SUDDIKSHANA KANNADA NEWS/ DAVANAGERE/DATE:01_09_2025
ದಾವಣಗೆರೆ: ಮಹಾನಗರಪಾಲಿಕೆ ವತಿಯಿಂದ ಜಲಸಿರಿ ಯೋಜನೆಯಡಿಯಲ್ಲಿ ನೀರಿನ ಶುಲ್ಕ ಪಾವತಿಸುತ್ತಿರುವ ನೀರಿನ ಬಳಕೆಗೆ ಅನುಗುಣವಾಗಿ ನಿಗದಿಪಡಿಸಿರುವ ನೀರಿನ ದರಗಳ ಪ್ರಕಾರ ಪರಿಮಾಣಾಧಾರಿತ ನೀರಿನ ಶುಲ್ಕದ ಬಿಲ್ಲುಗಳನ್ನು ನೀಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: “ಒಳ್ಳೆಯ ಸ್ಥಾನಮಾನಕ್ಕೆಂದು ಬರುವವರ ತಡೆಯಲು ಸಾವಿರಾರು ಪಡೆಗಳಿರುವ ದುಷ್ಟ ಸಮಾಜ ನಮ್ಮದು”: ಜಿ. ಬಿ. ವಿನಯ್ ಕುಮಾರ್ ಬೇಸರ
ಬಿಲ್ಲಿನಲ್ಲಿ ನಮೂದಿಸಿರುವ ನೀರಿನ ಶುಲ್ಕವನ್ನು ಕಡ್ಡಾಯವಾಗಿ ಮಹಾನಗರಪಾಲಿಕೆಯ ಆವರಣದಲ್ಲಿರುವ ಗ್ರಾಹಕರ ಸೇವಾಕೇಂದ್ರ, ನಿಟ್ಟುವಳ್ಳಿ ಉದ್ಯಾನವನದಲ್ಲಿರುವ ಗ್ರಾಹಕರ ಸೇವಾ ಕೇಂದ್ರದಲ್ಲಿ ಮತ್ತು ಆಶ್ರಯ ಆಸ್ಪತ್ರೆ ಪಕ್ಕದ ಮಹಾನಗರಪಾಲಿಕೆಯ ವಲಯ ಕಛೇರಿ-03 ರ ಜಲಸಿರಿ ಕೌಂಟರ್‍ನಲ್ಲಿ ನಗದು ರೂಪದಲ್ಲಿ ಪಾವತಿಸಬೇಕು..
ಆನ್ ಲೈನ್ ಮುಖಾಂತರ ಕೂಡ ಪಾವತಿಸಲು ಜಲಸಿರಿ ಆಪ್ಲಿಕೇಶನ್ ಅಥವಾ www.Davangerewater.co.in ಮುಖಾಂತರವೂ ಪಾವತಿಸಬಹುದು. ನೀರಿನ ಶುಲ್ಕವನ್ನು ನಿಗಧಿತ ಸಮಯದಲ್ಲಿ ಪಾವತಿಸದೇ ಇದ್ದಲ್ಲಿ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗುವುದು.
24/7 ನೀರು ಸರಬರಾಜಿಗೆ ಸಂಬಂದಿಸಿದಂತೆ ಯಾವುದೇ ತೊಂದರೆಗಳಿದ್ದಲ್ಲಿ ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆ 9036544419 ವನ್ನು ಸಂಪರ್ಕಸಬಹುದೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.