರೆ: ಅಡಿಕೆ ಬೆಳೆಗಾರರು ವರ್ಷದ ಆರಂಭದಲ್ಲಿ ಖುಷಿಗೊಂಡಿದ್ದರು. ಕಳೆದ ವರ್ಷದ ಕೊನೆಯಲ್ಲಿ ಸ್ವಲ್ಪ ಆತಂಕ ಮನೆ ಮಾಡಿದ್ದರೂ ಈ ವರ್ಷ ಲಾಭದಾಯಕವಾಗುತ್ತದೆ, ಅಡಿಕೆ ಧಾರಣೆ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದರು. ಕ್ವಿಂಟಾಲ್ 52 ಸಾವಿರದಿಂದ 60 ಸಾವಿರ ರೂಪಾಯಿ ಆಗಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಇದಕ್ಕೆ ಪೂರಕ ಎಂಬಂತೆ ಆರಂಭದಲ್ಲಿ ಧಾರಣೆಯು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದ್ರೆ, ಇದೀಗ ಕುಸಿಯುತ್ತಾ ಸಾಗುತ್ತಿದ್ದು ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ 2,200 ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆಗೆ ಕಡಿಮೆಯಾಗಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ಹದಿನೈದು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ನಿರಂತರವಾಗಿ ಕುಸಿಯುತ್ತ ಸಾಗುತ್ತಿದೆ. ವರ್ಷದ ಆರಂಭದಲ್ಲಿ 200, 300, 400 ರೂಪಾಯಿಯಷ್ಟು ಏರಿಕೆ ಕಂಡಿದ್ದ ಅಡಿಕೆ ದರ ಶುಕ್ರವಾರದ ಮಾರುಕಟ್ಟೆಯಲ್ಲಿ 2200 ರೂಪಾಯಿಗೂ ಅಧಿಕ ಕಡಿಮೆ ಆಗಿರುವುದರಿಂದ ಬೆಳೆಗಾರರು ಅಡಿಕೆಯನ್ನು ಮಾರುಕಟ್ಟೆಗೆ ಬಿಡಬೇಕೋ ಬೇಡವೋ ಎಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿಯೇ ಮಾರಾಟ ಹೆಚ್ಚು. ಉಳಿದಂತೆ ಹೊನ್ನಾಳಿ, ಹರಿಹರದಲ್ಲಿಯೂ ಅಡಿಕೆ ತೋಟಗಳಿವೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಜಗಳೂರು ಸೇರಿದಂತೆ ಅಲ್ಲಲ್ಲಿ ಅಡಿಕೆ ತೋಟಗಳಿದ್ದು, ಅಡಿಕೆ ಕೊಯ್ಲು ಮುಗಿದಿದೆ. 60 ಸಾವಿರ ರೂಪಾಯಿ ಗಡಿ ಮುಟ್ಟಬಹುದು ಎಂದುಕೊಂಡಿದ್ದ ರೈತರಲ್ಲಿ ಮೊಗದಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ.

ಜನವರಿ ತಿಂಗಳಿನಲ್ಲಿ ಏರುಮುಖದತ್ತ ಸಾಗಿದ್ದ ಅಡಿಕೆ ಧಾರಣೆಯು ಕಳೆದ ಹದಿನೈದು ದಿನಗಳಿಂದ ಹೆಚ್ಚಾಗಿ ಕುಸಿತ ಕಾಣುತ್ತಿರುವುದು ಯಾಕೆ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಅಡಿಕೆ ಧಾರಣೆಯು ಕುಸಿತ ಕಾಣುವಾಗ 200, 300, 500 ರೂಪಾಯಿ ಆಗುತಿತ್ತು. ಆದ್ರೆ, ಒಮ್ಮೆಲೆ 2200 ರೂಪಾಯಿ ಧಾರಣೆ ಕುಸಿದಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಜನವರಿ 15 ರಿಂದ ಇಳಿಮುಖದತ್ತ ಸಾಗುತ್ತಿರುವ ಅಡಿಕೆ ಧಾರಣೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುತ್ತೋ? ಏರಿಕೆ ಆಗುತ್ತೋ ಎಂಬ ಗೊಂದಲವೂ ಮೂಡುವಂತೆ ಮಾಡಿದೆ. ಒಂದು ತಿಂಗಳು ಏರುಮುಖ, ಮತ್ತೊಂದು ತಿಂಗಳು ಇಳಿಮುಖ ಎಂಬಂತಾಗಿದೆ. ದೊಡ್ಡ ದೊಡ್ಡ ಅಡಿಕೆ ಬೆಳೆಗಾರರು ಅಡಿಕೆ ಸಂಗ್ರಹಿಸಿಟ್ಟು, ಒಳ್ಳೆಯ ಧಾರಣೆ ಬಂದಾಗ ಮಾರುಕಟ್ಟೆಗೆ ಬಿಡುತ್ತಾರೆ. ಒಂದು ಎಕರೆ, ಎರಡು ಎಕರೆ, ಮೂರು ಎಕರೆ ಅಡಿಕೆ ತೋಟ ಹೊಂದಿರುವವರೇ ಹೆಚ್ಚು. ಇಂಥವರು ವರ್ಷದಲ್ಲಿ ಬಂದ ಅಡಿಕೆ ಮಾರುಕಟ್ಟೆಗೆ ಬಿಟ್ಟು ಸಾಲ ತೀರಿಸಲು ಮುಂದಾಗುತ್ತಾರೆ. ಅಡಿಕೆ ಧಾರಣೆ ಕುಸಿತ ಕಂಡಿರುವುದರಿಂದ ಅಡಿಕೆ ಬಿಟ್ಟು ಹಣ ಪಡೆಯಬೇಕೋ ಇನ್ನು ಸ್ವಲ್ಪ ದಿನಗಳ ಕಾಯಬೇಕೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.

