SUDDIKSHANA KANNADA NEWS/ DAVANAGERE/ DATE:14-08-2023
ದಾವಣಗೆರೆ (Davanagere): ದಾವಣಗೆರೆ (Davanagere) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮಹಾನಗರ ಪಾಲಿಕೆಯ ರಾಜನಹಳ್ಳಿ ಸಗಟು ನೀರು ಸರಬರಾಜು ಕೊಳವೆಯು ಒಡೆದಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿರುವುದರಿಂದ ನಗರ ವ್ಯಾಪ್ತಿಯಲ್ಲಿ ಇಂದಿನಿಂದ ಆಗಸ್ಟ್ 17ರವರೆಗೆ ಕುಡಿಯುವ ನೀರಿನ ಸರಬರಾಜಿನಲ್ಲಿ
ವ್ಯತ್ಯಯವಾಗಲಿದೆ. ನೀರು ಸರಬರಾಜು ವ್ಯತ್ಯಯ ಆಗುವುದರಿಂದ ಜನರು ಸಹಕರಿಸಬೇಕು ಎಂದು ದಾವಣಗೆರೆ (Davanagere) ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:
Sulekere Big Story: ಕುಡಿಯಲು ಯೋಗ್ಯವಲ್ಲ ಸೂಳೆಕೆರೆ ನೀರು: ಜೀವಜಲಚರ, ಕೃಷಿಗೆ ಕಂಟಕನಾ? ಆತಂಕದಲ್ಲಿ ಮತ್ಸ್ಯ ಪ್ರಿಯರು, ರೈತಾಪಿ ವರ್ಗ…!
ಮೂರು ದಿನಗಳ ಕಾಲ ನೀರಿನಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೆಚ್ಚು ನೀರು ಬಳಸದೇ ಎಷ್ಟೋ ಬೇಕೋ ಅಷ್ಟು ಬಳಸಿಕೊಳ್ಳಬೇಕು. ರಾಜನಹಳ್ಳಿ ಸಗಟು ನೀರು ಸರಬರಾಜು ಕೇಂದ್ರದಿಂದ ಕೊಳವೆ ಮೂಲಕ ನಗರಕ್ಕೆ ನೀರು ಪೂರೈಸಲಾಗುತಿತ್ತು. ಈ ಕೊಳವೆ ಒಡೆದು ಹೋಗಿದೆ. ಇದನ್ನು ಸರಿಪಡಿಸಲು ಕನಿಷ್ಠ ಎಂದರೂ ಮೂರು ದಿನಗಳಾದರೂ ಬೇಕಾಗುತ್ತದೆ. ಹಾಗಾಗಿ, ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.