ಪ್ರತಿ ಕ್ವಿಂಟಲ್ ಅಡಿಕೆಯ ಗರಿಷ್ಠ‌ ಧಾರಣೆ 48,399. ಕನಿಷ್ಠ ಬೆಲೆ 45,599 ರೂಪಾಯಿ ಆಗಿದೆ. ಕಳೆದ ವರ್ಷದ ಜೂನ್ ನಲ್ಲಿ 50 ಸಾವಿರ ರೂಪಾಯಿ ಗಡಿ ದಾಟಿದ್ದ ಅಡಿಕೆ ಧಾರಣೆ ಅತಿ ಹೆಚ್ಚು ಅಂದರೆ ಜುಲೈ ತಿಂಗಳಿನಲ್ಲಿ ದಾಖಲಿಸಿತ್ತು. ಕ್ವಿಂಟಲ್ ಅಡಿಕೆ 57 ಸಾವಿರ ರೂಪಾಯಿ ದಾಖಲಿಸಿತ್ತು. ಅದಾದ ಒಂದೇ ತಿಂಗಳಿಗೆ ಬರೋಬ್ಬರಿ 9 ಸಾವಿರ ರೂಪಾಯಿ ಕುಂಠಿತವಾಗಿತ್ತು. ಹಾಗಾಗಿ, ಈಗ ಇರುವ ದರವೇ ಉತ್ತಮ, ಅಡಿಕೆ ಬಿಡುತ್ತೇವೆ ಎಂದು ಕೆಲ ಅಡಿಕೆ ಬೆಳೆಗಾರರು ಹೇಳಿದರೆ, ಮತ್ತೆ ಕೆಲವರು ಏರಿಕೆಯಾಗಬಹುದೆಂಬ ವಿಶ್ವಾಸದಲ್ಲಿದ್ದಾರೆ.

2023ರ ಆಗಸ್ಟ್ ತಿಂಗಳಿನಲ್ಲಿ ಶುರುವಾದ ಅಡಿಕೆ ಧಾರಣೆ ಕುಸಿತ ಡಿಸೆಂಬರ್ ತಿಂಗಳವರೆಗೆ ಇತ್ತು. ವರ್ಷದ ಕೊನೆಯಲ್ಲಿ ಸ್ವಲ್ಪ ಮಟ್ಟದಲ್ಲಿ ಏರಿಕೆ ಕಂಡರೂ, ಜನವರಿ ತಿಂಗಳಿನಲ್ಲಿಯೂ ಇದು ಮುಂದುವರಿದಿತ್ತು.ಆದ್ರೆ, ಕಳೆದ ತಿಂಗಳ ಕೊನೆ ಹಾಗೂ ಫೆಬ್ರವರಿ ಮೊದಲ ವಾರ ಹಾಗೂ ಈ ವಾರವೂ ದರ ಕುಸಿತ ಆಗಿದ್ದು, ಅನ್ನದಾತರು ಕಂಗಾಲಾಗುವಂತೆ ಮಾಡಿದೆ.

ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ 48,399 ರೂಪಾಯಿ ಆಗಿದ್ದರೆ, ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 45,599 ರೂಪಾಯಿ ಆಗಿದೆ. 47,548 ರೂ. ಸರಾಸರಿ ಇದ್ದು, ಬೆಟ್ಟೆ ಅಡಿಕೆ ಗರಿಷ್ಠ 35,629 ರೂ‌.ಗೆ ವಹಿವಾಟು ಮುಗಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment